ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊರೊನಾ ಲಕ್ಷಣಗಳೇ ಇಲ್ಲ, ಆದರೆ ಟೆಸ್ಟ್ ಫಲಿತಾಂಶ ಮಾತ್ರ ಪಾಸಿಟಿವ್!

Liverpool legend Kenny Dalglish tests positive for coronavirus

ಲಂಡನ್, ಏಪ್ರಿಲ್ 11: ಲಿವರ್‌ಪೂಲ್ ಫುಟ್ಬಾಲ್ ದಂತಕತೆ ಕೆನ್ನಿ ಡಾಲ್‌ಗ್ಲಿಷ್‌ಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪರೀಕ್ಷೆಯ ವೇಳೆ ದೃಢಪಟ್ಟಿದೆ. ಅಚ್ಚರಿಯೆಂದರೆ ಡಾಲ್‌ಗ್ಲಿಷ್‌ ಕೊರೊನಾವೈರಸ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಎಂದು ಬಂದಿದ್ದರೂ ಅವರಲ್ಲಿ ರೋಗದ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.

ಜೊತೆಯಾಗಿ ಕ್ರಿಕೆಟ್ ಆಡಿ ಅಚ್ಚರಿ ಮೂಡಿಸಿದ್ದ 10 ಅವಳಿ ಸಹೋದರರು!ಜೊತೆಯಾಗಿ ಕ್ರಿಕೆಟ್ ಆಡಿ ಅಚ್ಚರಿ ಮೂಡಿಸಿದ್ದ 10 ಅವಳಿ ಸಹೋದರರು!

69ರ ಹರೆಯದವರಾಗಿರುವ, ಸ್ಕಾಟ್ಲೆಂಡ್‌ನ ಸ್ಟ್ರೈಕರ್ ಕೆನ್ನಿ ಡಾಲ್‌ಗ್ಲಿಷ್, ಎಲ್ಟಿಕ್ ಎಫ್‌ಸಿ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದ್ದರು. ಡಾಲ್‌ಗ್ಲಿಷ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ಅವರನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾನು ಎದುರಿಸಿದ ಅತೀ ಕಷ್ಟಕರ ಓವರ್‌ ಸ್ಮರಿಸಿದ ರಿಕಿ ಪಾಂಟಿಂಗ್: ವೀಡಿಯೋತಾನು ಎದುರಿಸಿದ ಅತೀ ಕಷ್ಟಕರ ಓವರ್‌ ಸ್ಮರಿಸಿದ ರಿಕಿ ಪಾಂಟಿಂಗ್: ವೀಡಿಯೋ

'ತನಗೆ ಕೊರೊನಾವೈರಸ್ ಲಕ್ಷಣಗಳು ಕಾಣದಿದ್ದರೂ ಡಾಲ್‌ಗ್ಲಿಷ್ ಬಹಳಷ್ಟು ಸಾರಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಅನಿರೀಕ್ಷಿತವಾಗಿ ಫಲಿತಾಂಶ ಫಾಸಿಟಿವ್ ಎಂದು ಬಂದಿದೆ. ಆದರೆ ಉಳಿದಂತೆ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ,' ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್: ಭಾರತೀಯ ದಿಗ್ಗಜನ ಬಗ್ಗೆ ಕ್ಲಾರ್ಕ್ ಮಾತುನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್: ಭಾರತೀಯ ದಿಗ್ಗಜನ ಬಗ್ಗೆ ಕ್ಲಾರ್ಕ್ ಮಾತು

ಎಲ್ಟಿಕ್‌ನಿಂದ ಲಿವರ್‌ಪೂಲ್‌ಗೆ ಸಹಿ ಮಾಡುವುದಕ್ಕೂ ಮುನ್ನ ಎಲ್ಟಿಕ್ ಪರ ಒಟ್ಟು 4 ಸೀಸನ್‌ಗಳಿಗೆ ಡಾಲ್‌ಗ್ಲಿಷ್ ಆಡಿದ್ದರು. ಲಿವರ್‌ಪೂಲ್ ಪರ 515 ಪಂದ್ಯಗಳಲ್ಲಿ 172 ಗೋಲ್‌ಗಳನ್ನು ಬಾರಿಸಿದ್ದರು. 1970ರಿಂದ 1980ರಲ್ಲಿ ಡಾಲ್‌ಗ್ಲಿಷ್ ಲಿವರ್‌ಪೂಲ್‌ನಲ್ಲಿ ಗಮನಾರ್ಹ ಆಟಗಾರನಾಗಿದ್ದರು.

Story first published: Saturday, April 11, 2020, 16:05 [IST]
Other articles published on Apr 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X