ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗೆದ್ದಿದ್ದೆಲ್ಲ ದಾನ ಮಾಡಿದ ಫ್ರೆಂಚ್ ಸ್ಟ್ರೈಕರ್ ಕಿಲಿಯಾನ್ ಎಂಬಾಪೆ!

By Mahesh
ಗೆದ್ದಿದ್ದೆಲ್ಲ ದಾನ ಮಾಡಿದ ಫ್ರೆಂಚ್ ಸ್ಟ್ರೈಕರ್ ಕಿಲಿಯಾನ್ ಎಂಬಾಪೆ! | Oneindia Kannada
Kylian Mbappe is donating his World Cup salary and bonus to a childrens charity

ಬೆಂಗಳೂರು, ಜುಲೈ 16: ರಷ್ಯಾದಲ್ಲಿ ನಡೆದ 'ಬ್ಯೂಟಿಫುಲ್ ಗೇಮ್' ಫುಟ್ಬಾಲ್ ನ ಜಾಗತಿಕ ಹಬ್ಬದ ಸಂಭ್ರಮ ಕೊನೆಗೊಂಡಿದೆ. ಆದರೆ, 2018ರ ಚಾಂಪಿಯನ್ ಆದ ಫ್ರಾನ್ಸ್ ಸಂಭ್ರಮ ಮುಂದುವರೆದಿದೆ. ಫೀಫಾ 2018ರಲ್ಲಿ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ ಗೆದ್ದ ಕಿಲಿಯಾನ್ ಎಂಬಾಪೆ ತಮಗೆ ಸಿಕ್ಕ ಸಂಬಳ, ಬೋನಸ್ ಎಲ್ಲವನ್ನು ದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜುಲೈ 15ರಂದು ನಡೆದ ಅಂತಿಮ ಹಣಾಹಣಿಯಲ್ಲಿ ಫ್ರಾನ್ಸ್ ತಂಡವು 4-2 ಅಂತರದಲ್ಲಿ ಕ್ರೋವೇಷಿಯಾ ತಂಡವನ್ನು ಸೋಲಿಸಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಕ್ಯಾನ್ಸರ್ ಪೀಡಿತರಿಗೆ ಹಣ ಹಂಚಿದ ಫುಟ್ಬಾಲ್ ತಾರೆಯರುಕ್ಯಾನ್ಸರ್ ಪೀಡಿತರಿಗೆ ಹಣ ಹಂಚಿದ ಫುಟ್ಬಾಲ್ ತಾರೆಯರು

1958ರಲ್ಲಿ ಪೀಲೆ ನಂತರ ಫೀಫಾ ವಿಶ್ವಕಪ್ ನಲ್ಲಿ ಗೋಲು ಬಾರಿಸಿದ ಸಾಧನೆ ಮಾಡಿದ ಎಂಬಾಪೆ(19) ಶ್ರೇಷ್ಠ ಯುವ ಫುಟ್ಬಾಲ್ ಪಟು :(21 ವರ್ಷ ವಯಸ್ಸಿನೊಳಗಿನ ಯುವ ಆಟಗಾರರಿಗೆ ನೀಡುವ ಪ್ರಶಸ್ತಿ) ಎನಿಸಿಕೊಂಡರು.

1
958085

ಫ್ರೆಂಚ್ ತಂಡದ ಸ್ಟ್ರೈಕರ್ ಆಗಿ ಪಡೆಯುತ್ತಿರುವ 19,250 ಯುರೋ (17,000 ಪೌಂಡ್), ಇದಲ್ಲದೆ 300,000 ಯುರೋ (265,000 ಪೌಂಡ್) ಬೋನಸ್ ಮೊತ್ತವನ್ನು ಅಂಗವಿಕಲ ಹಾಗೂ ನಿರ್ಗತಿಕ ಮಕ್ಕಳ ಕ್ರೀಡಾ ತರಬೇತಿಗಾಗಿ ಬಳಸಲು ದಾನ ಮಾಡಿದ್ದಾರೆ ಎಂದು ಪ್ರೀಮಿರ್ಸ್ ಡಿ ಕಾರ್ಡಿ ಸಂಸ್ಥೆಯ ಮ್ಯಾನೇಜರ್ ಸೆಬಾಸ್ಟಿನ ರಫಿನ್ ತಿಳಿಸಿದ್ದಾರೆ.

ಕೇನ್, ಮೊಡ್ರಿಚ್, ಎಂಬಾಪೆ ಸೇರಿದಂತೆ ವಿಶ್ವಕಪ್ ಪ್ರಶಸ್ತಿ ವಿಜೇತರು ಕೇನ್, ಮೊಡ್ರಿಚ್, ಎಂಬಾಪೆ ಸೇರಿದಂತೆ ವಿಶ್ವಕಪ್ ಪ್ರಶಸ್ತಿ ವಿಜೇತರು

ಪ್ಯಾರೀಸ್ ಸೈಂಟ್ ಜರ್ಮನ್ ತಂಡದ ಪರ ಆಡುತ್ತಿರುವ ಎಂಬಾಪೆ ಅವರು ಕಳೆದ ಸೀಸನ್ ನಲ್ಲಿ 21 ಗೋಲು ಬಾರಿಸಿದ್ದರು. ಈಗ ರಿಯಲ್ ಮ್ಯಾಡ್ರೀಡ್ ತೊರೆಯುತ್ತಿರುವ ಕ್ರಿಶ್ಚಿಯಾನೋ ರೊನಾಲ್ಡೋ ಬದಲಿಗೆ ರಿಯಲ್ ಮ್ಯಾಡ್ರೀಡ್ ಸೇರಲಿದ್ದಾರೆ ಭಾರಿ ಮೊತ್ತಕ್ಕೆ ಒಪ್ಪಂದವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸುದ್ದಿಯನ್ನು ಎಂಬಾಪೆ ಅಲ್ಲಗೆಳೆದಿದ್ದಾರೆ.

Story first published: Monday, July 16, 2018, 21:33 [IST]
Other articles published on Jul 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X