ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಈಸ್ಟ್‌ ಬೆಂಗಾಲ್ ವಿರುದ್ಧ ಜಯದ ನಿರೀಕ್ಷೆಯಲ್ಲಿ ಕೇರಳ ಬ್ಲಾಸ್ಟರ್ಸ್

By Isl Media
Kerala and East Bengal seek first win in clash of strugglers

ಗೋವಾ, ಡಿಸೆಂಬರ್ 20: ಕೇರಳ ಬ್ಲಾಸ್ಟರ್ಸ್ ಮತ್ತು ಈಸ್ಟ್ ಬೆಂಗಾಳ ಹೀರೋ ಇಂಡಿಯನ್ ಸೂಪರ್ ಲೀಗ್ ಸೀಸನ್ ೭ ರ ಮೊದಲ ಜಯ ಸಾಧಿಸುವ ಗುರಿ ಹೊಂದಿದ್ದು ಭಾನುವಾರ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಈಗಾಗಲೇ ಉಭಯ ತಂಡಗಳು ತಮ್ಮ ಐದೂ ಪಂದ್ಯಗಳಲ್ಲಿ 10 ಗೋಲುಗಳನ್ನು ಬಿಟ್ಟುಕೊಟ್ಟಿವೆ. ಅಲ್ಲದೇ ರಕ್ಷಣಾತ್ಮಕ ಆಟಗಳಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ತೋರಿಲ್ಲ. ಇದು ಎರಡೂ ತಂಡಕ್ಕೂ ತಲೆ ನೋವಾಗಿ ಪರಿಣಮಿಸಿದೆ.

ಉತ್ತಮ ಆರಂಭದ ಹೊರತಾಗಿಯೂ ಕೂಡ ಎರಡೂ ತಂಡಗಳು ನಿರ್ಣಾಯಕ ಹಂತದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಎರಡೂ ತಂಡಗಳು ಗಳಿಸಿರುವ 10 ಗೋಲುಗಳಲ್ಲಿ 8 ಗೋಲುಗಳು ವಿರಾಮದ ಬಳಿಕ ಬಂದಿರುವುದನ್ನು ಗಮನಿಸಿದರೆ ಅವರ ವಿರೋಚಿತ ಆಟವನ್ನು ಗಮನಿಸಬಹುದು.

ಐಎಸ್‌ಎಲ್: ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ನಡುವೆ ರೋಚಕ ಪಂದ್ಯಐಎಸ್‌ಎಲ್: ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ನಡುವೆ ರೋಚಕ ಪಂದ್ಯ

ಪ್ರತಿ ಪಂದ್ಯವೂ ನಮಗೆ ಹೊಸ ಸವಾಲಾಗಿದ್ದು ನಾವು ಕೂಡ ಅದೇ ಸ್ಥಿತಿಯಲ್ಲೇ ಇದ್ದೇವೆ. ಎರಡೂ ತಂಡಗಳಿಗೆ ಮೂರು ಅಂಕಗಳ ಅವಶ್ಯಕತೆಯಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ನಾವು ಉತ್ತಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದು ಅದಕ್ಕಾಗಿ ಬೇಕಾಗುವ ಎಲ್ಲ ತಯಾರಿ ಮಾಡಿಕೊಂಡಿರುವುದಾಗಿ ಕೇರಳ ತಂಡದ ಕೋಚ್ ಕಿಬು ವಿಕುನ ತಿಳಿಸಿದ್ದಾರೆ.
ಕೆಲವು ಸಲ ಉತ್ತಮ ಫಲಿತಾಂಶ ಸಿಗುತ್ತದೆ. ಕೆಲವು ಸಲ ಸಿಗುವುದಿಲ್ಲ. ಕೆಲವು ಸಂದರ್ಭದಲ್ಲಿ ಏನೂ ನಡೆಯುವುದಿಲ್ಲ. ಏಕೆಂದರೆ ಎದುರಾಳಿ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಹೇಳಿದರು.

ಕೇರಳದಂತೆ ಈಸ್ಟ್ ಬೆಂಗಾಲ್ ತಂಡವೂ ಕೂಡ ಕೆಟ್ಟ ಪರಿಸ್ಥಿತಿಯಲ್ಲೂ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಪ್ರಭಲ ಪೈಪೋಟಿಯ ಹೊರತಾಗಿಯೂ ಗೆಲ್ಲುವ ಅವಕಾಶವನ್ನು ಸೃಷ್ಟಿ ಮಾಡಿಕೊಳ್ಳಬೇಕಾದ ಸವಾಲು ಎದುರಾಗಿದೆ. 31 ಅಂಕ ಪಡೆದಿರುವ ಕೇರಳ ಕೊನೆ ಸ್ಥಾನದಲ್ಲಿದ್ದು ೩೬ ಅಂಕ ಪಡೆದಿರುವ ಈಸ್ಟ್ ಬೆಂಗಾಲ ಸ್ವಲ್ಪ ಮೇಲಿದೆ. ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಈಸ್ ಬೆಂಗಾಲ್ ಕೋಚ್ ರಾಬಿ ಫೋಲರ್ ವ್ಯಕ್ತಪಡಿಸಿದ್ದಾರೆ.

ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ಸೋಲಿಗೆ ಶರಣಾದ ನಾರ್ಥ್ ಈಸ್ಟ್ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ಸೋಲಿಗೆ ಶರಣಾದ ನಾರ್ಥ್ ಈಸ್ಟ್

ಇಲ್ಲಿಯವರೆಗೂ ಈಸ್ಟ್ ಬೆಂಗಾಲ್ ಕೇವಲ 2 ಗೋಲ್‌ಗಳನ್ನು ಮಾತ್ರ ಗಳಿಸಿದೆ. ಅದು ಕೂಡ ಹೈದರಾಬಾದ್ ಎಫ್‌ಸಿ ತಂಡದ ವಿರುದ್ಧ. ನಾವು ಕೇರಳ ತಂಡದ ವಿರುದ್ಧ ರಕ್ಷಣಾತ್ಮಕ ಆಟವನ್ನು ಆಡುತ್ತೇವೆ ಎಂದ ಅವರು ಕೇರಳ ತಂಡ ಕೇವಲ ಒಂದು ಗೋಲನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ನಾವು ಸಂಪೂರ್ಣ ಹಿಡಿತ ಸಾಧಿಸಿ ಪಂದ್ಯವನ್ನು ಗೆಲ್ಲುವುದರತ್ತ ಗಮನಹರಿಸುತ್ತೇವೆ ಎನ್ನುತ್ತಾರೆ ಫೋಲರ್. ಏಕಾಗ್ರತೆಯ ಮಟ್ಟವೂ ಕೂಡ ಉತ್ತಮವಾಗಿರಬೇಕು. ನಾವು ಈ ಪಂದ್ಯವನ್ನು ಗೆಲ್ಲುವ ನಂಬಿಕೆಯೊಂದಿಗೆ ಮೈದಾನಕ್ಕೆ ಇಳಿಯುವುದಾಗಿ ಹೇಳಿದ್ದಾರೆ.

Story first published: Monday, December 21, 2020, 10:15 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X