ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ ತಂಡಕ್ಕೆ ಗೋವಾ ವಿರುದ್ಧ ರೋಚಕ ಜಯ

Last-ditch penalty gives Lobera the last laugh over Goa

ಗೋವಾ, ನವೆಂಬರ್, 25, 2020: ಅಂತಿಮ ಕ್ಷಣದಲ್ಲಿ ಗ್ಲೆನೆವಿಲ್ಲೆ ಲೆ ಫಾಂಡ್ರೆ ಗಳಿಸಿದ ಪೆನಾಲ್ಟಿ ಗೋಲಿನಿಂದ ಎಫ್ ಸಿ ಗೋವಾ ತಂಡದ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಪ್ರಸಕ್ತ ಹೀರೋ ಇಂಡಿಯನ್ ಋತುವಿನಲ್ಲಿ ಮೊದಲ ಜಯ ದಾಖಲಿಸಿದೆ. ಹಲವಾರು ಅವಕಾಶಗಳನ್ನು ಕೈ ಚೆಲ್ಲಿದ ಮುಂಬೈ ಅಂತಿಮವಾಗಿ ಗೋವಾ ಆಟಗಾರನ ಕೈಗೆ ಪೆನಾಲ್ಟಿ ವಲಯದಲ್ಲಿ ಚೆಂಡು ತಗಲಿದ ಕಾರಣ ಪೆನಾಲ್ಟಿಗೆ ಅವಕಾಶ ಕಲ್ಪಿಸಲಾಯಿತು.

ಗೋಲಿಲ್ಲದ ಪ್ರಥಮಾರ್ಧ: ಇಲ್ಲಿ ಇತ್ತಂಡಗಳಿಗೆ ಜಯದ ಅಗತ್ಯ ಇದೆ. ಗೋವಾ ಗೆಲ್ಲುವ ಫೇವರಿಟ್ ತಂಡವಾಗಿ ಅಂಗಣಕ್ಕಿಳಿದಿತ್ತು. ಆದರೆ ಮುಂಬೈ ಉತ್ತಮ ರೀತಿಯಲ್ಲಿ ಸವಾಲನ್ನೊಡಡ್ಡಿದ ಕಾರಣ ಗೊವಾ ಗೋಲು ಗಳಿಸಲು ಹರ ಸಾಹಸ ಪಡಬೇಕಾಯಿತು. ಅವಕಾಶ ಇತ್ತಂಡಗಳಿಗೂ ಸಿಕ್ಕದರೂ ಅದದು ಗೋಲಾಗಿ ರೂಪುಗೊಳ್ಳಲಿಲ್ಲ. ಗೋವಾ ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿತ್ತು. ಆದರೆ ಗೋವಾ ತಂಡ ಮುಂದಿನ 45 ನಿಮಿಷಗಳ ಪಂದ್ಯವನ್ನು ಕೇವಲ 10 ಮಂದಿ ಆಟಗಾರರಲ್ಲೇ ಆಡಬೇಕಾಗಿದೆ. 40ನೇ ನಿಮಿಷದಲ್ಲಿ ರೆಡೀಮ್ ತಾಂಗ್ ಮುಂಬೈಯ ಹೆರ್ನಾಲ್ ಡೇನಿಯಲ್ ಸ್ಯಾಂಟನಾ ತ್ರುಜಿಲೊ ಅವರನ್ನು ಕೆಡಹಿದ ಕಾರಣ ರೆಫರಿ ತಡಮಾಡದೆ ನೇರವಾಗಿ ರೆಡ್ ಕಾರ್ಡ್ ನೀಡಿದರು. ಮುಂಬೈ ಸಿಟಿ ತಂಡ ಕೂಡ ಮೊದಲ ಪಂದ್ಯದಲ್ಲಿ ಇದೇ ರೀತಿಯ ಸಮಸ್ಯೆ ಎದುರಿಸಿತ್ತು. ಅಲ್ಲಿ ನಾರ್ಥ್ ಈಸ್ಟ್ ಇದರ ಸದುಪಯೋಗ ಪಡೆದು ಗೋಲು ಗಳಿಸಿತ್ತು. ಮುಂಬೈ ತಂಡ ಇದರ ಸದುಪಯೋಗ ಮಾಡಿಕೊಳ್ಳುತ್ತದೋ ಕಾದು ನೋಡಬೇಕು.

ಐಎಸ್‌ಎಲ್: ಮಿಂಚಿದ ಥಾಪಾ, ಚೆನ್ನೈಯಿನ್ ತಂಡದ ಜಯದ ಆರಂಭಐಎಸ್‌ಎಲ್: ಮಿಂಚಿದ ಥಾಪಾ, ಚೆನ್ನೈಯಿನ್ ತಂಡದ ಜಯದ ಆರಂಭ

ಜಯದ ಗುರಿ: ಬೆಂಗಳೂರು ಎಫ್ ಸಿ ವಿರುದ್ಧ ಅಂಕ ಹಂಚಿಕೊಂಡ ಎಫ್ ಸಿ ಗೋವಾ ತಂಡ ಮುಂಬೈ ಸಿಟಿ ವಿರುದ್ಧ ಜಯದ ಖಾತೆ ತೆರೆಯಲು ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎರಡನೇ ಪಂದ್ಯವನ್ನು ಆಡಲಿದೆ. ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಮುಂಬೈ ಸಿಟಿ ಎಫ್ ಸಿ ತಂಡಕ್ಕೆ ಇಲ್ಲಿ ಜಯದ ಅಗತ್ಯ ಇದೆ. ಬೆಂಗಳೂರು ವಿರುದ್ಧದ ಮೊದಲ ಪಂದ್ಯದಲ್ಲಿ ಗೋವಾ ತಂಡ ಆರಂಭದಲ್ಲಿ ಸೋಲುವ ಲಕ್ಷಣ ತೋರಿತ್ತು, ಆದರೆ 4 ನಿಮಿಷಗಳ ಅಂತರದಲ್ಲಿ ಎರಡು ಗೋಲು ಗಳಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿತ್ತು. ಸ್ಪೇನ್ ನ ಫಾರ್ವರ್ಡ್ ಆಟಗಾರ ಐಗರ್ ಆಂಗಲೋ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಜುವಾನ್ ಫೆರಾಂಡೋ ಸೂಕ್ತ ಸಮಯದಲ್ಲಿ ಮಾಡಿದ ಬದಲಾವಣೆ ಪ್ರಮುಖ ಪಾತ್ರವಹಿಸಿತು. ಮುಂಬೈ ಸಿಟಿ ತಂಡದ ವಿರುದ್ಧ ಗೋವಾ ಯಾವಾಗಲೂ ಮೇಲುಗೈ ಸಾಧಿಸಿದೆ. 14 ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿವೆ, ಗೋವಾ 7 ಪಂದ್ಯಗಳನ್ನು ಗೆದ್ದು ಮೇಲುಗೈ ಕಂಡಿದೆ. ಮುಂಬೈ ಕೇವಲ ನಾಲ್ಕು ಬಾರಿ ಗೋವಾಕ್ಕೆ ಸೋಲುಣಿಸಿದೆ. ಸರ್ಗಿಯೋ ಲೊಬೆರಾ ಪಡೆ ನಾರ್ಥ್ ಈಸ್ಟ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿತ್ತು. ಹಿಂದಿನ ಸೋಲನ್ನು ಮರೆತು ಹೊಸ ಆರಂಭಕೆ ಮುಂಬೈ ಸಜ್ಜಾಯಿತು. ಮೊದಲ ಪಂದ್ಯದಲ್ಲಿ ರೆಡ್ ಕಾರ್ಡ್ ಗೆ ಗುರಿಯಾಗಿದ್ದ ಸ್ಟಾರ್ ಆಟಗಾರ ಅಹಮದ್ ಜಾಹುವಾ ಇಂದಿನ ಪಂದ್ಯದಿಂದ ವಂಚಿತರಾಗಿದ್ದಾರೆ.

Story first published: Thursday, November 26, 2020, 10:04 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X