ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬೆಂಗಳೂರು ಫುಟ್ಬಾಲ್ ಕ್ಲಬ್ ಜತೆ ಕಿಯಾ ಮೋಟರ್ಸ್ ಡೀಲ್

Kia Motors India signs four-year partnership with Bengaluru Football Club

ಬೆಂಗಳೂರು, ಅಕ್ಟೋಬರ್ 7: ವಿಶ್ವದ 8ನೇ ಅತಿದೊಡ್ಡ ವಾಹನ ತಯಾರಕ ಕಂಪನಿ ಕಿಯಾ ಮೋಟಾರ್ಸ್, 2021/22 ಕ್ರೀಡಾ ಋತುವಿನ ಅಂತ್ಯದ ತನಕ ಬೆಂಗಳೂರು ಫುಟ್ಬಾಲ್ ಕ್ಲಬ್ ನೊಂದಿಗೆ ಕ್ರೀಡಾ ಪಾಲುದಾರಿಕೆ ಹೊಂದುವುದಾಗಿ ಘೋಷಿಸಿದೆ. ಇದರಲ್ಲಿ 2019ರ ವೇಳೆಗೆ ನಡೆಯುವ ಇಂಡಿಯನ್ ಸೂಪರ್ ಲೀಗ್ ಕೂಡಾ ಸೇರಲಿದೆ.

ಬೆಂಗಳೂರಿಗೆ ಬಂದ ಬಾರ್ಸಿಲೋನಾ ಅಕಾಡೆಮಿ ಸ್ಕೂಲ್ಸ್

ಕಿಯಾ ಮೋಟಾರ್ಸ್ ಇಂಡಿಯಾದ ಎಂಡಿ ಹಾಗೂ ಸಿಇಒ ಕುಕ್ಯೂನ್ ಶಿಮ್ ಮತ್ತು ಬೆಂಗಳೂರು ಫುಟ್ಬಾಲ್ ಕ್ಲಬ್ ನ ಸಿಇಒ ಪಾರ್ತ್ ಜಿಂದಾಲ್ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಕರ್ನಾಟಕ ಫುಟ್ಬಾಲ್ ಗೆ ಮತ್ತೊಂದು ಹಿರಿಮೆಯ ಗರಿ 'ಬಿಡಿಯುಎಫ್ಎ'ಕರ್ನಾಟಕ ಫುಟ್ಬಾಲ್ ಗೆ ಮತ್ತೊಂದು ಹಿರಿಮೆಯ ಗರಿ 'ಬಿಡಿಯುಎಫ್ಎ'

ಇದರ ಭಾಗವಾಗಿ ಕಿಯಾ ಮೋಟಾರ್ಸ್ ಸಂಸ್ಥೆಯ ಲೋಗೋ ಬಿಎಫ್ ಸಿಯ ಜೆರ್ಸಿಯ ಮುಂಭಾಗದಲ್ಲಿ ಅಕ್ಟೋಬರ್ 7ರಿಂದ ಜೆಮ್ಶೆಡ್ ಪುರದಲ್ಲಿ ನಡೆಯುವ ಎಫ್ ಸಿ ಪಂದ್ಯಾವಳಿಯಿಂದ ಕಾಣಿಸಿಕೊಳ್ಳಲಿದೆ.

ಹುಟ್ಟುಹಬ್ಬಕ್ಕೆ ಪ್ರೀತಿಯ ಬಿರುದು: ಸುನೀಲ್ ಛೆಟ್ರಿ ಈಗ 'ಏಷ್ಯನ್ ಐಕಾನ್'!ಹುಟ್ಟುಹಬ್ಬಕ್ಕೆ ಪ್ರೀತಿಯ ಬಿರುದು: ಸುನೀಲ್ ಛೆಟ್ರಿ ಈಗ 'ಏಷ್ಯನ್ ಐಕಾನ್'!

ಬೆಂಗಳೂರು ಎಫ್ ಸಿ ಕಳೆದ ಐದು ವರ್ಷಗಳಿಂದ ಅತ್ಯಂತ ಯಶಸ್ವಿ ಭಾರತೀಯ ಕ್ಲಬ್ ಗಳ ಪೈಕಿ ಗುರುತಿಸಿಕೊಂಡಿದೆ. ಇದು 2013 ರ ಬಳಿಕ ಪ್ರತಿ ಕ್ರೀಡಾ ಋತುವಿನಲ್ಲೂ ಒಂದು ಪ್ರಮುಖ ಟ್ರೋಫಿಯನ್ನು ಗೆಲ್ಲುತ್ತಾ ಬಂದಿದೆ.

2016 ರಲ್ಲಿ ನಡೆದ ಏಶಿಯನ್ ಫುಟ್ಬಾಲ್ ಕಾನ್ಫಡೆರೇಷನ್ ಕಪ್ (ಎಎಫ್ ಸಿ ಕಪ್) ಫೈನಲ್ ಗೆ ತಲುಪಿದ ಭಾರತದ ಮೊದಲ ಕ್ಲಬ್ ತಂಡವಾಗಿ ಹೊರಹೊಮ್ಮಿದೆ. ಕಾಂಟಿನೆಂಟಲ್ ಸ್ಪರ್ಧೆಯಲ್ಲಿ ಈ ಹಂತ ತಲುಪಿದ ಮೊದಲ ತಂಡ ಇದಾಗಿದೆ.

ಬೆಂಗಳೂರು ಫುಟ್ಬಾಲ್ ಕ್ಲಬ್ ನ ಸಿಇಒ ಪಾರ್ತ್ ಜಿಂದಾಲ್

ಬೆಂಗಳೂರು ಫುಟ್ಬಾಲ್ ಕ್ಲಬ್ ನ ಸಿಇಒ ಪಾರ್ತ್ ಜಿಂದಾಲ್

ಕಿಯಾ ಜಾಗತಿಕ ಕ್ರೀಡಾ ಪ್ರಾಯೋಜಕತ್ವ ಫೀಫಾ, ಯುಇ ಎಫ್ ಎ ಯುರೋಪಾ ಲೀಗ್, ಆಸ್ಟ್ರೇಲಿಯನ್ ಓಪನ್, ಮತ್ತು ಎಲ್ಪಿಜಿಎಗಳನ್ನು ಒಳಗೊಂಡಿರುತ್ತದೆ. ಕಿಯಾ ಅವರ ಇಂಡಿಯಾ ಬ್ರ್ಯಾಂಡ್ ಬಿಡುಗಡೆ 2019 ರ ಜೂನ್ ತಿಂಗಳಲ್ಲಿ ನಡೆಯಲಿದ್ದು, ವಾಹನ ತಯಾರಕರು ತಮ್ಮ ಬ್ರಾಂಡ್ ವಿಸ್ತರಣೆಗೆ ಬಿಎಫ್ ಸಿಯಂಥ ಪರಿಪೂರ್ಣ ಪಾಲುದಾರರನ್ನು ಕಂಡುಕೊಂಡಿದ್ದಾರೆ. ಇದು ಯುವ ಕ್ರೀಡಾಭಿಮಾನಿಗಳನ್ನು ಉತ್ಸಾಹವನ್ನು ಮತ್ತಷ್ಟು ಬಲಪಡಿಸಲಿದೆ.

ಬೆಂಗಳೂರು ಫುಟ್ಬಾಲ್ ಕ್ಲಬ್ ನ ಸಿಇಒ ಪಾರ್ತ್ ಜಿಂದಾಲ್, "ಕಿಯಾದೊಂದಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ನ ಈ ಪಾಲುದಾರಿಕೆ ಭಾರತೀಯ ಫುಟ್ ಬಾಲ್ ಇತಿಹಾಸದಲ್ಲಿ ಸ್ಮರಣೀಯ ಘಟನೆಯಾಗಿದೆ. ಕಿಯಾಗೆ ಈಗಾಗಲೇ ವಿಶ್ವದರ್ಜೆಯ ಕ್ರೀಡೆಗಳನ್ನು ಸಂಘಟಿಸಿದ ಮತ್ತು ಕ್ರೀಡಾ ಕೂಟದೊಂದಿಗೆ ಪಾಲುದಾರಿಕೆ ಹೊಂದಿದ ಅನುಭವವಿದೆ.

ಕಿಯಾ ಭಾರತದಲ್ಲಿ ತನ್ನ ಉಪಸ್ಥಿತಿಯನ್ನು ತೋರಿಸಿಕೊಳ್ಳಲು ಬೆಂಗಳೂರಿನ ಎಫ್ ಸಿ ತಂಡವನ್ನು ಆಯ್ದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಮತ್ತು ನಗರದ ಅಭಿಮಾನಿಗಳಿಗೆ ಸಂದ ಗೌರವವಾಗಿದೆ. ಜೆಎಎಸ್ ಡಬ್ಲ್ಯೂ ಮಾಲಿಕತ್ವದ ಬೆಂಗಳೂರು ಎಫ್ ಸಿ ತಂಡ ಕಿಯಾದೊಂದಿಗೆ ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತದೆ. ಈಗ ನಾವು ಕಿಯಾದೊಂದಿಗೆ ಕೈಜೋಡಿಸಿ ದೇಶದಲ್ಲಿ ಫುಟ್ ಬಾಲ್ ಕ್ರೀಡೆಯನ್ನು ಮತ್ತಷ್ಟು ಪ್ರೋತ್ಸಾಹಿಸಲಿದ್ದೇವೆ' ಎಂದರು.

ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಸ್ಮರಣೀಯ ಅನುಭವ

ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಸ್ಮರಣೀಯ ಅನುಭವ

ಕಿಯಾ ಮೋಟಾರ್ಸ್ ಇಂಡಿಯಾಗೆ ಭಾರತದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಬಹಳ ಮಹತ್ವದ್ದು. 2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ಅಫೀಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್ ಬಳಿಕ ಭಾರತದ ಕ್ರೀಡಾಕೂಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಮಹತ್ತರ ಹೆಜ್ಜೆಯಾಗಿದೆ. ಕಿಯಾ ಒಂದು ಬ್ರ್ಯಾಂಡ್ ಆಗಿ ಸದಾ ಹೊಸತನವನ್ನು ಮೈಗೂಡಿಸಿಕೊಂಡಿರುತ್ತದೆ ಮತ್ತು ಬೆಂಗಳೂರಿನ ಎಫ್ ಸಿಯೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಆಟೋ ಮೊಬೈಲ್ ಗಳನ್ನು ಮೀರಿದ ಕ್ರೀಡಾ ಸ್ಪೂರ್ತಿಯನ್ನು ಬೆಂಬಲಿಸುತ್ತದೆ.

ಸಹಭಾಗಿತ್ವದ ಕುರಿತು ಮಾತನಾಡಿದ ಕಿಯಾ ಮೋಟಾರ್ಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುಕ್ಯೂನ್ ಶಿಮ್, "ವಿಶ್ವದರ್ಜೆಯ ಕಾರುಗಳನ್ನು ಒದಗಿಸುವ ನಾವು ಕ್ರೀಡೆಯ ಕುರಿತೂ ಆಸಕ್ತಿ ಹೊಂದಿದ್ದೇವೆ. ನಮ್ಮ ಇತ್ತೀಚಿನ ಹಾಗೂ ಹಿಂದಿನ ಪಾಲುದಾರಿಕೆಯನ್ನು ಗಮನಿಸಿದರೆ ವಿಶ್ವಾದ್ಯಂತ ನಮಗೆ ಕ್ರೀಡೆಯ ಮೇಲಿರುವ ಉತ್ಸಾಹದ ಸ್ಪಷ್ಟ ಮಾಹಿತಿ ಸಿಗುತ್ತದೆ.

ನಾವು ಈ ಪರಂಪರೆಯನ್ನು ಭಾರತಕ್ಕೆ ವಿಸ್ತರಿಸುವ ಜೊತೆಗೆ ವಿಶ್ವ ಕ್ರೀಡಾ ಸಮುದಾಯದ ಭಾಗವಾಗಲು ಯುವಕರನ್ನು ಪ್ರೇರೇಪಿಸುವ ಗುರಿ ಹೊಂದಿದ್ದೇವೆ. ಐಎಸ್ ಎಲ್ ನ ಯಶಸ್ವಿ ತಂಡವಾದ ಬೆಂಗಳೂರು ಎಪ್ ಸಿ ಗೆ ನಾವು ಸಹಕಾರ ನೀಡುತ್ತೇವೆ ಮತ್ತು ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಸ್ಮರಣೀಯ ಅನುಭವಗಳ ಅತ್ಯುತ್ತಮ ಕ್ರೀಡಾಋತುವನ್ನು ಆಯೋಜಿಸಲಿದ್ದೇವೆ" ಎಂದರು.

ಬೆಂಗಳೂರು ಎಫ್ ಸಿ ನಾಯಕ ಸುನಿಲ್ ಚೆಟ್ರಿ

ಬೆಂಗಳೂರು ಎಫ್ ಸಿ ನಾಯಕ ಸುನಿಲ್ ಚೆಟ್ರಿ

ಕಳೆದ ಐದು ಕ್ರೀಡಾಋತುಗಳಲ್ಲಿ ನೀಲಿ ಬಣ್ಣದ ಅಂಗಿಯಲ್ಲಿ ಮಿಂಚಿದ್ದ ಬೆಂಗಳೂರು ಎಫ್ ಸಿ ನಾಯಕ ಸುನಿಲ್ ಚೆಟ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಿಯಾ ಲೋಗೋ ಹೊಂದಿರುವ ಜೆರ್ಸಿ ಬಿಡುಗಡೆ ಸಂದರ್ಭ ಮಾತನಾಡಿದ ಸುನಿಲ್ ಚೆಟ್ರಿ, "ನಾನು ಬೆಂಗಳೂರು ಎಫ್ ಸಿ ಬೆಳೆದು ಬಂದ ದಾರಿಯನ್ನು ಮೊದಲ ದಿನದಿಂದಲೂ ನೋಡುತ್ತಿದ್ದೇನೆ. ಕಳೆದ ಕೆಲ ಋತುಗಳಲ್ಲಿ ನಾವು ಬಹು ದೊಡ್ಡ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಈ ಸಂಘವು ಕ್ಲಬ್ ಅನ್ನು ಮತ್ತಷ್ಟು ಬೆಳೆಸುವ ಉದ್ದೇಶ ಹೊಂದಿದೆ.

ಕಿಯಾ ಫುಟ್ಬಾಲ್ ನ ಜಾಗತಿಕ ರಾಯಭಾರಿಯಾಗಿದ್ದು ಮತ್ತು ಕಿಯಾ ಅವರ ಅಫೀಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್ ಆರಂಭಕ್ಕಾಗಿ ತೀರ್ಪುಗಾರರ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ಮೊದಲ ಬಾರಿಗೆ ಫೀಫಾ ವಿಶ್ವಕಪ್ 2018 ಕ್ಕೆ ಭಾರತದಿಂದ ಆಫೀಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್ಸ್ ಮುಖಾಂತರ ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಈ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹ ಸಿಗುವ ವಿಶ್ವಾಸವಿದೆ" ಎಂದರು.

ಕಿಯಾ ಮೋಟಾರ್ಸ್ ಭಾರತ (ಕೆಎಂಐ): 2017ರ ಏಪ್ರಿಲ್ ತಿಂಗಳಲ್ಲಿ ಕಿಯಾ ಮೋಟರ್ಸ್ ಅನಂತಪುರ ಜಿಲ್ಲೆಯಲ್ಲಿ ಹೊಸ ಉತ್ಪಾದನಾ ಘಟಕವನ್ನು ನಿರ್ಮಿಸಲು ಆಂಧ್ರಪ್ರದೇಶದ ರಾಜ್ಯ ಸರಕಾರದೊಂದಿಗೆ ಮೆಮೊರಾಡಂ ಆಫ್ ಅಂಡರ್ ಸ್ಟ್ಯಾಂಡಿಂಗ್(ಎಂಒಒ)ಗೆ ಸಹಿ ಹಾಕಿತು. ಭಾರತದಲ್ಲಿ ಕಿಯಾ ಮೋಟಾರ್ಸ್ ನ ಮೊದಲ ಉತ್ಪಾದನಾ ಘಟಕ ನಿರ್ಮಾಣವಾಗುತ್ತಿದೆ. ಉತ್ಪಾದನಾ ಘಟಕವು 2019 ರ ದ್ವಿತೀಯಾರ್ಧದ ವೇಳೆಗೆ ಉತ್ಪಾದನೆ
ಆರಂಭಿಸುವ ಗುರಿ ಇಟ್ಟುಕೊಂಡಿದೆ ಮತ್ತು ವರ್ಷಕ್ಕೆ ಸುಮಾರು 300,000 ಯುನಿಟ್ ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಕಿಯಾ ಮೋಟಾರ್ಸ್ ಕಾರ್ಪೊರೇಷನ್ ಬಗ್ಗೆ

ಕಿಯಾ ಮೋಟಾರ್ಸ್ ಕಾರ್ಪೊರೇಷನ್ ಬಗ್ಗೆ

ಕಿಯಾ ಮೋಟಾರ್ಸ್ ಕಾರ್ಪೊರೇಷನ್: 1944ರಲ್ಲಿ ಯುವಕರಿಗೆಂದೇ ಸ್ಥಾಪಿತವಾದ ವಿಶ್ವದರ್ಜೆಯ ಗುಣಮಟ್ಟದ ವಾಹನಗಳ ತಯಾರಕ. ಇದು ಕೊರಿಯಾದ ಅತಿ ಹಳೆಯ ಮೋಟಾರು ವಾಹನ ತಯಾರಕ ಕಂಪೆನಿಯಾಗಿದೆ. ಪ್ರತಿವರ್ಷ ಸುಮಾರು 3 ದಶಲಕ್ಷ ಕಿಯಾ ವಾಹನಗಳು ಐದು ದೇಶಗಳಲ್ಲಿ 14 ತಯಾರಿಕಾ ಮತ್ತು ಜೋಡಣೆ ಘಟಕಗಳಲ್ಲಿ ತಯಾರಾಗುತ್ತದೆ. ಬಳಿಕ ವಿತರಕರು ಮತ್ತು ಮಾರಾಟಗಾರರ ಸಂಪರ್ಕ ದ ಮೂಲಕ 180 ದೇಶಗಳಲ್ಲಿ ಮಾರಾಟ ಹೊಂದುತ್ತದೆ.

ಕಿಯಾ ಇಂದು ವಿಶ್ವಾದ್ಯಂತ 51,000 ಉದ್ಯೋಗಿಗಳನ್ನು ಹೊಂದಿದೆ ಮತ್ತು ಡಾಲರ್ 47 ಶತಕೋಟಿಯ ವಾರ್ಷಿಕ ಆದಾಯವನ್ನು ಹೊಂದಿದೆ. ಇದು ಆಸ್ಟ್ರೇಲಿಯನ್ ಓಪನ್ ನ ಪ್ರಮುಖ ಪ್ರಾಯೋಜಕ ಪಡೆದಿದೆ ಮತ್ತು ಫೀಫಾ ವಿಶ್ವಕಪ್ TM ನ ಆಡಳಿತ ಮಂಡಳಿಯ ಅಧಿಕೃತ ವಾಹನ ಪಾಲುದಾರನಾಗಿದೆ. ಕಿಯಾ ಮೋಟರ್ಸ್ ಕಾರ್ಪೋರೇಶನ್ ಬ್ರ್ಯಾಂಡ್ನ ಸ್ಲೋಗನ್ - "ದಿ ಪವರ್ ಆಫ್ ಸಪ್ರ್ರೈಸ್" . ಇದು ನಿರೀಕ್ಷೆಗೆ ಮೀರಿದ ಅದ್ಭುತ ಅನುಭವಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಜಗತ್ತನ್ನೇ ಅಚ್ಚರಿಗೊಳಿಸುವ ಜಾಗತಿಕ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಬೆಂಗಳೂರು ಎಫ್ ಸಿ: ಜೆಎಎಸ್ ಡಬ್ಲ್ಯೂ ಗ್ರೂಪ್ ಮಾಲೀಕತ್ವ ಹೊಂದಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ 2013ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಭಾರತೀಯ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಬಿಎಫ್ ಸಿಯ ನೀಲಿ ಆಟಗಾರರು ಎಂದು ಪ್ರೀತಿಯಿಂದ ಕರೆಯಲ್ಪಡುವ ಈ ತಂಡ ಎರಡು ಬಾರಿ ಐ-ಲೀಗ್ ಮತ್ತು ಫೆಡರೇಶನ್ ಕಪ್ ನ ವಿಜೇತರಾಗಿದ್ದಾರೆ.

2016 ರಲ್ಲಿ ಕತಾರ್ ನ ದೋಹಾದಲ್ಲಿ ನಡೆದ ಎಎಫ್ಸಿ ಸ್ಪರ್ಧೆಯ ಫೈನಲ್ ಪಂದ್ಯವನ್ನು ಆಡಿದ ಏಕೈಕ ಕ್ಲಬ್ ಇದಾಗಿದೆ. ಪಾಲ್ಗೊಂಡ ಮೊದಲ ವರ್ಷದಲ್ಲೇ ಇಂಡಿಯನ್ ಸೂಪರ್ ಲೀಗ್ ನ ಅಂತಿಮ ಹಂತ ಪ್ರವೇಶಿಸಿದ ಬಳಿಕ ಕ್ಲಬ್ ಆರಂಭಿಕ ಸೂಪರ್ ಕಪ್ ಅನ್ನೂ ಗೆದ್ದುಕೊಂಡಿತು. ಅಸ್ತಿತ್ವಕ್ಕೆ ಬಂದ ಬಳಿಕ ಈವರೆಗೆ ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

Story first published: Sunday, October 7, 2018, 12:46 [IST]
Other articles published on Oct 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X