ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ : ಜೆಮ್ಷೆಡ್ಪುರದಲ್ಲಿ ಪುಣೆ ಅಬ್ಬರ, ಪ್ಲೇ ಆಫ್ ಆಸೆ ಜೀವಂತ

ISL: Pune City blow for Jamshedpurs play-off hopes

ಜೆಮ್ಷೆಡ್ಪುರ ಫೆಬ್ರವರಿ 16 : ರಾಬಿನ್ ಸಿಂಗ್ ( 17 ಹಾಗೂ 65ನೇ ನಿಮಿಷ ), ಮಾರ್ಸೆಲೋ ಪೆರೇರಾ (45ನೇ ನಿಮಿಷ ), ಆಶಿಕ್ ಕುರುನಿಯನ್ (70 ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಪುಣೆ ಸಿಟಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜೆಮ್ಷೆಡ್ಪುರ 4-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಸೆಮಿೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಆತಿಥೇಯ ಜೆಮ್ಷೆಡ್ಪುರ ತಂಡದ ಪರ ಕಾರ್ಲೋಸ್ ಕಾಲ್ವೋ 76ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಪ್ರಥಮಾರ್ಧದಲ್ಲೇ ಜಯದ ಹೆಜ್ಜೆ : ಪುಣೆ ಸಿಟಿ ತಂಡ ಪ್ರಥಮ ಅವಧಿಯಲ್ಲೇ ಜಯಕ್ಕೆ ಅಗತ್ಯವಿರುವ ಗೋಲು ಗಳಿಸಿ ವೇದಿಕೆ ಸಿದ್ಧಪಡಿಸಿಕೊಂಡಿತು. ಪಂದ್ಯ ಆರಂಭಗೊಂಡ 17ನೇ ನಿಮಿಷದಲ್ಲೇ ರಾಬಿನ್ ಸಿಂಗ್ ಗಳಿಸಿದ ಗೋಲಿನಿಂದ ಪ್ರವಾಸಿ ತಂಡ ಮೇಲುಗೈ ಸಾಧಿಸಿತು. ಎಡ ಭಾಗದಲ್ಲಿ ಡಿಗೋ ಕಾರ್ಲೋಸ್ ತುಳಿದ ಚೆಂಡನ್ನು ಕಮಲ್ಜಿತ್ ಸಿಂಗ್ ಉತ್ತಮ ರೀತಿಯಲ್ಲಿ ತಡೆಯಲೆತ್ನಿಸಿದರು. ಆದರೆ ಚೆಂಡು ಕೈಗೆ ತಗಲಿ ಮುಂದೆ ಸಾಗಿತು. ಇಯಾನ್ ಹ್ಯೂಮ್ ಅದನ್ನು ನಿಯಂತ್ರಿಸಲೆತ್ನಿಸಿದರು. ಆದರರೆ ರಾಬಿನ್ ಸಿಂಗ್ ಯಾವುದೇ ಪ್ರಮಾದವೆಸಗದೆ ಗೋಲ್ ಬಾಕ್ಸ್ ತಲುಪಿಸುವಲ್ಲಿ ಯಶಸ್ವಿಯಾದರು. ಪುಣೆಗೆ 1-0 ಅಂತರದಲ್ಲಿ ಮುನ್ನಡೆ.

ಐಎಸ್ಎಲ್: ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಬೆಂಗಳೂರು ಹೋರಾಟ ಐಎಸ್ಎಲ್: ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಬೆಂಗಳೂರು ಹೋರಾಟ

45ನೇ ನಿಮಿಷದಲ್ಲಿ ಪುಣೆ ತಂಡ ಆತಿಥೇಯ ಪ್ರೇಕ್ಷಕರನ್ನು ಮೌನಕ್ಕೆ ಸರಿಯುವಂತೆ ಮಾಡಿತು. ಮಾರ್ಸೆಲೊ ಪೆರೆರಾ ಗಳಿಸಿದ ಗೋಲು ಪುಣೆ ತಂಡಕ್ಕೆ 2-0 ಅಂತರದಲ್ಲಿ ಮುನ್ನಡೆ ತಂದುಕೊಟ್ಟಿತು. ಸುಬ್ರತೋಪಾಲ್ ಚೆಂಡನ್ನು ತಡೆಯಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

ಹೀರೋ ಇಂಡಿಯನ್ ಸೂಪರ್ ಲೀಗ್‌ನ 78ನೇ ಪಂದ್ಯದಲ್ಲಿ ಜೆಮ್ಷೆಡ್ಪುರ ಹಾಗೂ ಪುಣೆ ಸಿಟಿ ತಂಡಗಳು ಮುಖಾಮುಖಿಯಾದವು. ಇತ್ತಂಡಗಳಿಗೂ ಮೂರು ಅಂಕ ಹೊರತಾಗಿ ಬೇರೇನೂ ಬೇಕಾಗಿಲ್ಲ. ನಾಕೌಟ್ ಹಂತ ತಲಪುವುದಕ್ಕಾಗಿ ಇತ್ತಂಡಗಳು ಹೋರಾ ನಡೆಸುತ್ತಿವೆ. ಐದನೇ ಸ್ಥಾನದಲ್ಲಿರುವ ಜೆಮ್ಷೆಡ್ಪುರ ಗೆದ್ದರೂ ಅದೇ ಸ್ಥಾನದಲ್ಲಿ ಉಳಿಯಲಿದೆ. ಪುಣೆ ಗೆದ್ದರೂ ಅದೇ ಸ್ಥಾನದಲ್ಲಿ ಉಳಿಯಲಿದೆ.

ಆದರೆ ಇತರ ತಂಡಗಳ ಲಿತಾಂಶ ಈ ಎರಡು ತಂಡಗಳ ಮುನ್ನಡೆಯ ಮೇಲೆ ಪರಿಣಾಮ ಬೀರಬೇಕಾಗಿದೆ, ಜೆಮ್ಷೆಡ್ಪುರ ತಂಡ ಮುಂಬೈಗಿಂತ ೪ ಅಂಕ ಹಿಂದೆ ಬಿದ್ದಿದೆ. ಆತಿಥೇಯ ತಂಡದ ಡಿಫೆನ್ಸ್ ವಭಾಗ ಉತ್ತಮವಾಗಿದ್ದು ಕೇವಲ 16 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ. ಮುಂಬೈ ಸಿಟಿ ವಿರುದ್ಧದ ಜಯದೊಂದಿಗೆ ಟಾಟಾ ಪಡೆ ಈ ಪಂದ್ಯಕ್ಕೆ ಆಗಮಿಸಿದೆ. ಪುಣೆ ತಂಡ ಕೂಡ ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಪ್ಲೇ ಆಫ್ ಸ್ಥಾನದ ಸ್ಪರ್ಧೆಯಲ್ಲಿದೆ.

ಆದರೆ ಇತರ ತಂಡಗಳ ಫಲಿತಾಂಶವೂ ಪುಣೆಯ ಪರವಾಗಿಯೇ ಸಂಭವಿಸಬೇಕಾಗುತ್ತದೆ. ಪುಣೆಗೂ ಕೂಡ ಇಲ್ಲಿ ಜಯ ಬಿಟ್ಟರೆ ಬೇರೆ ಲಿತಾಂಶದ ಅಗತ್ಯವಿರುವುದಿಲ್ಲ. ಇತ್ತಂಡಗಳು ಡ್ರಾದಲ್ಲಿ ಕೊನೆಗೊಂಡರೇ ಇಲ್ಲಿಗೆ ಅವುಗಳ ಹೋರಾಟ ಕೊನೆಗೊಳ್ಳಲಿದೆ. ಆತಿಥೇಯರ ವಿರುದ್ಧ ಪುಣೆ ಇದುವರೆಗೂ ಸೋತಿಲ್ಲ.

Story first published: Sunday, February 17, 2019, 11:10 [IST]
Other articles published on Feb 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X