ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾದಲ್ಲಿ ಫ್ರಾನ್ಸ್ ಗೆಲುವು: ಟ್ರೋಲ್ ಆಗಿದ್ದು ಕಿರಣ್ ಬೇಡಿ!

ಪುದುಚೇರಿ, ಜುಲೈ 16: ಫೀಫಾ ಫುಟ್ಬಾಲ್ ವಿಶ್ವಕಪ್ ನಲ್ಲಿ ಗೆದ್ದಿದ್ದು ಫ್ರಾನ್ಸ್, ಸೋತಿದ್ದು ಕ್ರೊವೇಷಿಯಾ. ಆದ್ರೆ ಟ್ರೋಲ್ ಆಗಿದ್ದು ಮಾತ್ರ ಕಿರಣ್ ಬೇಡಿ!

ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ಯಾರೂ ಟ್ರೋಲಾತೀತರಲ್ಲ! ಟ್ರೋಲಿಗೆ ಸಾಮಾನ್ಯ ಮನುಷ್ಯನೂ ಒಂದೇ, ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯೂ ಒಂದೇ!

ಕ್ರೊವೇಷಿಯಾಕ್ಕೆ ಸೋಲು: ಫೀಫಾ ವಿಶ್ವಕಪ್ 2018ಕ್ಕೆ ಫ್ರಾನ್ಸ್ ಚಾಂಪಿಯನ್! ಕ್ರೊವೇಷಿಯಾಕ್ಕೆ ಸೋಲು: ಫೀಫಾ ವಿಶ್ವಕಪ್ 2018ಕ್ಕೆ ಫ್ರಾನ್ಸ್ ಚಾಂಪಿಯನ್!

ಹೌದು, ಪುದುಚೇರಿಯ ರಾಜ್ಯಪಾಲರಾಗಿರುವ ಬಿಜೆಪಿ ನಾಯಕಿ ಕಿರಣ್ ಬೇಡಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ! ಜು.15 ರಂದು ನಡೆದ ಫಿಫಾ 2018 ರ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ವಿರುದ್ಧ 4-2 ಗೋಲುಗಳ ಭರ್ಜರಿ ಜಯ ದಾಖಲಿಸಿತು. ವಿಶ್ವ ಚಾಂಪಿಯನ್ ಆದ ಫ್ರಾನ್ಸ್ ಗೆ ಅಭಿನಂದನೆ ಸಲ್ಲಿಸುವ ಅವಸರದಲ್ಲಿ ಕಿರಣ್ ಬೇಡಿ ಒಂದು ಎಡವಟ್ಟು ಮಾಡಿದರು!

ಅಷ್ಟಕ್ಕೂ ಏನಿದು ವಿವಾದ? ಕಿರಣ್ ಬೇಡಿ ಅವರ ಟ್ವೀಟ್ ನಲ್ಲಿ ವಿವಾದವಾಗುವಂಥದ್ದು ಏನಿತ್ತು? ಮುಂದೆ ಓದಿ...

ಕಿರಣ್ ಬೇಡಿ ಟ್ವೀಟ್

'ನಾವು ಪುದುಚೇರಿಗಳು ವಿಶ್ವ ಕಪ್ ಗೆದ್ದಿದ್ದೇವೆ. ಅಭಿನಂದನೆಗಳು ಗೆಳೆಯರೇ' ಎಂದು ಬೇಡಿ ಟ್ವೀಟ್ ಮಾಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಪುದುಚೇರಿಯಲ್ಲಿ ಫ್ರೆಂಚರು ವಸಾಹತು ಸ್ಥಾಪಿಸಿದ್ದರು ಎಂಬ ಕಾರಣಕ್ಕೆ ಬೇಡಿ ಈ ರೀತಿ ಟ್ವೀಟ್ ಮಾಡಿದ್ದರು. ಆದರೆ ಅವರ ಈ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಮಾತನ್ನು ಕಾಂಗ್ರೆಸ್ಸಿಗರು ಹೇಳಿದ್ದರೆ?

ಕಲ್ಪಿಸಿಕೊಳ್ಳಿ. ಕಿರಣ್ ಬೇಡಿ ಅವರು ಹೇಳಿದ ಮಾತನ್ನೇ ಕಾಂಗ್ರೆಸ್ಸಿಗರ್ಯಾರಾದರೂ ಹೇಳಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಬಿಜೆಪಿಯವರು ಆ ವ್ಯಕ್ತಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದು ವಿಜಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಎಲ್ಲವನ್ನೂ ಅವರು ಮರೆತಿರಬೇಕು!

ಸಂಭ್ರಮಿಸುವುದು ಒಂದು ವಿಷಯ. ಆದರೆ ನಮ್ಮ ದೇಶದಲ್ಲಿ ವಸಾಹತು ಸ್ಥಾಪಿಸಿದವರ ಬಗ್ಗೆ ಹೆಮ್ಮೆ ಪಡುವುದು ಎಂದರೆ ಅದನ್ನು ಏನೆಂದು ಕರೆಯಬೇಕು? ಬಹುಶಃ ವಸಾಹತುಶಾಹಿಗಳು ನಮಗೇನು ಮಾಡಿದರು ಎಂಬುದನ್ನು ಮೇಡಂ ಅವರು ಮರೆತಿರಬೇಕು! ಎಂದಿದ್ದಾರೆ ರಾಹುಲ್ ಕಪೂರ್

ಜಸ್ಟ್ ಆಸ್ಕಿಂಗ್!

ಕಿರಣ್ ಬೇಡಿ ಅವರ ಈ ಟ್ವೀಟ್ ಅನ್ನು ರಾಷ್ಟ್ರದ್ರೋಹ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದ್ದಾರೆ ವೆಂಕಟೇಶ್ ಬಾಳಿಗಾ.

ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿದ್ದೆವು!

"ನಾವು ಫ್ರೆಂಚ್ ವಸಾಹತುಶಾಹಿಗಳು ಎಂದು ವೀವು ಖುಷಿಪಡುತ್ತಿದ್ದೀರಿ. ನಾವು ಮೂರ್ಖಜನರು ನಿಮ್ಮನ್ನು ದೆಹಲಿಯ ಮುಖ್ಯಮಂತ್ರಿಯನ್ನಾಗಿ ಮಾಡುವ ಕನಸು ಕಂಡಿದ್ದೆವು. ಏನೇ ಆಗಲಿ ನೀವೀಗ ಭಾರತೀಯ ನೆಲದಲ್ಲಿಯೇ ರಾಜ್ಯಪಾಲರಾಗಿದ್ದೀರಿ" ಎಂದಿದ್ದಾರೆ ಅಭಿಷೇಕ್ ರಾಜಾ.

ನಾವು ಒಂದೇ ಕುಟುಂಬದಂತೆ!

ಯಾರ್ಯಾರು ಇಲ್ಲಿ ಟ್ರೋಲ್ ಮಾಡುತ್ತಿದ್ದಾರೋ, ಅವರಿಗೆಲ್ಲ ಒಂದು ಮಾತು. ಪಾಂಡಿಚೇರಿಯಲ್ಲಿ ಸಾಕಷ್ಟು ಜನ ಫ್ರೆಂಚರು ವಾಸವಿದ್ದಾರೆ. ನಾವೆಲ್ಲ ಒಂದೇ ಕುಟುಂಬದಂತಿದ್ದೇವೆ. ಆದ್ದರಿಂದ ನಾವೆಲ್ಲ ಫ್ರಾನ್ಸ್ ನ ಜಯವನ್ನು ಸಂಭ್ರಮಿಸಿದ್ದೇವೆ. ನಾವೆಲ್ಲ ಹೆಮ್ಮೆಯ ಭಾರತೀಯರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಫ್ರೆಂಚ್ ಜನರು ನಮಗೆ ಕುಟುಂಬವಿದ್ದಂತೆ. ಹೀಗೆ ಎಲ್ಲರನ್ನೂ ಪ್ರೀತಿಸುವುದನ್ನು ನಾವು ಕಲಿಯಬೇಕು ಎಂದು 'ಯುನೈಟೆಡ್ ವಿ' ಎಂಬ ಟ್ವೀಟ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

Story first published: Monday, July 16, 2018, 13:26 [IST]
Other articles published on Jul 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X