ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ : ಜೆಮ್ಷೆಡ್ಪುರ್ ಎಫ್‌ಸಿಗೆ ಶರಣಾದ ಚಾಂಪಿಯನ್ ಚೆನ್ನೈಯಿನ್

By Isl Media
Jamshedpur move up as Chennaiyin stumble again

ಜೆಮ್ಷೆಡ್ಪುರ, ನವೆಂಬರ್ 25: ಪಾಬ್ಲೊ ಮೊರ್ಗಾಡೊ 14ನೇ ನಿಮಿಷ ), ಕಾರ್ಲೋಸ್ ಕಾಲ್ವೋ (29ನೇ ನಿಮಿಷ) ಹಾಗೂ ಮಾರಿಯೋ ಅರ್ಕ್ವೆಸ್ (72 ನೇ ನಿಮಿಷ) ಅವರು ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡ 3-1 ಗೋಲುಗಳ ಅಂತರದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ತಂಡವನ್ನು ಸೋಲಿಸಿತು. ಹಾಲಿ ಚಾಂಪಿಯನ್ ಚೆನ್ನೈ ತಂಡಕ್ಕೆ ಈ ಸೋಲಿನಿಂದ ಅಂತಿಮ ನಾಲ್ಕರ ಹಂತ ತಲುಪುವ ಹಾದಿ ಮತ್ತಷ್ಟು ಕಠಿಣವಾಗಿದೆ.

ಅಂದು ಅಭಿಮಾನಿಗಳ ಹೃದಯ ಕದ್ದಿದ್ದವಳು ಇಂದು ಕೆಂಗಣ್ಣಿಗೆ ಗುರಿಯಾದಳು!ಅಂದು ಅಭಿಮಾನಿಗಳ ಹೃದಯ ಕದ್ದಿದ್ದವಳು ಇಂದು ಕೆಂಗಣ್ಣಿಗೆ ಗುರಿಯಾದಳು!

ದ್ವಿತೀಯಾರ್ಧದ 68ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಶೂಟ್ ಮೂಲಕ ಚೆನ್ನೈ ತಕ್ಕ ತಿರುಗೇಟು ನೀಡಲು ದಿಟ್ಟ ಹೆಜ್ಜೆ ಇಟ್ಟಿತು. ರಾಫೆಲ್ ಅಗಸ್ಟೊ ಯಾವುದೇ ಪ್ರಮಾದ ಮಾಡದೇ ಟಾಟಾ ಪಡೆಯ ಗೋಲ್ ಕೀಪರ್ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಪಂದ್ಯ 2-1 ಗೋಲುಗಳ ಅಂತರದಲ್ಲಿ ಮುಂದೆ ಸಾಗಿತು.

ನಿಕೋಲಸ್ ಆರ್ಭಟ, 10 ಓವರ್ ಪಂದ್ಯವನ್ನು 99 ರನ್‌ನಿಂದ ಗೆದ್ದ ವಾರಿಯರ್ಸ್!ನಿಕೋಲಸ್ ಆರ್ಭಟ, 10 ಓವರ್ ಪಂದ್ಯವನ್ನು 99 ರನ್‌ನಿಂದ ಗೆದ್ದ ವಾರಿಯರ್ಸ್!

ಆದರೆ ಚೆನ್ನೈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 72ನೇ ನಿಮಿಷದಲ್ಲಿ ಮಾರಿಯೋ ಅರ್ಕ್ವೆಸ್ ಗಳಿಸಿದ ಗೋಲು ಚೆನ್ನೈ ಹೋರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿತು. ಟಾಟಾ ಪಡೆ 3-1 ಅಂತರದಲ್ಲಿ ಮೇಲುಗೈ ಸಾಧಿಸಿತು.

ಪ್ರಥಮಾರ್ಧದಲ್ಲಿ ಟಾಟಾ ಪಡೆ ಮೇಲುಗೈ

ಪ್ರಥಮಾರ್ಧದಲ್ಲಿ ಟಾಟಾ ಪಡೆ ಮೇಲುಗೈ

29ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಶೂಟ್ ಮೂಲಕ ಕಾರ್ಲೋಸ್ ಕಾಲ್ವೋ ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ತಂಡ 2-0 ಗೋಲಿನಿಂದ ಮೇಲುಗೈ ಸಾಧಿಸಿತು. ಚೆನ್ನೈ ಮೇಲಕ್ಕೇಳಲಾರದ ಆಘಾತ ಅನುಭವಿಸಿತು. ಇದರೊಂದಿಗೆ 45 ನಿಮಿಷಗಳ ಆಟದಲ್ಲಿ ಚೆನ್ನೈನ ಆಟ ನಡೆಯಲಿಲ್ಲ.

ಪಾಬ್ಲೋ ಗೋಲು

ಪಾಬ್ಲೋ ಗೋಲು

ಪಂದ್ಯ ಆರಂಭಗೊಂಡ 14ನೇ ನಿಮಿಷದಲ್ಲಿ ಪಾಬ್ಲೊ ಮೊರ್ಗಾಡೊ ಗಳಿಸಿದ ಗೋಲಿನಿಂದ ಆತಿಥೇಯ ಜೆಮ್ಷೆಡ್ಪುರ ತಂಡ ಹಾಲಿ ಚಾಂಪಿಯನ್ ವಿರುದ್ಧ ಮೇಲುಗೈ ಸಾಧಿಸಿತು. ಕಾರ್ಲೋಸ್ ಕಾಲ್ವೋ ನೀಡಿದ ಫ್ರೀ ಕಿಕ್ ಪಾಸ್ ಮೈಲ್ಸನ್ ಅಲ್ವೆಸ್ ನಿರಾಯಾಸವಾಗಿ ಮುಂದಕ್ಕೆ ಅವಕಾಶ ಮಾಡಿಕೊಟ್ಟಿತು. ಪೆನಾಲ್ಟಿ ಬಾಕ್ಸ್‌ನ ಹೊರಗಡೆ ಚೆಂಡಿಗಾಗಿಕಾಯುತ್ತಿದ್ದ ಪಾಲ್ಬೊ ಮೊರ್ಗಾಡೊ ಎದೆಯ ಮೇಲೆ ಚೆಂಡನ್ನು ತೆಗೆದುಕೊಂಡು ನಿಯಂತ್ರಿಸಿ ಗೋಲ್‌ಬಾಕ್ಸ್‌ನ ಬದಿಗೆ ತುಳಿದರು. ಗೋಲ್‌ಕೀಪರ್ ಅವರನ್ನು ವಂಚಿಸಿದ ಚೆಂಡು ನೇರವಾಗಿ ನೆಟ್‌ಗೆ ಮುತ್ತಿಟ್ಟಿತು. ಜೆಮ್ಷೆಡ್ಪುರಕ್ಕೆ ಮುನ್ನಡೆ.

ನಿರಂತರ ಸೋಲಿನಿಂದ ಕಂಗಾಲು

ನಿರಂತರ ಸೋಲಿನಿಂದ ಕಂಗಾಲು

ನಿರಂತರ ಸೋಲಿನಿಂದ ಕಂಗಾಲಾಗಿರುವ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ಹಾಗೂ ಉತ್ತಮ ಪ್ರದರ್ಶನ ತೋರಿ ಆತ್ಮವಿಶ್ವಾಸದ ನಡೆಯಲ್ಲಿ ಸಾಗುತ್ತಿರುವ ಜೆಮ್ಷೆಡ್ಪುರ ತಂಡಗಳು ಇಂಡಿಯನ್ ಸೂಪರ್ ಲೀಗ್‌ನ 39ನೇ ಪಂದ್ಯಕ್ಕೆ ಸಜ್ಜಾದವು. ಪ್ರವಾಸಿ ತಂಡಕ್ಕೆ ಇದು ಅತ್ಯಂತ ಪ್ರಮುಖವಾದ ಪಂದ್ಯ. ಅಂತಿಮ ನಾಲ್ಕ ಹಂತ ತಲುಪುವಲ್ಲಿ ಈ ಪಂದ್ಯ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ. ಹಿಂದಿನ ಪಂದ್ಯದಲ್ಲಿ ಜೆಮ್ಷೆಡ್ಪುರ ಋತುವಿನ ಮೊದಲ ಸೋಲನುಭವಿಸಿತ್ತು, ಅದೇ ರೀತಿ ಚೆನ್ನೈಯಿನ್ ತಂಡ ಋತುವಿನ ಮೊದಲ ಜಯ ಗಳಿಸಿತ್ತು.

ಡಿಫೆನ್ಸ್ ವಿಭಾಗದ ಹಿನ್ನಡೆ

ಡಿಫೆನ್ಸ್ ವಿಭಾಗದ ಹಿನ್ನಡೆ

ಚೆನ್ನೈ ತಂಡದ ಡಿಫೆನ್ಸ್ ವಿಭಾಗದ ಸೊರಗಿರುವುದು ಆ ತಂಡ ಎದುರಾಳಿಗಳಿಗೆ 13 ಗೋಲುಗಳನ್ನು ಗಳಿಸುವ ಅವಕಾಶ ನೀಡಿರುವುದೇ ಸಾಕ್ಷಿ. ಅದರಲ್ಲೂ ಪ್ರಥಮ ಅವಧಿಯಲ್ಲಿ ಚೆನ್ನೈ 9 ಗೋಲುಗಳನ್ನು ನೀಡಿದೆ. ಪುಣೆ ತಂಡ ಕೂಡ 10 ಗೋಲುಗಳನ್ನು ನೀಡಿದೆ. ಆತಿಥೇಯ ತಂಡ 8 ಪಂದ್ಯಗಳಿಂದ 15 ಗೋಲುಗಳನ್ನು ಗಳಿಸಿದೆ. ಆದರೆ ಆ ನಂತರದ ಪಂದ್ಯಗಳಲ್ಲಿ ಗೋಲ ಗಳಿಸುವ ಸರಾಸರಿಯಲ್ಲಿ ಇಳಿಕೆಯಾಗಿದೆ. ಹಿಂದಿನ ಲೆಕ್ಕಾಚಾರಗಳನ್ನು ಬದಿಗಿಟ್ಟು ಮತ್ತೆ ಗೋಲಿನ ಮಳೆಗರೆಯಲು ಜೆಮ್ಷೆಡ್ಪುರ ತಂಡ ಚೆನ್ನೆ‘ಯಿನ್‌ಗೆ ಆತಿಥ್ಯ ನೀಡಲು ಸಜ್ಜಾಯಿತು.

Story first published: Sunday, November 25, 2018, 23:35 [IST]
Other articles published on Nov 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X