ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ ಯಶಸ್ಸು ಕೋವಿಡ್ ಭಯ ದೂರವಿಡುತ್ತದೆ: ಸೌರವ್ ಗಂಗೂಲಿ

ISL success will drive fear of COVID away: Sourav Ganguly

ನವದೆಹಲಿ: ಕೊರೊನಾ ಶುರುವಾದ ಬಳಿಕ ಭಾರತದಲ್ಲಿ ನಡೆಯುತ್ತಿರುವ ಚೊಚ್ಚಲ ದೊಡ್ಡ ಟೂರ್ನಿಯಾಗಿ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) ಗುರುತಿಸಿಕೊಳ್ಳಲಿದೆ. ಐಎಸ್‌ಎಲ್ ಯಶಸ್ವಿಯಾದರೆ ಉಳಿದ ಕ್ರೀಡಾಸ್ಪರ್ಧೆಗಳನ್ನು ಭಾರತದಲ್ಲಿ ನಡೆಸಲು ಸ್ಫೂರ್ತಿ ಬರುತ್ತದೆ. ಕೋವಿಡ್ ಭಯ ದೂರವಾಗುತ್ತದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಬ್ಯಾಟಿಂಗ್ ಮಾಡಿದ ಚಾಹಲ್ ಕಾಲೆಳೆದ ಡೇಲ್ ಸ್ಟೇನ್: ವಿಡಿಯೋಬ್ಯಾಟಿಂಗ್ ಮಾಡಿದ ಚಾಹಲ್ ಕಾಲೆಳೆದ ಡೇಲ್ ಸ್ಟೇನ್: ವಿಡಿಯೋ

ನವೆಂಬರ್ 20ರಿಂದ ಗೋವಾದಲ್ಲಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿ ಆರಂಭಗೊಳ್ಳಲಿದೆ. ಈ ಬಾರಿ ಒಟ್ಟು 11 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ. ಈ ಬಾರಿ ಹೆಚ್ಚಿಸಲಾಗಿರುವ ಎರಡು ತಂಡಗಳಲ್ಲಿ ಗಂಗೂಲಿ ಸಹ ಮಾಲೀಕತ್ವದ ಎಟಿಕೆ ಮೋಹನ್ ಬಗಾನ್ ತಂಡ ಕೂಡ ಸೇರಿದೆ.

ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದರಿಂದ ಭಾರತದ ಪ್ರತಿಷ್ಠಿತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ ಅನ್ನು ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲಾಗಿತ್ತು. ಐಪಿಎಲ್ ಯಶಸ್ವಿಯಾಗಿ ನಡೆದಿತ್ತು. ಭಾರತದಲ್ಲೇ ಫುಟ್ಬಾಲ್ ಟೂರ್ನಿ ನಡೆಸಲು ಮುಂದಾಗಿರುವುದಕ್ಕೆ ಗಂಗೂಲಿ ಬೆಂಬಲಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಡಿ ದಾಟುವಾಸೆ: ನೇಥನ್ ಲಿಯಾನ್ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಡಿ ದಾಟುವಾಸೆ: ನೇಥನ್ ಲಿಯಾನ್

'ಕೊರೊನಾ ಲಾಕ್‌ಡೌನ್ ಬಳಿಕ ಭಾರತದಲ್ಲಿ ನಡೆಯುತ್ತಿರುವ ಮೊದಲ ಲೈವ್ ಟೂರ್ನಿ ಐಎಸ್‌ಎಲ್. ಜೀವನವು ಸಾಮಾನ್ಯ ಸ್ಥಿತಿಗೆ ಮರಳಬೇಕಾಗಿರುವ ಕಾರಣಕ್ಕೆ ಇದು ತುಂಬಾ ಒಳ್ಳೆಯ ಸಂಗತಿ. ನಾವು ಮತ್ತೆ ಸಾಮಾನ್ಯ ಜನಜೀವನಕ್ಕೆ ಮರಳಬೇಕಿದೆ. ಭಯವನ್ನು ದೂರವಿಡಬೇಕಿದೆ,' ಎಂದು ಐಎಸ್‌ಎಲ್ ಜೊತೆ ಗಂಗೂಲಿ ಹೇಳಿದ್ದಾರೆ.

Story first published: Thursday, November 19, 2020, 23:20 [IST]
Other articles published on Nov 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X