ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಜಯದೊಂದಿಗೆ ಒಡಿಶಾ ಎಫ್‌ಸಿ ಗೃಹಪ್ರವೇಶ

By Isl Media
ISL: Santana stars in Odisha FC’s Kalinga homecoming

ಭುವನೇಶ್ವರ್, ಡಿಸೆಂಬರ್ 27: ಅರಿದಾನೆ ಸ್ಯಾಂಟನಾ (28 ಮತ್ತು 45ನೇ ನಿಮಿಷ) ಗಳಿಸಿದ ಎರಡು ಗೊಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಒಡಿಶಾ ಎಫ್ ಸಿ ಮನೆಯಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯದ ಶುಭಾರಂಭ ಕಂಡಿದೆ. ಐಟಾರ್ ಮನ್ರಾಯ್ (28ನೇ ನಿಮಿಷ)ದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಪೈಪೋಟಿಯ ಪ್ರಥಮಾರ್ಧ
ಪ್ರಥಮಾರ್ಧದಲ್ಲಿ ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು. ಅರಿಡಾನೆ ಸ್ಯಾಂಟನಾ ಪ್ರಥಮಾರ್ಧದ ಹೀರೋ ಎನಿಸಿದರು. ಎರಡು ಗೋಲುಗಳನ್ನು ಗಳಿಸುವ ಮೂಲಕ ಒಡಿಶಾ 2-1 ಅಂತರದಲ್ಲಿ ಮೇಲುಗೈ ಸಾಧಿಸಿತು. 28ನೇ ನಿಮಿಷದಲ್ಲಿ ಸ್ಯಾಂಟನಾ ಗಳಿಸಿದ ಗೋಲಿನಿಂದ ಒಡಿಶಾ ಮೇಲುಗೈ ಸಾಧಿಸಿತು. ಮನೆಯಂಗಣದಲ್ಲಿ ಆತಿಥೇಯ ತಂಡವೇ ಮೊದಲ ಗೋಲು ಗಳಿಸಿ ಅಚ್ಚರಿ ಮೂಡಿಸಿತು. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ದಿಟ್ಟ ಹೋರಾಟ ನೀಡಿದ ಜೆಮ್ಷೆಡ್ಪುರ ತಂಡಕ್ಕೆ ಐಟರ್ ಮನ್ರಾಯ್ 38ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ಸಿಕ್ಕ ಪೆನಾಲ್ಟಿ ಅವಕಾಶವನ್ನು ಮನ್ರಾಯ್ ಎಲ್ಲಿಯೂ ಪ್ರಮಾದ ಮಾಡದೆ ಗೋಲು ತಂದುಕೊಟ್ಟರು. ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದಲ್ಲಿ ಸ್ಫೂರ್ತಿಯ ಆಟ ಮುಂದುವರಿಸಿದ ಒಡಿಶಾಕ್ಕೆ ಪ್ರಥಮಾರ್ಧದ ಕೊನೆಯ ಕ್ಷಣದಲ್ಲಿ ಗೋಲಿನ ಸಂಭ್ರಮ. ಈ ಬಾರಿಯೂ ಸ್ಯಾಂಟನಾ ಅವರ ಕಾಲ್ಚಳಕ ಯಶಸ್ಸು ತಂದುಕೊಟ್ಟಿತು. 45ನೇ ನಿಮಿಷದಲ್ಲಿ ಸ್ಯಾಂಟನಾ ಗಳಿಸಿದ ಗೋಲಿನಿಂದ ಆತಿಥೇಯ ತಂಡ 2-1 ಗೋಲಿನ ಅಂತರದಲ್ಲಿ ಮೇಲುಗೈ ಸಾಧಿಸಿತು.

ISL: Santana stars in Odisha FC’s Kalinga homecoming

ಕಳಿಂಗದಲ್ಲಿ ಸಂಭ್ರಮ
ಕಳಿಂಗ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆಯುವ ಹೀರೋ ಇಂಡಿಯನ್ ಸೂಪರ್ ಲೀಗ್ ಗೆ ಆತಿಥೇಯ ಒಡಿಶಾ ಎಫ್ ಸಿ ಹಾಗೂ ಜೆಮ್ಷೆಡ್ಪುರ ಎಫ್ ಸಿ ತಂಡಗಳು ಸಾಕ್ಷಿಯಾದವು. ಅಂಕ ಪಟ್ಟಿಯಲ್ಲಿ ಟಾಟಾ ಪಡೆ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ಎಫ್ ಸಿ ವಿರುದ್ಧ ಅನುಭವಿಸಿದ ಸೋಲು ತಂಡದ ಹಿನ್ನಡೆಗೆ ಕಾರಣವಾಯಿತು. ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡ ಪ್ರತಿಯೊಂದು ಪಂದ್ಯದಲ್ಲೂ ಕನಿಷ್ಠ ಒಂದು ಗೋಲು ನೀಡಿತ್ತು. ಕಳೆದ ನಾಲ್ಕು ಪಂದ್ಯಗಳಲ್ಲಿ 3 ಡ್ರಾ ಹಾಗೂ ಒಂದು ಸೋಲು ಅನುಭವಿಸಿತ್ತು. ಇತ್ತೀಚಿನ ಪಂದ್ಯಗಳಲ್ಲಿ ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸದ ಕಾರಣ ತಂಡ ಸಣ್ಣ ಬದಲಾವಣೆಯೊಂದಿಗೆ ಅಂಗಣಕ್ಕಿಳಿಯಲಿದೆ.

ಸರ್ಗಿಯೊ ಕ್ಯಾಸ್ಟೆಲ್ ಸಣ್ಣ ಪ್ರಮಾಣದಲ್ಲಿ ಗಾಯಗೊಂಡ ಕಾರಣ ಇಂದಿನ ಪಂದ್ಯ ಆಡುವುದು ಸಂಶಯವಾಗಿತ್ತು, ನೋಯ್ ಅಕೋಸ್ಟಾ ಹಾಗೂ ಪಿಟಿ ಕೂಡ ಆಡುವುದು ಸಂಶಯ. ಆತಿಥೇಯ ತಂಡಕ್ಕೆ ಮನೆಯಂಗಣವಾದ ಕಾರಣ ಆತ್ಮವಿಶ್ವಾಸ ಹೆಚ್ಚಿರುವುದು ಸಹಜ. ಅರಿಡಾನೆ ಸ್ಯಾಂಟನಾ. ಕ್ಸಿಸ್ಕೋ ಹೆರ್ನಾಂಡೀಸ್, ಜೆರ್ರಿ ಮಾವ್ಹಿಮಿಂಗ್ತಾಂಗ ಒಡಿಶಾ ತಂಡಕ್ಕೆ ಆಧಾರವಾಗಿದ್ದಾರೆ. ಗೊಲು ಗಳಿಸಲು ಉತ್ತಮ ಅವಕಾಶಗಳನ್ನು ನಿರ್ಮಿಸಿದರೂ ಗೋಲು ಗಳಿಸುವಲ್ಲಿ ವಿಫಲವಾಗುತ್ತಿತ್ತು. ಆದರೆ ಸ್ಯಾಂಟನಾ ಕಳೆದ ಮೂರು ಪಂದ್ಯಗಳಲ್ಲಿ ಗೋಲು ಗಳಿಸದಿರುವುದು ಆತಿಥೇಯ ತಂಡಕ್ಕೆ ಚಿಂತೆಯಾಗಿದೆ. ಆದರೂ ಈ ಪಂದ್ಯ ಕುತೂಹಲಕ್ಕೆ ಸಾಕ್ಷಿಯಾಗಲಿದೆ.

Story first published: Friday, December 27, 2019, 23:46 [IST]
Other articles published on Dec 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X