ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚೆನ್ನೈ ಗೆ ಸೋಲುಣಿಸಿದ ನಾರ್ತ್ ಈಸ್ಟ್ ಮೂರನೇ ಸ್ಥಾನಕ್ಕೆ

ISL: Ogbeche’s late strike takes NorthEast to third spot

ಗುವಾಹಟಿ, ಜನವರಿ 27: ದ್ವಿತೀಯಾರ್ಧದಲ್ಲಿ ಚೆನ್ನೈಯಿನ್ ಎಫ್ ಸಿ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆದರೆ ಹೆಚ್ಚಿನ ಅವಕಾಶ ಪಡೆದರೂ ಗೋಲುಗಳಿಸುವಲ್ಲಿ ನಾರ್ತ್ ಈಸ್ಟ್ ವಿಫಲವಾಗಿತ್ತು. ಎರಡು ಉತ್ತಮ ಕಾರ್ನರ್ ಸಿಕ್ಕರೂ ನಾರ್ತ್ ಈಸ್ಟ್ ಗೋಲು ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ.

ಐಎಸ್‌ಎಲ್‌ 2019: ಕೊಚ್ಚಿಯಲ್ಲಿ ಎಟಿಕೆ-ಕೇರಳ ಸಮಬಲದ ಹೋರಾಟ ಐಎಸ್‌ಎಲ್‌ 2019: ಕೊಚ್ಚಿಯಲ್ಲಿ ಎಟಿಕೆ-ಕೇರಳ ಸಮಬಲದ ಹೋರಾಟ

87ನೇ ನಿಮಿಷದಲ್ಲಿ ಬಾರ್ತಲೋಮ್ಯೊ ಒಗ್ಬಚೆ ಗಳಿಸಿದ ಗೋಲು ನಾರ್ತ್ ಈಸ್ಟ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಒಗ್ಬಚೆ ಲೀಗ್ ನಲ್ಲಿ 10ನೇ ಗೋಲು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿ, ಫೆರಾನ್ ಕೊರೊಮಿನಾಸ್ ಅವರೊಂದಿಗೆ ಅಗ್ರ ಸ್ಥಾನ ಹಂಚಿಕೊಂಡರು. 1-0 ಗೋಲಿನಿಂದ ಚೆನ್ನೈ ತಂಡವನ್ನು ಮಣಿಸಿದ ನಾರ್ತ್ ಈಸ್ಟ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಚೆನ್ನೈ ಕೊನೆಯಸ್ಥಾನವನ್ನು ಭದ್ರಪಡಿಸಿಕೊಂಡಿತು.

ISL: Ogbeche’s late strike takes NorthEast to third spot

ಗೋಲಿಲ್ಲದ ಪ್ರಥಮಾರ್ಧ
ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು. ಆದರೆ ಆತಿಥೇಯ ನಾರ್ತ್ ಈಸ್ಟ್ ತಂಡ ಗೋಲು ಗಳಿಸಲು ಹಲವಾರು ಅವಕಾಶಗಳನ್ನು ಗಳಿಸಿದರೂ ಅದನ್ನು ಗೋಲಾಗಿಸುವಲ್ಲಿ ವಿಲವಾಯಿತು. ಫೆಡರಿಕೊ ಗೆಲ್ಲೆಗೊ ಹಾಗೂ ಒಗ್ಬಚೆ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಚೆನ್ನೈ ತಂಡದ ಡಿಫೆನ್ಸ್ ವಿಭಾಗ ಸೊರಗಿರುವುದು ಸ್ಪಷ್ಟವಾಗಿತ್ತು. ಚೆಂಡು ಹೆಚ್ಚು ಕಾಲ ನಾರ್ತ್ ಈಸ್ಟ್‌ನ ಹಿಡಿತದಲ್ಲಿತ್ತು. ಸುಮಾರು ಐದು ಬಾರಿ ಅವಕಾಶ ಉತ್ತಮವಾಗಿತ್ತು. ನಾರ್ತ್ ಈಸ್ಟ್ ಯುನೈಟೆಡ್ ಶೇ. 63 ಭಾಗದಷ್ಟು ಚೆಂಡನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿತ್ತು.

ಈ ಅಂಕಿ ಅಂಶವನ್ನು ಗಮನಿಸಿದಾಗ ಚೆನ್ನೈ ತಂಡ ಇನ್ನೂ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿಲ್ಲ. ಹಾಲಿ ಚಾಂಪಿಯನ್‌ನಂತೆ ತಂಡ ಆಟಗಾರರು ಪ್ರದರ್ಶನ ನೀಡಿಲ್ಲ ಎಂಬುದು ಸ್ಪಷ್ಟವಾಗಿತ್ತು. ನಾರ್ತ್ ಈಸ್ಟ್ ತಂಡಕ್ಕೆ ಕನಿಷ್ಠ ಮೂರು ಬಾರಿ ನೇರವಾಗಿ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಗುರಿ ಇಲ್ಲದ ತುಳಿತ ಹಾಗೂ ಚೆನ್ನೈನ ಗೋಲ್‌ಕೀಪರ್ ಅವರ ನಿಖರತೆ ಗೋಲು ಗಳಿಕೆಗೆ ಅಡ್ಡಿಯನ್ನುಂಟು ಮಾಡಿತು.

ISL: Ogbeche’s late strike takes NorthEast to third spot

ಗಣರಾಜ್ಯೋತ್ಸವ ದಿನದಂದು ನಡೆದ ಇಂಡಿಯನ್ ಸೂಪರ್ ಲೀಗ್‌ನ 61ನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಚೆನ್ನೈಯಿನ್ ಎಫ್ಸಿ ತಂಡಗಳು ಗುವಾಹಟಿಯಲ್ಲಿ ಮುಖಾಮುಖಿಯಾದವು.

ನಾರ್ತ್ ಈಸ್ಟ್ ಈ ಬಾರಿ ಐಎಸ್‌ಎಲ್‌ನಲ್ಲಿ ಉತ್ತಮ ಆರಂಭ ಕಂಡಿದ್ದರೂ ಇತ್ತೀಚಿನ ನಾಲ್ಕು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿದೆ. ಆದರೂ ನಾಲ್ಕು ಪಂದ್ಯಗಳಲ್ಲಿ ಸೋತಿರುವುದು ಒಂದು ಪಂದ್ಯದಲ್ಲಿ ಮಾತ್ರ. ಕಳೆದ ವರ್ಷ ನಾರ್ತ್ ಈಸ್ಟ್ ಗೆದ್ದಿರುವುದು ಕೇವಲ ಮೂರು ಪಂದ್ಯಗಳು.

ಆದರೆ ಈ ಬಾರಿ ಐದು ಪಂದ್ಯಗಳಲ್ಲಿ ಜಯ ಗಳಿಸಿದೆ. ತಂಡದ ಜಯದಲ್ಲಿ ಬಾರ್ತಲೋಮ್ಯೊ ಒಗ್ಬಚೆ ಹಾಗೂ ಗೆಲ್ಲೆಗೊ ಇದುವರೆಗೂ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರವಾಸಿ ತಂಡ ಚೆನ್ನೈಯಿನ್ ಅಸಾಯಕತೆ ಹಾಗೂ ಹತಾಶೆಯಿಂದಲೇ ಅಂಗಣಕ್ಕಿಳಿಯಿತು. ಅವರ ಹೋರಾಟ ಏನಿದ್ದರೂ ಮುಂದಿನ ಎಎಫ್ಸಿ ಕಪ್‌ಗಾಗಿ ತಂಡವನ್ನು ಉತ್ತಮಪಡಿಸುವುದಾಗಿದೆ.

ISL: Ogbeche’s late strike takes NorthEast to third spot

ಆಡಿರುವ 12 ಪಂದ್ಯಗಳಲ್ಲಿ ಕೇವಲ 5 ಅಂಕಗಗಳನ್ನು ಗಳಿಸಿರುವ ತಂಡಕ್ಕೆ ಈಗ ನಾಲ್ಕರ ಹಂತ ತಲಪುವುದು ದೂರದ ಹಾದಿ. ತಂಡ ಐಎಸ್‌ಎಲ್‌ನಿಂದ ಹೊರ ನಡೆಯುವ ಹಾದಿಯಲ್ಲಿದೆ. ಹಾಲಿ ಚಾಂಪಿಯನ್ ಆಗಿರುವ ಕಾರಣ ಚೆನ್ನೈಯಿನ್ ಘನತೆಯನ್ನು ಕಾಯ್ದುಕೊಳ್ಳಲು ಉತ್ತಮ ಹೋರಾಟ ನೀಡಲು ಸಜ್ಜಾಯಿತು.

Story first published: Sunday, January 27, 2019, 11:37 [IST]
Other articles published on Jan 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X