ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕ ಹಂಚಿಕೊಂಡ ನಾರ್ಥ್‌ಈಸ್ಟ್ ಮತ್ತು ಬೆಂಗಳೂರು

By Isl Media
Machado rescues draw as NorthEast steals Bengaluru thunder

ಗೋವಾ, ಡಿಸೆಂಬರ್,8 : ನಾರ್ಥ್ ಈಸ್ಟ್ ಯುನೈಟೆಡ್ ಪರ ಲೂಯಿಸ್ ಮಚಾಡೋ ( 4 ಮತ್ತು 78ನೇ ನಿಮಿಷ) ಮತ್ತು ಬೆಂಗಳೂರು ಎಫ್ ಸಿ ಪರ ಜುವಾನ್ (13 ನೇ ನಿಮಿಷ) ಹಾಗೂ ಉದಾಂತ್ ಸಿಂಗ್ (70ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 21ನೇ ಪಂದ್ಯ 2-2 ಗೋಲಿನಿಂದ ಸಮಬಲಗೊಂಡಿತು.

ಸಮಬಲದ ಹೋರಾಟ: ಲೂಯಿಸ್ ಮಚಾಡೋ (4ನೇ ನಿಮಿಷ)ದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಪರ ಗಳಿಸಿದ ಗೋಲು ಹಾಗೂ ಜುವಾನ್ ಗೊನ್ಸಾಲೀಸ್ ಫೆರ್ನಾಂಡೀಸ್ (13ನೇ ನಿಮಿಷ) ಬೆಂಗಳೂರು ಪರ ಗಳಿಸಿದ ಗೋಲಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 21ನೇ ಪಂದ್ಯದ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು. ನಾರ್ಥ್ ಈಸ್ಟ್ ಪಂದ್ಯದ ಆರಂಭದಲ್ಲೇ ಬೆಂಗಳೂರಿಗೆ ಆಘಾತ ನೀಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ 4ನೇ ನಿಮಿಷದಲ್ಲಿ ಚಾರ್ ತುಳಿದ ಚೆಂಡು ಮಚಾಡೋ ಅವರ ಬುಜಕ್ಕೆ ತಗಲಿ ಗೋಲ್ ಕೀಪರ್ ಸಂಧೂ ಅವರನ್ನು ವಂಚಿಸಿತು. ನಾರ್ಥ್ಈಸ್ಟ್ ನ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಜುವಾನ್ ಗಳಿಸಿದ ಗೋಲು ಸಮಬಲಗೊಳಿಸಿತು. ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಬೆಂಗಳೂರಿಗೆ ಆ ನಂತೆ ನಾಲ್ಕೈದು ಅವಕಾಶಗಳು ಸಿಕ್ಕರೂ ಗೋಲಾಗಿ ರೂಪುಗೊಳ್ಳಲಿಲ್ಲ.

ಐಎಸ್‌ಎಲ್: ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ ಹೊತ್ತ ಮುಂಬೈ ಸಿಟಿಐಎಸ್‌ಎಲ್: ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ ಹೊತ್ತ ಮುಂಬೈ ಸಿಟಿ

ಡಿಫೆನ್ಸ್ ಆಟಗಾರರ ಸಮಾಗಮ: ಹೀರೋ ಇಂಡಿಯನ್ ಸೂಪರ್ ಲೀಗ್ ನ 21ನೇ ಪಂದ್ಯದಲ್ಲಿ ರಕ್ಷಣಾತ್ಮಕ ಆಟಕ್ಕೆ ಹೆಸರಾಗಿರುವ ಬೆಂಗಳೂರು ಎಫ್ ಸಿ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಬೆಂಗಳೂರು ತಂಡ ಲೀಗ್ ಹಂತದಲ್ಲಿ ಇದುವರೆಗೂ ನಾರ್ಥ್ ಈಸ್ಟ್ ವಿರುದ್ಧ ಸೋಲು ಕಂಡಿರಲಿಲ್ಲ. ಆದರೆ ನಾರ್ಥ್ ಈಸ್ಟ್ ಈಗ ಹಿಂದಿನ ತಂಡವಾಗಿ ಉಳಿದಿಲ್ಲ ಎಂಬುದು ಗಮನಾರ್ಹ. ಹಿಂದಿನ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಬೆಂಗಳೂರು ತಂಡ ತನ್ನ ಮೊದಲ ಯಶಸ್ಸು ಕಂಡಿದೆ. ಅಲ್ಲದೆ ನಿರಂತರ ಕ್ಲೀನ್ ಶೀಟ್ ಸಾಧನೆಯನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ. ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಬೆಂಗಳೂರು ಕಳೆದ 23 ಪಂದ್ಯಗಳಲ್ಲಿ 13 ಕ್ಲೀನ್ ಶೀಟ್ ಸಾಧನೆ ಮಾಡಿದೆ. ಇತರ ಯಾವುದೇ ತಂಡಗಳು ಇದರ ಹತ್ತಿರಕ್ಕೂ ಬರಲಿಲ್ಲ. ಈ ಯಶ್ಸಿನ ಹಾದಿಯಲ್ಲಿ ಮುನ್ನಡೆಯಲು ತಮ್ಮ ತಂಡ ಉತ್ತಮ ಪ್ರದರ್ಶನ ತೋರಲಿದೆ ಎಂಬ ನಿರೀಕ್ಷೆಯನ್ನು ಕೋಚ್ ಕಾರ್ಲಸ್ ಕ್ಬಾಡ್ರಟ್ ಹೊಂದಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಅಭಿಮಾನಿಗಳ ಹೃದಯ ಗೆದ್ದ ಸರಣಿ ಶ್ರೇಷ್ಠ ಹಾರ್ದಿಕ್ ಪಾಂಡ್ಯ ನಡೆಭಾರತ vs ಆಸ್ಟ್ರೇಲಿಯಾ: ಅಭಿಮಾನಿಗಳ ಹೃದಯ ಗೆದ್ದ ಸರಣಿ ಶ್ರೇಷ್ಠ ಹಾರ್ದಿಕ್ ಪಾಂಡ್ಯ ನಡೆ

ಚೆನ್ನೈಯಿನ್ ವಿರುದ್ಧದ ಪಂದ್ಯಕ್ಕೆ ಮುನ್ನ ನಡೆದ ಎರಡು ಪಂದ್ಯಗಳಲ್ಲಿ ಬೆಂಗಳೂರು ಟಾರ್ಗೆಟ್ ಮಾಡಿದ್ದು ಎರಡು ಬಾರಿ ಮಾತ್ರ. ಆದರೆ ಚೆನ್ನೈ ವಿರುದ್ಧ ಮೂರು ಬಾರಿ ಟಾರ್ಗೆಟ್ ಮಾಡಿದೆ. ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ನಾರ್ಥ್ ಈಸ್ಟ್ ವಿರುದ್ಧ ಬೆಂಗಳೂರು ಇನ್ನೂ ಗೋಲಿನ ಖಾರೆ ತೆರೆಯಬೇಕಾಗಿದೆ. ಗೆರಾರ್ಡ್ ನಸ್ ಪಡೆ ಇದುವರೆಗೂ ಆಡಿರುವ ಎರಡು ಪಂದ್ಯಗಳಲ್ಲಿ ನಾರ್ಥ್ ಈಸ್ಟ್ ಎದುರಾಳಿ ತಂಡಕ್ಕೆ ಮೂರು ಗೋಲು ಗಳಿಸಲು ಅವಕಾಶ ಮಾಡಿಕೊಟ್ಟಿದೆ. ಎರಡು ಜಯ ಮತ್ತು ಎರಡು ಡ್ರಾ ಕಂಡಿರುವ ನಾರ್ಥ್ ಈಸ್ಟ್ ಇದುವರೆಗೂ ಸೋಲು ಕಂಡಿರಲಿಲ್ಲ.

ಕಳೆದ ಋತುವಿನಲ್ಲೂ ನಾರ್ಥ್ ಈಸ್ಟ್ ನಾಲ್ಕು ಪಂದ್ಯಗಳ ನಂತರ ಇದೇ ರೀತಿಯ ದಾಖಲೆ ಹೊಂದಿತ್ತು.ಆದರೆ ಅಂತಿಮವಾಗಿ ಗಳಿಸಿದ್ದು 9ನೇ ಸ್ಥಾನ. ಕಳೆದ ಬಾರಿ ಋತುವಿನಲ್ಲಿ ನಾರ್ಥ್ ಈಸ್ಟ್ ಕೇವಲ 16 ಗೋಲು ಗಳಿಸಿತ್ತು. ಇದು ಆ ಋತುವಿನಲ್ಲೇ ತಂಡವೊಂದು ಗಳಿಸಿದ ಕಡಿಮೆ ಗೋಲಾಗಿತ್ತು. ಇಡ್ರಿಸ್ಸಾ ಸಿಲ್ಲಾ ಮತ್ತು ಕ್ವೆಸಿ ಅಪ್ಪಿಯ್ಯ ತಲಾ ಎರಡು ಗೋಲು ಗಳಿಸಿ ತಂಡಕ್ಕೆ ನೆರವಾಗಿದ್ದಾರೆ. ಹಿಂದಿನ ದಾಖಲೆಗಳಿಗೆ ಹೆಚ್ಚು ಒತ್ತು ಕೊಡದೆ ಇಂದಿನ ಪಂದ್ಯದ ಕಡೆಗೆ ಗಮನ ಹರಿಸುವ ನಾರ್ಥ್ ಈಸ್ಟ್ ಯಶಸ್ಸು ಕಾಣುವ ಗುರಿ ಹೊಂದಿದೆ.

Story first published: Wednesday, December 9, 2020, 10:53 [IST]
Other articles published on Dec 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X