ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಸ್ಥಿರ ಪ್ರದರ್ಶನ ನೀಡುತ್ತಿರೋ ಗೋವಾಕ್ಕೆ ಪ್ರಶಸ್ತಿ ಗೆಲ್ಲುವ ಗುರಿ

By Isl Media
ISL title will make consistent Goa complete

ಗೋವಾ, ಫೆಬ್ರವರಿ 25: ಹಿಂದಿನ ನಾಲ್ಕು ಆವೃತ್ತಿಯ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಫ್ಸಿ ಗೋವಾ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಲೀಗ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಗೋವಾ ತಂಡದ ಸಾಧನೆಯ ಬಗ್ಗೆ ಎದುರಾಳಿ ತಂಡದ ಅಭಿಮಾನಿಗಳಲ್ಲಿ ಹೊಟ್ಟೆ ಉರಿ ಹುಟ್ಟಿರುವುದು ಸಹಜ.

ಭಾರತ vs ಆಸ್ಟ್ರೇಲಿಯಾ: ಟಿ20 ದಾಖಲೆ ಬರೆದ ವೇಗಿ ಜಸ್‌ಪ್ರೀತ್ ಬೂಮ್ರಾಭಾರತ vs ಆಸ್ಟ್ರೇಲಿಯಾ: ಟಿ20 ದಾಖಲೆ ಬರೆದ ವೇಗಿ ಜಸ್‌ಪ್ರೀತ್ ಬೂಮ್ರಾ

ತಂಡಕ್ಕೆ ಜಿಕೊ ತರಬೇತಿ ನೀಡುತ್ತಿರಲಿ, ಅಥವಾ ಸರ್ಗಿಯೊ ಲೆಬೆರಾ ಅವರಲ್ಲಿ ಪಳಗಿರಲಿ. ಬ್ರೆಜಿಲ್‌ನ ಸಾಂಬಾ ರೀತಿಯ ಆಟವಾಡಲಿ ಅಥವಾ ಸ್ಪೇನ್‌ನ ಟಿಕಿ ಟಕಾ ಶೈಲಿಯ ಆಟವಾಡಲಿ, ಗೋವಾ ಮಾತ್ರ ಲೀಗ್ ಆರಂಭವಾದ 2014ರಿಂದ ತನ್ನ ಸ್ಥಿರ ಪ್ರದರ್ಶನ ನೀಡುತ್ತಿದೆ. ಐದು ಋತುಗಳಲ್ಲಿ ಗೋವಾ ನಾಲ್ಕು ಬಾರಿ ಪ್ಲೇ ಆಫ್ ಅರ್ಹತೆ ಪಡೆದಿದೆ, ಅದೇ ರೀತಿ ಒಮ್ಮೆ ಫೈನಲ್ ಪ್ರವೇಶಿಸಿದೆ. ಫೈನಲ್‌ನಲ್ಲಿ ಚೆನ್ನೈಯಿನ್ ವಿರುದ್ಧ ಸೋಲನುಭವಿಸಿತ್ತು. ಮೂರು ಋತುಗಳಲ್ಲಿ ಎಟಿಕೆ ಹಾಗೂ ಚೆನ್ನೈ ತಂಡವನ್ನು ಹೊರತುಪಡಿಸಿದರೆ ಪ್ಲೇ ಆಫ್ ನಲ್ಲಿ ಇತರ ತಂಡಗಳಿಗೆ ಗೋವಾಕ್ಕೆ ಸೋಲುಣಿಸಲು ಸಾಧ್ಯವಾಗಲಿಲ್ಲ.

ಸೈಯದ್ ಮುಷ್ತಾಕ್ ಅಲಿ: ಮಿಜೋರಾಂಗೆ 137 ರನ್‌ ಸೋಲುಣಿಸಿದ ಕರ್ನಾಟಕಸೈಯದ್ ಮುಷ್ತಾಕ್ ಅಲಿ: ಮಿಜೋರಾಂಗೆ 137 ರನ್‌ ಸೋಲುಣಿಸಿದ ಕರ್ನಾಟಕ

ಅಂಗಣದಲ್ಲಿ ಗೋವಾ ತಂಡದ ಸಾಧನೆ ಅದ್ಭುತವಾದುದು. 36 ಪಂದ್ಯಗಳನ್ನು ಗೆಲ್ಲುವ ಮೂಲಕ ಗೋವಾ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡವೆನಿಸಿದೆ. ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಚೆನ್ನೈಯಿನ್ ಹಾಗೂ ಎಟಿಕೆ ಅನುಕ್ರಮವಾಗಿ 32 ಹಾಗೂ 28 ಪಂದ್ಯಗಳನ್ನು ಗೆದ್ದಿವೆ. ಚೆನ್ನೈ ಹಾಗೂ ಎಟಿಕೆ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರೂ ಈ ಬಾರಿ ಪ್ಲೇ ಆಫ್ ತಲಪುವಲ್ಲಿ ವಿಲವಾಗಿವೆ.

ಗೋವಾ ತಂಡ ಐದು ಋತುಗಳಲ್ಲಿ ಒಟ್ಟು 148 ಗೋಲುಗಳನ್ನನು ಗಳಿಸಿದೆ, ಹತ್ತಿರ ತಲುಪಿದ್ದ 126 ಗೋಲುಗಳನ್ನು ಗಳಿಸಿರುವ ಚೆನ್ನೈಯಿನ್ ತಂಡ. ಪ್ರತಿಯೊಂದು ಋತುವಿನಲ್ಲೂ ಗೋವಾ ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿದ ತಂಡವೆನಿಸಿದೆ. 2015ರ ಹೊರತಾಗಿ ಪ್ರತಿಯೊಂದು ಋತುವಿನಲ್ಲೂ ಪ್ಲೇ ಆಫ್ ಹಂತ ತಲುಪಿದೆ. ಜಿಕೋ ನೀಡಿದ ತರಬೇತಿ ಮೂಲಕ ಗೋವಾ ತಂಡ ಎಲ್ಲರ ಗಮನ ಸೆಳೆಯುವ ತಂಡವಾಗಿ ರೂಪುಗೊಂಡಿತು. ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಗೋವಾ ತಂಡ ಪ್ಲೇ ಆ್‌ಗೆ ಅರ್ಹತೆ ಪಡೆದಿತ್ತು. ಪ್ಲೇ ಆ್‌ನಲ್ಲಿ ಎಟಿಕೆ ವಿರುದ್ಧ ಸೋಲನು'ವಿಸಿತ್ತು. ಆದರೆ 2015ರಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಫೈನಲ್‌ನಲ್ಲಿ ಚೆನ್ನೈಯಿನ್ ತಂಡಕ್ಕೆ ಸೋಲುವುದಕ್ಕೆ ಮುನ್ನ ಪ್ರತಿಯೊಂದು ಹಂತದಲ್ಲೂ ಪ್ರಭುತ್ವ ಸಾಧಿಸಿತ್ತು.

ಧೋನಿ ಪರ ಆಸೀಸ್ ಸ್ಟಾರ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾಡಿದ್ದೇಕೆ?!ಧೋನಿ ಪರ ಆಸೀಸ್ ಸ್ಟಾರ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾಡಿದ್ದೇಕೆ?!

2016ರಲ್ಲಿ ವೈಲ್ಯ ಕಂಡ ನಂತರ ಗೋವಾ ಸತತ ಎರಡು ಋತುಗಳಲ್ಲಿ ಪ್ಲೇ ಆಫ್ ತಲುಪಿತ್ತು. ಲೊಬೆರಾ ಅವರಲ್ಲಿ ಪಳಗಿರುವ ತಂಡ ಪ್ರತಿಯೊಂದು ಹಂತದಲ್ಲೂ ಪ್ರಭುತ್ವ ಸಾಧಿಸಿ ಪ್ಲೇ ಆಫ್ ತಲುಪಿತ್ತು. ಲೀಗ್‌ನಲ್ಲಿ ಅತಿ ಹೆಚ್ಚು ಮನರಂಜನೆ ನೀಡುವ ತಂಡವೆಂಬ ಹೆಗ್ಗಳಿಕೆ ಗೋವಾ ತಂಡಕ್ಕಿದೆ. ನಿರಂತರ ಯಶಸ್ಸಿನ ಹಾದಿಯಲ್ಲಿರುವ ಗೋವಾ ತಂಡ ಡಿಫೆನ್ಸ್ ವಿಭಾಗದಲ್ಲಿ ಬಲಿಷ್ಠವಾಗಿರುವುದೇ ಯಶಸ್ಸಿಗೆ ಪ್ರಮುಖ ಕಾರಣ.

ರಾಹುಲ್, ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ಕೊಡಬಯಸಿದ್ದೇವೆ: ಕೊಹ್ಲಿರಾಹುಲ್, ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ಕೊಡಬಯಸಿದ್ದೇವೆ: ಕೊಹ್ಲಿ

'ನಾವು ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಸುಧಾರಣೆ ಕಂಡುಕೊಂಡಿದ್ದೇವೆ ಎಂಬುದೇ ಖುಷಿಯ ವಿಚಾರ. ಅದೇ ರೀತಿ ನಾವು ಮುಂಭಾಗದಲ್ಲಿ ಸಾಕಷ್ಟು ಗೋಲಿಗೆ ಅವಕಾಶವನ್ನು ಕಲ್ಪಿಸಬೇಕಾಗಿದೆ. ತಾಳ್ಮೆಯ ತಂಡವಾಗಿ, ನಿರಂತರ ಶ್ರಮ ವಹಿಸಬೇಕಾಗಿದೆ. ಯಶಸ್ಸಿಗೆ ಮೈ ಮರೆಯದೆ ನಮ್ಮ ಕಾಲು ನೆಲದಲ್ಲೇ ಇರಬೇಕಾಗಿದೆ,' ಎಂದು ಗೋವಾ ತಂಡ ಪ್ಲೇ ಆಫ್ ಹಂತ ತಲುಪಿದ ನಂತರ ಲೊಬೆರಾ ಹೇಳಿದ್ದಾರೆ.

Story first published: Monday, February 25, 2019, 20:21 [IST]
Other articles published on Feb 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X