ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಟಿಕೆಎಂಬಿ ಜಯದ ಓಟಕ್ಕೆ ಬ್ರೇಕ್ ಹಾಕಿದ ಜೆಮ್ಷೆಡ್ಪುರ

By Isl Media
ISL: Valksis goals give Jamshedpur 2-1 win over ATK Mohun Bagan

ಗೋವಾ, ಡಿಸೆಂಬರ್ 7: ನಿರಿಜಸ್ ವಾಸ್ಕಿಸ್ (30 ಮತ್ತು 66ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡ ಬಲಿಷ್ಠ ಎಟಿಕೆ ಮೋಹನ್ ಬಾಗನ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ಟಾಟಾ ಪಡೆಗೆ ಪ್ರಸಕ್ತ ಋತುವಿನಲ್ಲಿ ದಕ್ಕಿದ ಮೊದಲ ಜಯ. ಎಟಿಕೆ ಮೋಹನ್ ಬಾಗನ್ ದ್ವಿತಿಯಾರ್ಧದಲ್ಲಿ ಉತ್ತಮ ಹೋರಾಟ ನೀಡಿತು. ರಾಯ್ ಕೃಷ್ಣ (80ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಟಾಟಾ ಪಡೆ ಮುನ್ನಡೆ: ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ, ಗೋಲ್ ಬಾಕ್ಸ್ ಗೆ ಅತಿ ಹೆಚ್ಚು ಬಾರಿ ಟಾರ್ಗೆಟ್, ಉತ್ತಮ ಡಿಫೆನ್ಸ್, ಉತ್ತಮ ಪಾಸ್ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಮಿಂಚಿದ ಜೆಮ್ಷೆಡ್ಪುರ ಬಲಿಷ್ಠ ಎಟಿಕೆ ಮೂಹನ್ ಬಾಗನ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿದೆ. 30ನೇ ನಿಮಿಷದಲ್ಲಿ ಐಟರ್ ಮನ್ರಾಯ್ ನೀಡಿದ ಕಾರ್ನರ್ ಕಿಕ್ ಗೆ ನಿರಿಜಸ್ ವಾಸ್ಕಿಸ್ ಹೆಡರ್ ಮೂಲಕ ಗಳಿಸಿದ ಗೋಲು ಟಾಟಾ ಪಡೆಗೆ ಮುನ್ನಡೆ ತಂದುಕೊಟ್ಟಿತು. 32ನೇ ನಿಮಿಷದಲ್ಲಿ ವಾಸ್ಕಿಸ್ ಗೆ ಎರಡನೇ ಗೋಲು ಗಳಿಸುವ ಅವಕಾಶ ಇದ್ದಿತ್ತು ಆದರೆ ಅರಿಂದಂ ಭಟ್ಟಾಚಾರ್ಯ ಉತ್ತಮ ರೀತಿಯಲ್ಲಿ ಹೊರತಳ್ಳಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಐಎಸ್‌ಎಲ್ 2020: ಗೋವಾಕ್ಕೆ ಮೊದಲ ಜಯ, ಮಿಂಚಿದ ಐಗರ್ಐಎಸ್‌ಎಲ್ 2020: ಗೋವಾಕ್ಕೆ ಮೊದಲ ಜಯ, ಮಿಂಚಿದ ಐಗರ್

ಜೆಮ್ಷೆಡ್ಪುರ ಒಟ್ಟು 12 ಬಾರಿ ಗೋಲ್ ಬಾಕ್ಸ್ ಕಡೆಗೆ ಗುರಿ ಇಟ್ಟಿತ್ತು. ಅವುಗಳಲ್ಲಿ 7 ನಿಖರವಾಗಿತ್ತು. 29ನೇ ನಿಮಿಷದಲ್ಲಿ ಪೀಟರ್ ಹರ್ಟ್ಲಿ ಅವರಿಗೂ ಹೆಡರ್ ಮೂಲಕ ಗೋಲು ಗಳಿಸವು ಅವಕಾಶವಿದ್ದಿತ್ತು. ಆದರೆ ಪ್ರೀತಂ ಕೊತಾಲ್ ಅವರು ತಡೆದು ತಂಡಕ್ಕೆ ರಕ್ಷಣೆ ನೀಡಿದರು. ಎಟಿಕೆ ಮೋಹನ್ ಬಾಗನ್ ಪ್ರಸಕ್ತ ಋತುವಿನಲ್ಲಿ ಮೊದಲ ಬಾರಿಗೆ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟಿತ್ತು. ನಿರಜಿಜಸ್ ವಾಸ್ಕಿಸ್ ಒಟ್ಟು ನಾಲ್ಕನೇ ಗೋಲು ಗಳಿಸಿದರು.

ಎಟಿಕೆ ಮೋಹನ್ ಬಾಗನ್ ಫೇವರಿಟ್: ನಾಲ್ಕನೇ ಪಂದ್ಯದಲ್ಲೂ ಜಯದ ಓಟವನ್ನು ಮುಂದುವರಿಸುವ ಗುರಿಯನ್ನು ಎಟಿಕೆ ಮೋಹನ್ ಬಾಗನ್ ಹೊಂದಿದ್ದರೆ ಜೆಮ್ಷೆಡ್ಪುರ ತಂಡ ಈ ಪಂದ್ಯದಲ್ಲಿ ಮೋಹನ್ ಬಾಗನ್ ಪಡೆಗೆ ಸೋಲುಣಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಕಳೆದ ಋತುವಿನಲ್ಲಿ ಅತಿಹೆಚ್ಚು ಗೋಲು ಗಳಿಸಿದ್ದ ರಾಯ್ ಕೃಷ್ಣ ಮತ್ತು ನೆರಿಜಸ್ ವಾಸ್ಕಿಸ್ ಪರಸ್ಪರ ಮುಖಾಮುಖಿಯಾಗುತ್ತಿರುವುದು ವಿಶೇಷ. ರೆಡ್ ಮೈನರ್ಸ್ ಪಡೆ ಆಡಿರುವ ಮೂರೂ ಪಂದ್ಯಗಳಲ್ಲಿ ಗೋಲು ಗಳಿಸಿದೆ. ಪೀಟರ್ ಹಾರ್ಟ್ಲೀ ಮತ್ತು ಸ್ಟೀಫನ್ ಎಝಿ ಜೆಎಫ್ ಸಿ ಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ತಂಡ ಮೊದಲ ಜಯದ ನಿರೀಕ್ಷೆಯೊಂದಿಗೆ ಅಂಗಣಕ್ಕಿಳಿಯಿತು. ನೆರಿಜಸ್ ವಾಸ್ಕಿಸ್ ಮತ್ತು ಜಾಕಿಚಾಂದ್ ಸಿಂಗ್ ತಂಡದ ಪ್ರಮುಖ ಅಸ್ತ್ರವೆನಿಸಿದ್ದಾರೆ.

ಐಎಸ್‌ಎಲ್: ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿಐಎಸ್‌ಎಲ್: ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿ

ಎಟಿಕೆ ಮೂಹನ್ ಬಾಗನ್ ಎದುರಾಳಿ ತಂಡಕ್ಕೆ ಇನ್ನೂ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಮೆರಿನರ್ಸ್ ಖ್ಯಾತಿಯ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಮೂರು ಜಯ ಹಾಗೂ ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದೆ. ರಾಯ್ ಕೃಷ್ಣ ನಾಲ್ಕು ಗೋಲುಗಳಲ್ಲಿ ಮೂರು ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ವಾಸ್ಕಿಸ್ ಕೂಡ ಅಷ್ಟೇ ಗೋಲುಗಳನ್ನು ಗಳಿಸಿದ್ದಾರೆ, ಆದರೆ ಕೃಷ್ಣ ಅವರ ಗೋಲು ಜಯ ತಂದುಕೊಟ್ಟಿದೆ. ಎಟಿಕೆಎಂಬಿ ತಂಡದ ಯಶಸ್ಸಿಗೆ ಅದರ ಡಿಫೆನ್ಸ್ ಹಾಗೂ ಆಕ್ರಮಣಕಾರಿ ಆಟವೇ ಕಾರಣ. ಎರಡೂ ತಂಡಗಳ ಆಟದ ಶೈಲಿ ಸರಿಸುಮಾರು ಒಂದೇ ಆಗಿರುವುದರಿಂದ ಪಂದ್ಯದಲ್ಲಿ ಸಾಕಷ್ಟು ಕುತೂಹಲವನ್ನು ನಿರೀಕ್ಷಿಸಬಹುದು.

Story first published: Tuesday, December 8, 2020, 10:17 [IST]
Other articles published on Dec 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X