ಲಾ ಲೀಗಾ: ಹತ್ತು ವರ್ಷದ ಬಳಿಕ ಬಾರ್ಸಿಲೋನಾವನ್ನು ಮಣಿಸಿದ ಅಟ್ಲೆಟಿಕೋ ಮಾಡ್ರೀಡ್

ಅಟ್ಲೆಟಿಕೊ ಮ್ಯಾಡ್ರಿಡ್ ತಂಡ ಸುಮಾರು ಒಂದು ದಶಕದ ಬಳಿಕ ಬಾರ್ಸಿಲೋನಾ ವಿರುದ್ಧದ ಮೊದಲ ಲಾ ಲಿಗಾ ಜಯವನ್ನು ದಾಖಲಿಸಿದೆ. ಈ ಮೂಲಕ ಹೊಸ ಹುಮ್ಮಸ್ಸಿನಲ್ಲಿ ಲಾ ಲೀಗಾ ಟೂರ್ನಿಯಲ್ಲಿ ಅಭಿಯಾನ ಮುಂದುವರಿಸಿದೆ. ಈ ಪಂದ್ಯದಲ್ಲಿ ಮ್ಯಾಡ್ರೀಡ್ 1-0 ಅಂತರದ ಗೆಲುವು ಸಾಧಿಸಿದೆ.

ಯಾನಿಕ್ ಕ್ಯಾರಸ್ಕೊ ಬಾರ್ಸಿಲೋನಾ ಗೋಲ್ ಕೀಪರ್ ಮಾರ್ಕ್-ಆಂಡ್ರೆ ಟೆರ್ ಸ್ಟೆಜೆನ್ ಅವರು ಮಾಡಿದ ಎಡವಟ್ಟನ್ನು ಲಾಭದಾಯಕವಾಗಿ ಬಳಸಿಕೊಂಡರು. ಈ ಮೂಲಕ ಒಮದು ಗೋಲು ದಾಖಲಿಸಿಕೊಳ್ಳುವಲ್ಲಿ ಅಟ್ಲೆಟಿಕೋ ಮ್ಯಾಟ್ರೋಡ್ ತಂಡ ಯಶಸ್ವಿಯಾಯಿತು. ಈ ಅಂತರವನ್ನು ಅಂತ್ಯದವರೆಗೂ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಐಎಲ್‌ಎಲ್ 2020-21: ಮುಂಬೈ ಸಿಟಿ ವಿರುದ್ಧ ನಾರ್ಥ್ ಈಸ್ಟ್ ದಿ ಬೆಸ್ಟ್

ಲಿಯೋನೆಲ್ ಮೆಸ್ಸಿ ಕಳೆದ ಋತುವಿನಲ್ಲಿ ಅಂತಿಮ ಹಂತದಲ್ಲಿ ಒಂದು ಗೋಲಿನೊಂದಿಗೆ ಪಂದ್ಯವನ್ನು ಗೆದ್ದಿದ್ದರು. ಆದರೆ ಬಾರ್ಸಿಲೋನಾ ನಾಯಕ ಈ ಬಾರಿ ಆ ಪ್ರದರ್ಶನ ಮರೆತುಹೋಗುವಂತೆ ಆಡಿದರು. ಹೀಗಾಗಿ ಅಟ್ಲೆಟಿಕೋ ಮ್ಯಾಡ್ರೀಡ್ ತಂಡಕ್ಕೆ ಹೆಚ್ಚು ಅಪಾಯವನ್ನು ತಂದೊಡ್ಡಲಿಲ್ಲ.

ಈ ಗೆಲುವಿನೊಂದಿಗೆ ಅಟ್ಲೆಟಿಕೋ ಮ್ಯಾಡ್ರಡ್ ತಂಡ ಈ ಬಾರಿಯ ಲಾ ಲೀಗಾ ಆವೃತ್ತಿಯ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ರಿಯಲ್ ಸೊಸೈಡಾಡ್ ಪಡೆದ 20 ಅಂಕಗಳಷ್ಟನ್ನೇ ಅಟ್ಲೆಟಿಕೋ ಮ್ಯಾಡ್ರೀಡ್ ಕೂಡ ಪಡೆದುಕೊಂಡಿದೆ.

ಇನ್ನು ಈ ಸೋಲಿನೊಂದಿಗೆ ಬಾರ್ಸಿಲೋನಾ 10ನೇ ಸ್ಥಾನಕ್ಕೆ ಕುಸಿದಿದೆ. ಬಾರ್ಸಿಲೋನಾ ಖಾತೆಯಲ್ಲಿ ಸದ್ಯ 11 ಅಂಕಗಳು ಇದೆ. ಕಳೆದ 8 ಪಂದ್ಯಗಳಲ್ಲಿ ಬಾರ್ಸಿಲೋನಾ ಕಂಡ ಮೂರನೇ ಸೋಲು ಇದಾಗಿದೆ. ಟೂರ್ನಿಯಲ್ಲಿ 3 ಸೋಲು ಹಾಗೂ 2 ಪಂದ್ಯಗಳನ್ನು ಬಾರ್ಸಿಲೋನಾ ಡ್ರಾ ಮಾಡಿಕೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, November 22, 2020, 16:02 [IST]
Other articles published on Nov 22, 2020
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X