ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮರಡೋನಾಗೆ ಗೌರವ ಸಲ್ಲಿಸಿದ್ದ ಮೆಸ್ಸಿಗೆ 600 ಯುರೋ ದಂಡ

Lionel Messi fined 600 euros for paying tribute to Maradona

ಫುಟ್ಬಾಲ್ ಲೋಕದ ಶ್ರೇಷ್ಠ ಆಟಗಾರ ಡಿಯಾಗೋ ಮರಡೋನಾ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇಡೀ ಕ್ರೀಡಾ ಜಗತ್ತು ಮರಡೋನಾ ಸಾವಿಗೆ ಕಂಬನಿ ಮಿಡಿದಿತ್ತು. ಮರಡೋನಾ ಅವರ ನಿಧನಕ್ಕೆ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಗೌರವ ಸಲ್ಲಿಸಿದ ರೀತಿಗೆ ಹಾಲಿ ಫಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ದಂಡ ವಿಧಿಸಲಾಗಿದೆ.

ಭಾನುವಾರ ಒಸಾಸುನಾ ತಂಡದ ವಿರುದ್ಧ ಲಿಯೋನೆಸ್ ಮೆಸ್ಸಿ ಪ್ರತಿನಿಧಿಸುವ ಬಾರ್ಸಿಲೋನಾ ತಂಡ 4-0 ಅಂತರದ ಗೆಲುವನ್ನು ಸಾಧಿಸಿತು. ಈ ಸಂದರ್ಭದಲ್ಲಿ ಲಿಯೋನೆಲ್ ಮೆಸ್ಸಿ ಜರ್ಸಿಯನ್ನು ತೆಗೆದು ಮರಡೋನಾಗೆ ಗೌರವವನ್ನು ಸಲ್ಲಿಸಿದ್ದರು. ಈ ಕಾರಣಕ್ಕೆ ಮೆಸ್ಸಿಗೆ ಹಳದಿ ಕಾರ್ಡ್ ನೀಡಲಾಗಿತ್ತು. ಇದಕ್ಕಾಗಿ 600 ಯುರೋ ದಂಡವನ್ನು ಮೆಸ್ಸಿಗೆ ವಿಧಿಸಲಾಗಿದೆ.

ನಾಪೋಲಿ ಸ್ಟೇಡಿಯಂಗೆ ದಂತಕತೆ ಡಿಯಾಗೋ ಮರಡೋನಾ ಹೆಸರುನಾಪೋಲಿ ಸ್ಟೇಡಿಯಂಗೆ ದಂತಕತೆ ಡಿಯಾಗೋ ಮರಡೋನಾ ಹೆಸರು

ಲಿಯೋನೆಸ್ ಮೆಸ್ಸಿಗೆ 600 ಯುರೋ ದಂಡ ವಿಧಿಸಲಾಗಿದ್ದರೆ ಬಾರ್ಸಿಲೋನಾ ಕ್ಲಬ್‌ಗೆ 180 ಯುರೋ ದಂಡ ವಿಧಿಸಲಾಗಿದೆ. ಮರಡೋನಾ ನಿಧನಕ್ಕೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ತಮ್ಮ ಜರ್ಸಿಯ ಬದಲಾಗಿ ಮರಡೋನಾ ಅವರು ಧರಿಸಿದ್ದ ನೆವೆಲ್ಸ್‌ನ ಓಲ್ಡ್ಸ್ ಬಾಯ್ಸ್ ತಂಡದ ಕೆಂಪು ಹಾಗೂ ಕಪ್ಪು ಬಣ್ಣದ ಜರ್ಸಿಯನ್ನು ಮೆಸ್ಸಿ ಧರಿಸಿಕೊಂಡರು. ಇದು ವಿಶ್ವಾದ್ಯಂತ ಸಾಕಷ್ಟು ಮೆಚ್ಚುಗೆಯನ್ನು ಪಡೆದಿತ್ತು.

ಸ್ಪ್ಯಾನಿಷ್ ಸಾಕರ್ ಫೆಡರೇಶನ್‌ನ ಸ್ಪರ್ಧಾ ಸಮಿತಿಯು ನಿಯಮಗಳನ್ನು ಎತ್ತಿಹಿಡಿಯುವಾಗ ಸ್ವಲ್ಪ ಸಹಾನುಭೂತಿಯನ್ನು ತೋರಿಸಿತು. ಆದರೆ ಶಿಕ್ಷೆಯ ವಿರುದ್ಧ ಬಾರ್ಕಾದ ಪ್ರತಿಭಟನೆಯನ್ನು ತಿರಸ್ಕರಿಸಿತು. ಇದು ಮರಡೋನಾಗೆ ಗೌರವವಾಗಿರುವುದರಿಂದ ಅದನ್ನು ಮನ್ನಾ ಮಾಡಬೇಕು ಎಂಬ ಬಾರ್ಸಿಲೋನಾದ ಸಲಹೆಯನ್ನು ಫೆಡರೇಷನ್ ತಿರಸ್ಕರಿಸಿದೆ.

ಮರಡೋನಾ ಯಾವತ್ತಿಗೂ ಶಾಶ್ವತ: ದಿಗ್ಗಜನ ಅಗಲಿಕೆಗೆ ಮೆಸ್ಸಿ ಸಂತಾಪಮರಡೋನಾ ಯಾವತ್ತಿಗೂ ಶಾಶ್ವತ: ದಿಗ್ಗಜನ ಅಗಲಿಕೆಗೆ ಮೆಸ್ಸಿ ಸಂತಾಪ

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸ್ಪ್ಯಾನಿಶ್ ಸಾಕರ್ ಫೆಡರೇಷನ್ "ಈ ವರ್ತನೆಯನ್ನುಗೌರವ ಎಂದು ಒಪ್ಪಿಕೊಂಡರೂ, ಕಾರಣವನ್ನು ಪಕ್ಕಕ್ಕಿಟ್ಟು ಶಿಸ್ತಿನ ಸಂಹಿತೆಯ 93 ನೇ ವಿಧಿಯು ಆಟಗಾರನು ಆಚರಿಸುವಾಗ ಅವರ ಅಂಗಿಯನ್ನು ತೆಗೆದಿದ್ದಕ್ಕಾಗಿ ಶಿಕ್ಷೆ ಅನುಭವಿಸಬೇಕು" ಎಂದಿದೆ.

Story first published: Thursday, December 3, 2020, 12:54 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X