ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬಯಲಾಯಿತು ಮೆಸ್ಸಿಯ ಕಾಂಟ್ರಾಕ್ಟ್ ಡೀಲ್: ಕ್ರೀಡಾ ಇತಿಹಾಸದಲ್ಲಿ ದಾಖಲೆ ಮೊತ್ತದ ಒಪ್ಪಂದ

Lionel Messis contract with Barcelona leaked, it is biggest in sports history

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಹಾಗೂ ಬಾರ್ಸಿಲೋನಾ ಕ್ಲಬ್ ಜೊತೆಗಿನ ಒಪ್ಪಂದ ಈಗ ದೊಡ್ಡ ಸುದ್ದಿಯಾಗಿದೆ. ಬಾರ್ಸಿಲೋನಾ ಜೊತೆಗೆ ಮೆಸ್ಸಿಯ ಇತ್ತೀಚಿನ ಒಪ್ಪಂದ ನಾಲ್ಕು ಋತುಗಳಿಗೆ 555 ಮಿಲಿಯನ್ ಯುರೋ($673 ಮಿಲಿಯನ್) (ಭಾರತೀಯ ಮೌಲ್ಯ 4,900 ಕೋಟಿ ರೂಪಾಯಿಗೂ ಅಧಿಕ) ಮೌಲ್ಯದ್ದಾಗಿದೆ. ಇದು ಕ್ರೀಡಾ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಮೊತ್ತವಾಗಿದೆ.

ಸ್ಪ್ಯಾನಿಶ್ ವೃತ್ತ ಪತ್ರಿಕೆ ಎಲ್ ಮುಂಡೋ( El Mundo) ಈ ಬಗ್ಗೆ ವರದಿ ಮಾಡಿದೆ. 2017ರಲ್ಲಿ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಜೊತೆಗೆ ಮಾಡಿಕೊಂಡ ಒಪ್ಪಂದದ ದಾಖಲೆಗಳ ಪ್ರತಿ ತನ್ನ ಬಳಿ ಇದೆ ಎಂದು ಸ್ಪ್ಯಾನಿಶ್ ಪತ್ರಿಕೆ ಹೇಳಿಕೊಂಡಿದ್ದು ಇದು 30 ಪುಟಗಳಷ್ಟಿದೆ ಎಂದು ವರದಿ ಮಾಡಿದೆ. ಈ ಒಪ್ಪಂದ ಸ್ಥಿರ ಹಾಗೂ ಅಸ್ಥಿರ ಆದಾಯವನ್ನು ಹೊಂದಿದ್ದು ಅದರ ಮೌಲ್ಯ ಆವೃತ್ತಿಯೊಂದಕ್ಕೆ 138 ಮಿಲಿಯನ್ ಯುರೋ ಆಗಿದೆ ಎನ್ನಲಾಗಿದೆ.

 ಐಎಸ್‌ಎಲ್: ಮುಂಬೈ ದಾಖಲೆಗೆ ಬ್ರೇಕ್ ಹಾಕಿದ ದಿಶ್ರಾನ್ ಬ್ರೌನ್! ಐಎಸ್‌ಎಲ್: ಮುಂಬೈ ದಾಖಲೆಗೆ ಬ್ರೇಕ್ ಹಾಕಿದ ದಿಶ್ರಾನ್ ಬ್ರೌನ್!

ಈ ಬೃಹತ್ ಮೊತ್ತದ ಆದಾಯದಲ್ಲಿ ಲಿಯೋನೆಲ್ ಮೆಸ್ಸಿ ಅರ್ಧದಷ್ಟನ್ನು ಸರ್ಕಾರಕ್ಕೆ ಆದಾಯವಾಗಿ ನೀಡಬೇಕಿದೆ. ಮುಂಬರುವ ಜೂನ್‌ ತಿಂಗಳಿನಲ್ಲಿ ಅಂತ್ಯವಾಗಲಿರುವ ಈ ಒಪ್ಪಂದದಲ್ಲಿ ಮೆಸ್ಸಿ 510 ಮಿಲಿಯನ್ ಯುರೋಗಳಿಗಿಂತ ಆಧಿಕ ಮೊತ್ತವನ್ನು ಈಗಾಗಲೇ ಗಳಿಸಿಕೊಂಡಿದ್ದಾರೆ ಎಂದು ಇದೇ ಪತ್ರಿಕೆ ವರದಿ ಮಾಡಿದೆ.

ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ನಲ್ಲಿ ಕಳೆದ ಎರಡು ದಶಕಗಳಿಂದ ಲಿಯೋನೆಲ್ ಮೆಸ್ಸಿ ಅವಿಭಾಜ್ಯ ಅಂಗವಾಗಿದ್ದಾರೆ. ಆದರೆ 2017ರಲ್ಲಿ ಲಿಯೋನೆಸ್ ಮೆಸ್ಸಿಯ ಒಪ್ಪಂದಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದ ಕ್ಲಬ್‌ನ ನಿರ್ದೇಶಕರಾಗಿದ್ದ ಜೋಸೆಪ್ ಮರಿಯಾ ಬಾರ್ಟುಮೆವ್ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಲಿಯೋನೆಲ್ ಮೆಸ್ಸಿ ಕೂಡ ಕ್ಲಬ್‌ನ ಬೆಳವಣಿಗೆಯಿಂದ ಬೇಸತ್ತು ಹಾಗೂ ಚಾಂಪಿಯನ್ಸ್ ಲೀಗ್‌ನಲ್ಲಿ ತಂಡದ ಹೀನಾಯ ಪ್ರದರ್ಶನದ ಕಾರಣದಿಂದಾಗಿ ಕ್ಲಬ್‌ನಿಂದ ಹೊರಬರುವ ನಿರ್ಧಾರವನ್ನು ಮಾಡಿದ್ದರು. ಆದರೆ ರಾಜೀನಾಮೆಯನ್ನು ಕ್ಲಬ್ ಸ್ವೀಕರಿಸದ ಕಾರಣ ತಂಡದಲ್ಲೇ ಉಳಿದಿದ್ದಾರೆ. ಆದರೆ ಮುಂದಿನ ಜೂನ್‌ನಲ್ಲಿ ಒಪ್ಪಂದ ಅಂತ್ಯವಾದ ಬಳಿಕ ಕ್ಲಬ್‌ನಿಂದ ಹೊರ ಬರಲು ಮೆಸ್ಸಿ ಸ್ವತಂತ್ರರಾಗಿದ್ದಾರೆ

Story first published: Sunday, January 31, 2021, 14:29 [IST]
Other articles published on Jan 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X