ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮೆಸ್ಸಿ ನೋಡಲು ರಷ್ಯಾಕ್ಕೆ ಸೈಕಲಿನಲ್ಲಿ ಬಂದ ಕೇರಳದ ಫ್ಯಾನ್

By Mahesh
FIFA world cup 2018 : ಮೆಸ್ಸಿ ನೋಡಲು ರಷ್ಯಾಕ್ಕೆ ಸೈಕಲಿನಲ್ಲಿ ಬಂದ ಕೇರಳದ ಫ್ಯಾನ್
The 2018 FIFA World Cup fever has gripped India and fans all over the country are all doing all that they can to celebrate one of the biggest sporting events. Keralites, in particular, are known for their craze towards football and one such fan Clifin Francis, has proved his love for the sport. Lionel Messi fan from Kerala cycles all the way to Russia for FIFA World Cup

ಬೆಂಗಳೂರು, ಜೂನ್ 19: ಸ್ಟಾರ್ ಆಟಗಾರರಿಗೆ ಹುಚ್ಚು ಅಭಿಮಾನಿಗಳಿರುವುದು ಸಾಮಾನ್ಯ. ಇದು ಎಲ್ಲಾ ಕ್ರೀಡೆಗಳಲ್ಲಿ ಕಾಣಬಹುದು. ಅದೇ ರೀತಿ, ಅರ್ಜೆಂಟೀನಾದ ತಾರೆ ಲಿಯೊನೆಲ್ ಮೆಸ್ಸಿ ಅವರ ಅಭಿಮಾನಿಯೊಬ್ಬ ಭಾರತದಿಂದ ರಷ್ಯಾಕ್ಕೆ ಸೈಕಲ್ ಏರಿ ಬಂದಿದ್ದಾರೆ.

ರಷ್ಯಾದಲ್ಲಿ ಫೀಫಾ ವಿಶ್ವಕಪ್ 2018 ಭರ್ಜರಿ ಆರಂಭ ಪಡೆದಿದೆ. ಪ್ರತಿ ಪಂದ್ಯ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಮೆಸ್ಸಿ ಅಭಿಮಾನಿಯೊಬ್ಬರು ಕೇರಳದಿಂದ ಸುಮಾರು 4 ಸಾವಿರ ಕಿಲೋ ಮೀಟರ್ ಹಾದಿ ಸಾಗಿ ರಷ್ಯಾಕ್ಕೆ ಬಂದಿದ್ದಾರೆ. ಕೇರಳದಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದ ಕ್ಲಿಫಿನ್ ಫ್ರಾನ್ಸಿಸ್ ಅವರಿಗೆ ಮೆಸ್ಸಿ ಎಂದರೆ ಅಚ್ಚುಮೆಚ್ಚು.

ಆಲಪ್ಪುಳ ಜಿಲ್ಲೆಯ ತುರವೂರಿನ 28 ವರ್ಷದ ಫ್ರಾನ್ಸಿಸ್, ರಷ್ಯಾದ ಗಡಿಯೊಳಗೆ ಪ್ರವೇಶಿಸಿದ್ದಾರೆ. ತಮ್ಮ ಗುರಿ ತಲುಪಲು ಇನ್ನು 600 ಕಿ.ಮೀ ಸಾಗಬೇಕಿದೆ. ಮೆಸ್ಸಿ ಅವರಿಂದ ಸೈಕಲ್​ಗೆ ಆಟೋಗ್ರಾಫ್ ಪಡೆಯುವ ಉದ್ದೇಶ ಹೊಂದಿದ್ದಾರೆ.

ಕೇರಳದಿಂದ ದುಬೈಗೆ ವಿಮಾನಯಾನ ಮಾಡಿದ ಫ್ರಾನ್ಸಿಸ್ ಅಲ್ಲಿ ಸೈಕಲ್ ಖರೀದಿಸಿ ಯುಎಇ, ಇರಾನ್, ಅಜರ್​ಬೈಜಾನ್ ದೇಶಗಳ ಮೂಲಕ ರಷ್ಯಾ ತಲುಪಿದ್ದಾರೆ. 'ನಾನು ಬಾಲ್ಯದಿಂದಲೂ ಮೆಸ್ಸಿಯ ಅಪ್ಪಟ ಅಭಿಮಾನಿ. ವಿಶ್ವಕಪ್ ಫುಟ್​ಬಾಲ್ ಪಂದ್ಯ ನೋಡುವುದು ನನ್ನ ದೊಡ್ಡ ಕನಸು. ಅದು ಬಹಳ ದುಬಾರಿ. ಆದರೆ ನಾನು ಜೂನ್ 26ರಂದು ಫ್ರಾನ್ಸ್ ಮತ್ತು ಡೆನ್ಮಾರ್ಕ್ ತಂಡಗಳ ನಡುವಿನ ಪಂದ್ಯವನ್ನು ನೋಡಲಿದ್ದೇನೆ. ನಂತರ ನನ್ನ ಸೈಕಲ್ ಮೇಲೆ ಮೆಸ್ಸಿ ಅವರ ಹಸ್ತಾಕ್ಷರ ಪಡೆಯುವ ಗುರಿ ಹೊಂದಿದ್ದೇನೆ'ಎಂದು ಕ್ಲಿಫಿನ್ ಫ್ರಾನ್ಸಿಸ್ ಹೇಳಿದ್ದಾರೆ.

Story first published: Wednesday, June 20, 2018, 9:11 [IST]
Other articles published on Jun 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X