ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬಾರ್ಸಿಲೋನಾ ತೊರೆಯಲು ಸಜ್ಜಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ

Lionel Messi Asks Barcelona To Relieve Him

ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಜಗತ್ತಿಗೆ ದೊಡ್ಡ ಆಘಾತವನ್ನು ನೀಡಿದ್ದಾರೆ. ಫುಟ್ಬಾಲ್‌ನ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಪ್ರತಿಷ್ಠಿತ ಲೀಗ್ ತಂಡ ಬಾರ್ಸಿಲೋನಾ ಜೊತೆಗಿನ ಸುದೀರ್ಘ ಕಾಲದ ಸಂಬಂಧವನ್ನು ಅಂತ್ಯಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ತಾನು ಬಾರ್ಸಿಲೋನಾ ಕ್ಲಬ್‌ನಿಂದ ಬಿಡುಗಡೆಗೊಳ್ಳುವುದನ್ನು ತಿಳಿಸಲು ಕ್ಲಬ್‌ಗೆ ಮೆಸ್ಸಿ ಪತ್ರವನ್ನು ಬರೆದಿದ್ದು ಈ ಸುದ್ದಿಯನ್ನು ಬಾರ್ಸಿಲೋನಾ ಕ್ಲಬ್ ಕೂಡ ಖಚಿತಪಡಿಸಿದೆ.

ಬ್ಯುರೋಫ್ಯಾಕ್ಸ್(ಸ್ಪ್ಯಾನಿಷ್ ಪೋಸ್ಟ್ ಆಫೀಸ್ ಮೂಲಕ ಕಳುಹಿಸುವ ರಿಜಿಸ್ಟರ್ ಪೋಸ್ಟ್) ಮೂಲಕ ರವಾನಿಸಿರುವ ಫುಟ್ಬಾಲ್ ದಿಗ್ಗಜನ ಪತ್ರ ಲಾ ಲೀಗಾ ದೈತ್ಯ ಎನಿಸಿಕೊಂಡಿರುವ ಬಾರ್ಸಿಲೋನಾಗೆ ತಲುಪುತ್ತಿದ್ದಂತೆಯೇ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದು ಈ ಬಗ್ಗೆ ಚರ್ಚೆಯನ್ನು ನಡೆಸಿದೆ.

ಬಾರ್ಸಿಲೋನಾಕ್ಕೆ ಹೊಸ ಕೋಚ್‌ ಆಗಿ ರೊನಾಲ್ಡ್ ಕೋಮನ್ ಆಯ್ಕೆಬಾರ್ಸಿಲೋನಾಕ್ಕೆ ಹೊಸ ಕೋಚ್‌ ಆಗಿ ರೊನಾಲ್ಡ್ ಕೋಮನ್ ಆಯ್ಕೆ

ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ಬಯೆರ್ನ್ ಮ್ಯೂನಿಚ್ ಎದುರು 2-8 ಅಂತರದಿಂದ ಹೀನಾಯ ಸೋಲನ್ನು ಕಂಡಿತ್ತು. ಕ್ಲಬ್ ಇತಿಹಾಸದಲ್ಲಿ ಹಾಗೂ ಫುಟ್ಬಾಲ್ ದಿಗ್ಗಜ ಮೆಸ್ಸಿ ವೃತ್ತಿ ಜೀವನದಲ್ಲಿ ಇದು ಅತ್ಯಂತ ಹೀನಾಯ ಸೋಲು ಎಂದು ವಿಶ್ಲೇಷಿಸಲಾಗಿತ್ತು. ಇದಾಗಿ ಕೆಲವೇ ಸಮಯಗಳಲ್ಲಿ ಲಿಯೋನೆಲ್ ಮೆಸ್ಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಈ ಸೋಲಿನೊಂದಿಗೆ ಬಾರ್ಸಿಲೋನಾ ಕ್ಲಬ್ ತಂಡದ ಅತ್ಯಂತ ಕಠಿಣ ಋತುವಿದು ಎಂದು ಕರೆಯಲಾಗಿದೆ. 2007-08ರ ಬಳಿಕ ಇದೇ ಮೊದಲ ಬಾರಿಗೆ ಬಾರ್ಸಿಲೋನಾ ತಂಡ ಇಡೀ ವರ್ಷದಲ್ಲಿ ಯಾವ ಪ್ರಶಸ್ತಿಯನ್ನೂ ಗೆಲ್ಲಸು ಸಾದ್ಯವಾಗಲಿಲ್ಲ. ಇದು ತಂಡದಲ್ಲಿ ಆಂತರಿಕವಾಗಿಯೂ ಸಂಘರ್ಷಕ್ಕೆ ಕಾರಣವಾಗಿದೆ.

ಮಿಲನ್ ಸೋಲಿಸಿ 6ನೇ ಯುರೋಪಾ ಲೀಗ್ ಟ್ರೋಫಿಗೆ ಮುತ್ತಿಕ್ಕಿದ ಸೆವಿಲ್ಲಾಮಿಲನ್ ಸೋಲಿಸಿ 6ನೇ ಯುರೋಪಾ ಲೀಗ್ ಟ್ರೋಫಿಗೆ ಮುತ್ತಿಕ್ಕಿದ ಸೆವಿಲ್ಲಾ

33 ರ ಹರೆಯದ ಲಿಯೋನೆಲ್ ಮೆಸ್ಸಿ ತಮ್ಮ ಈವರೆಗಿನ ಸಂಪೂರ್ಣ ಲೀಗ್ ವೃತ್ತಿ ಜೀವನವನ್ನು ಬಾರ್ಸಿಲೋನಾ ತಂಡಕ್ಕಾಗಿ ಆಡಿದ್ದಾರೆ. ಬಾರ್ಸಿಲೋನಾ ಪರವಾಗಿ 600 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿರುವ ಮೆಸ್ಸಿ 6 ಬ್ಯಾಲನ್ ಡಿ'ಓರ್ಸ್, ನಾಲ್ಕು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳು ಮತ್ತು 10 ಲಾ ಲಿಗಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Story first published: Wednesday, August 26, 2020, 14:24 [IST]
Other articles published on Aug 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X