ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ಅರ್ಜೆಂಟೀನಾ ತಂಡದ ಸಾಧನೆ ಮೇಲೆ ನನ್ನ ವೃತ್ತಿ ಬದುಕಿನ ಭವಿಷ್ಯವಿದೆ'

Lionel Messi Says Argentina Future Depends on World Cup

ಬ್ರೊನ್ನಿಟ್ಸಿ, ಜೂ. 12: ರಷ್ಯಾದಲ್ಲಿ ನಡೆಯಲಿರುವ 2018ರ ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದಲ್ಲಿ ನಮ್ಮ ಅರ್ಜೆಂಟೀನಾ ತಂಡ ತೋರುವ ಸಾಧನೆಯ ಮೇಲೆ ನನ್ನ ಭವಿಷ್ಯ ನಿಂತಿದೆ ಎಂದು ಅರ್ಜೆಂಟೀನಾ ತಂಡದ ಫಾರ್ವರ್ಡ್ಸ್ ಆಟಗಾರ ಲಿಯೋನೆಲ್ ಮೆಸ್ಸಿ ಹೇಳಿದ್ದಾರೆ.

ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಯಾವ ಹಂತದವರೆಗೆ ಹೋಗಲಿದೆ, ಪಂದ್ಯವನ್ನು ಹೇಗೆ ಮುಗಿಸಲಿದೆ ಎಂಬುದರ ಮೇಲೆ ತನ್ನ ವೃತ್ತಿ ಬದುಕಿನ ಭವಿಷ್ಯ ನಿಂತಿದೆ ಎಂದು ಸ್ಪೇನ್ ನ ಪತ್ರಿಕೆಯೊಂದರ ಸಂದರ್ಶನದ ವೇಳೆ ಮೆಸ್ಸಿ ತಿಳಿಸಿದ್ದಾರೆ.

ಸ್ಪ್ಯಾನಿಶ್ ಕ್ರೀಡಾ ಪತ್ರಿಕೆಯೊಂದಿಗೆ ಮಾತನಾಡುತ್ತ ಮೆಸ್ಸಿ, 'ಈವರೆಗೆ ನಾವು ಮೂರು ಬಾರಿ ಫೈನಲ್ ನಲ್ಲಿ ಸೋತಿದ್ದೇವೆ. 2014ರ ವಿಶ್ವಕಪ್‌ ನಲ್ಲಿ ಜರ್ಮನಿ ಎದುರಿಗೆ, 2015 ಹಾಗೂ 2016ರ ಕೊಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿಯಲ್ಲಿ ಚಿಲಿ ಎದುರು ಫೈನಲ್‌ನಲ್ಲಿ ನಾವು ಸೋತು ಟೀಕೆಗೆ ಗುರಿಯಾಗಿದ್ದೇವೆ' ಎಂದರು.

'ಪ್ರಮುಖ ಟೂರ್ನಿಗಳ ಅಂತಿಮ ಘಟ್ಟಕ್ಕೆ ತಲುಪಿ ಮುಗ್ಗರಿಸುವ ತಂಡ ಎಂಬ ಹಣೆಪಟ್ಟಿ ನಮ್ಮ ತಂಡಕ್ಕಿದೆ. ಆ ಹಣೆಪಟ್ಟಿಯನ್ನು ತೆಗೆದು ಹಾಕಲು ಈಗ ಮತ್ತೊಂದು ಅವಕಾಶ ಸಿಕ್ಕಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು' ಎಂದು ಮೆಸ್ಸಿ ಹೇಳಿದರು.

ಮಾತು ಮುಂದುವರೆಸಿದ 30ರ ಹರೆಯದ ಮೆಸ್ಸಿ, 'ನನ್ನ ಪಾಲಿಗೆ ಈ ವಿಶ್ವಕಪ್‌ ಒಂದು ಅಗ್ನಿಪರೀಕ್ಷೆ. ಟೂರ್ನಿಯಲ್ಲಿ ತಂಡ ಯಾವ ಹಂತಕ್ಕೆ ಹೋಗಲಿದೆ ಎಂಬುದು ಮುಖ್ಯ. ಅದರ ಆಧಾರದಲ್ಲಿ ನಾನು ಮುಂದೆ ಆಡಬೇಕು ಅಥವಾ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ' ಎಂದರು.

ಪೋರ್ಚುಗಲ್ ನ ಕ್ರಿಸ್ಚಿಯಾನೋ ರೊನಾಲ್ಡೋ ಬಳಿಕ ವಿಶ್ವದ ಎರಡನೇ ಅಧಿಕ ಗೋಲ್ ಸಾಧಕರಾಗಿ ಮೆಸ್ಸಿ ಗುರುತಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಭಾರತದ ಸುನಿಲ್ ಛೆಟ್ರಿ ಅವರೂ 64 ಗೋಲ್ ಸಾಧನೆಯೊಂದಿಗೆ ಮೆಸ್ಸಿಗೆ ಸರಿ ಸಮಾನರಾಗಿ ನಿಂತಿರುವುದರಿಂದ ಫೀಫಾದಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಅರ್ಜೆಂಟೀನಾ ಜೀವಂತವಾಗಿದ್ದಷ್ಟು ಗೋಲ್ ಸಾಧನೆ ಮೆರೆಯಲು ಮೆಸ್ಸಿಗೆ ಅನುಕೂಲವಾಗಲಿದೆ.

Story first published: Tuesday, June 12, 2018, 14:04 [IST]
Other articles published on Jun 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X