ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮನೆಯಂಗಣದಲ್ಲಿ ಜಯ ಗಳಿಸಿದ ಕೇರಳ ಬ್ಲಾಸ್ಟರ್ಸ್

By Isl Media
Kerala Register First Win Over Bengaluru

ಕೊಚ್ಚಿ : ನಾಯಕ ಬಾರ್ಥಲೋಮ್ಯೋ ಒಗ್ಬಚೆ (45 ಮತ್ತು 72ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಕೇರಳ ಬ್ಲಾಸ್ಟರ್ಸ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮನೆಯಂಗಣದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಜಯ ಗಳಿಸಿತು.
ಡೆಶಾರ್ನ್ ಬ್ರೌನ್ (16ನೇ ನಿಮಿಷ) ಗಳಿಸಿದ ಗೋಲಿನಿಂದ ಬೆಂಗಳೂರು ತಂಡ ಆರಂಭದಲ್ಲೇ ಮೇಲುಗೈ ಸಾಧಿಸಿತು. ಅಲ್ಲದೆ ಪ್ರಥಮಾರ್ಧದ ಕೊನೆಯ ಕ್ಷಣದವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, ಆದರೆ ಕೇರಳ ಬ್ಲಾಸ್ಟರ್ಸ್ ತಂಡದ ನಾಯಕ ಬಾರ್ಥಲೋಮ್ಯೋ ಒಗ್ಬಚೆ (45ನೇ ನಿಮಿಷ) ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನಿಂದ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು.

ಮನೆಯಂಗಣದಲ್ಲಿ ಗೆಲ್ಲುವ ಹಂಬಲ:
ಹೀರೋ ಇಂಡಿಯನ್ ಸೂಪರ್ ಲೀಗ್ ನ 83ನೇ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡಕ್ಕೆ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ಆತಿಥ್ಯ ನೀಡಿತು. ಮನೆಯಂಗಣದಲ್ಲಿ ಕೊನೆಯ ಪಂದ್ಯವನ್ನಾಡಲು ಸಜ್ಜಾಯಿತು, ಟೂರ್ನಿಯನ್ನು ಗಮನದಲ್ಲಿರಿಸಿಕೊಂಡರೆ ಈ ಪಂದ್ಯ ಪ್ರಮುಖವಲ್ಲದಿದ್ದರೂ ಸಾಮರ್ಥ್ಯದಿಂದ ಪ್ರಮುಖವಾಗಿದೆ. ಬೆಂಗಳೂರು ತಂಡ ಈಗಾಗಲೇ ಸೆಮಿಫೈನ್ ತಲುಪಿದ್ದು, ಕೇರಳ ಸ್ಪರ್ಧೆಯಿಂದ ಹೊರಗುಳಿದಿದೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ಗೋಲಿಲ್ಲದೆ ಡ್ರಾ ಕಾಣುವ ಮೂಲಕ ಬೆಂಗಳೂರು ತಂಡ ಈ ಬಾರಿ ಅಗ್ರ ಸ್ಥಾನ ತಲಪುವಲ್ಲಿ ವಿಫಲವಾಯಿತು. ಇದರಿಂದಾಗಿ ಇತ್ತಂಡಗಳಿಗೆ ಯಾವುದೇ ಒತ್ತಡ ಇಲ್ಲದ ಕಾರಣ ಇಲ್ಲಿ ನೈಜ ಫುಟ್ಬಾಲ್ ಕಾಣಸಿಗುವುದು ಸ್ಪಷ್ಟ. ಅಮಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಕೇರಳ ಈ ಋತುವಿನಲ್ಲಿ ಸಾಮಾನ್ಯ ಪ್ರದರ್ಶನ ನೀಡಿತ್ತು ಎಂದರೆ ತಪ್ಪಾಗಲಾರದು.

ಕೇವಲ ಮೂರು ಪಂದ್ಯಗಳಲ್ಲಿ ಜಯ ಕಂಡಿರುವ ಕೇರಳ ಸತತ ಮೂರನೇ ಬಾರಿಗೆ ನಾಕೌಟ್ ತಲಪುವಲ್ಲಿ ವಿಫಲವಾಯಿತು. ತಂಡದ ಪರ ಬಾರ್ಥಲೋಮ್ಯೋ ಒಗ್ಬಚೆ ಹಾಗೂ ಮೆಸ್ಸಿ ಬೌಲಿ ಅವರು ತಂಡದ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೇರಳ ಬ್ಲಾಸ್ಟರ್ಸ್ ತಂಡ ಒಟ್ಟು 23 ಗೋಲುಗಳನ್ನು ಗಳಿಸಿದ್ದು, ಅದರಲ್ಲಿ 18 ಗೋಲುಗಳನ್ನು ಈ ಇಬ್ಬರು ಆಟಗಾರರು ಗಳಿಸಿರುತ್ತಾರೆ. ಆದರೆ ಈ ಬಾರಿಯೂ ಡಿಫೆನ್ಸ್ ವಿಭಾಗದ ವೈಫಲ್ಯವೇ ಕಾರಣವಾಗಿತ್ತು. ಮನೆಯಂಗಣದ ಕೊನೆಯ ಪಂದ್ಯದಲ್ಲಿಯೂ ಈ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ನೀಡಲಿ ಎಂಬುದು ತಂಡದ ನಿರೀಕ್ಷೆ.
ಬೆಂಗಳೂರು ತಂಡ ಈಗಾಗಲೇ ಸೆಮಿಫೈನಲ್ ತಲುಪಿದ್ದು, ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಬೆಂಗಳೂರು ಎದುರಾಳಿ ತಂಡಗಳಿಗೆ ಅತಿ ಕಡಿಮೆ ಗೋಲುಗಳನ್ನು ನೀಡಿದ ತಂಡವೆನಿಸಿದೆ.

ಹಾಲಿ ಚಾಂಪಿಯನ್ ಬೆಂಗಳೂರು ಕಳೆದ ಎರಡು ಋತುಗಳಲ್ಲಿ ತೋರಿದ ಪ್ರದರ್ಶನ ತೋರುವಲ್ಲಿ ವಿಫಲವಾದರೂ ಈ ಬಾರಿ ಸೆಫೈನಲ್ ಸ್ಥಾನವನ್ನು ಕಾಯ್ದುಕೊಂಡಿದೆ. ಇದುವರೆಗೂ ಕೇರಳ ವಿರುದ್ಧ ಬೆಂಗಳೂರು ಐದು ಪಂದ್ಯಗಳನ್ನಾಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದೆ. ಜುವಾನನ್ ಹಾಗೂ ಸುನಿಲ್ ಛೆಟ್ರಿ ಈ ಪಂದ್ಯಕ್ಕೆ ಅಮಾನತುಗೊಂಡಿರುವುದರಿಂದ ತಂಡದ ಮೇಲೆ ಒತ್ತಡ ಇರುವುದು ಸಹಜ. ಉದಾಂತ್ ಸಿಂಗ್, ಡೆಶಾರ್ನ್ ಬ್ರೌನ್, ಎರಿಕ್ ಪಾರ್ಥಲು, ದಿಮಾಸ್ ಡೆಲ್ಗಾಡೊ ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

Story first published: Sunday, February 16, 2020, 11:07 [IST]
Other articles published on Feb 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X