ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತದಲ್ಲೇ ನಡೆಯುತ್ತಾ ಮಹಿಳಾ ಅಂಡರ್17 ಫುಟ್‌ಬಾಲ್ ವಿಶ್ವಕಪ್? ಸುಪ್ರೀಂ ಆದೇಶದಲ್ಲಿ ಏನೇನಿದೆ?

Main points of Supreme court order regarding lifting FIFAs ban on AIFF

ಆಗಸ್ಟ್ 15ರಂದು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿಯಾದ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ಗೆ ರೆಡ್ ಕಾರ್ಡ್ ನೀಡಿತ್ತು. ಹೌದು, ಎಐಎಫ್‌ಎಫ್‌ನಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಇದ್ದು ಇದು ಫಿಫಾ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಫಿಫಾ ಈ ಕ್ಷಣದಿಂದಲೇ ಭಾರತ ಫುಟ್‌ಬಾಲ್ ಫೆಡರೇಶನ್‌ ಅನ್ನು ಅನಿರ್ಧಿಷ್ಟಾವಧಿ ಸಮಯದವರೆಗೆ ಬ್ಯಾನ್ ಮಾಡುತ್ತಿದೆ ಎಂಬ ನಿರ್ಧಾರವನ್ನು ಘೋಷಿಸಿತ್ತು. ಈ ಪರಿಣಾಮವಾಗಿ ಈ ಬಾರಿಯ ಮಹಿಳಾ ಅಂಡರ್17 ಫುಟ್‌ಬಾಲ್ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತ್ತು.

ತನ್ನ ಮೂವರು ಫೇವರಿಟ್ ಕ್ರಿಕೆಟಿಗರ ಹೆಸರನ್ನು ತಿಳಿಸಿದ ರುತುರಾಜ್ ಗಾಯಕ್ವಾಡ್; ಇಲ್ಲ ಧೋನಿ!ತನ್ನ ಮೂವರು ಫೇವರಿಟ್ ಕ್ರಿಕೆಟಿಗರ ಹೆಸರನ್ನು ತಿಳಿಸಿದ ರುತುರಾಜ್ ಗಾಯಕ್ವಾಡ್; ಇಲ್ಲ ಧೋನಿ!

ಫಿಫಾ ಇಷ್ಟು ದೊಡ್ಡ ಮಟ್ಟದ ನಿರ್ಧಾರವನ್ನು ತೆಗೆದುಕೊಂಡದ್ದು ಭಾರತ ಕೇಂದ್ರ ಕ್ರೀಡಾ ಸಚಿವಾಲಯ ಹಾಗೂ ಎಐಎಫ್ಎಫ್‌ಗೆ ತೀವ್ರ ಮುಖಭಂಗವನ್ನು ಮಾಡಿತ್ತು. ಹೀಗಾಗಿ ಈ ನಿಷೇಧವನ್ನು ಹಿಂಪಡೆಯಲು ಅನುಸರಿಸಬೇಕಾದ ಕ್ರಮಗಳನ್ನು ಅರಿಯಲು ಮೊದಲು ಫಿಫಾ ಜತೆ ಸಭೆಗಳನ್ನು ನಡೆಸಿದ್ದ ಭಾರತ ಕೇಂದ್ರ ಕ್ರೀಡಾ ಸಚಿವಾಲಯ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಇಂದು ( ಆಗಸ್ಟ್ 22 ) ಸುಪ್ರೀಂ ಕೋರ್ಟ್ ಈ ವಿಷಯದ ಕುರಿತಾಗಿ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಆದೇಶಗಳನ್ನು ಹೊರಡಿಸಿದ್ದು, ಈ ಕೂಡಲೇ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನಲ್ಲಿ ಮೂರನೇ ವ್ಯಕ್ತಿಗಳ ಸಂಸ್ಥೆಗಳ ( ಸಿಒಎ ) ಹಸ್ತಕ್ಷೇಪ ಇರಬಾರದು ಎಂದು ತಿಳಿಸಿದೆ.

ಎಐಎಫ್‌ಎಫ್‌ನ ದೈನಂದಿನ ಚಟುವಟಿಕೆಗಳನ್ನು ಆಡಳಿತ ಮಂಡಳಿಯೇ ನಿರ್ವಹಿಸಬೇಕು ಎಂದು ತಿಳಿಸಿದೆ. ಇನ್ನು ಕೇಂದ್ರ ಕ್ರೀಡಾ ಸಚಿವಾಲಯ ಕೂಡ ಫಿಫಾದ ಎಲ್ಲಾ ಷರತ್ತುಗಳಿಗೂ ಸಹ ಸಮ್ಮತಿ ಸೂಚಿಸಿದ್ದು, ಈ ಬೆಳವಣಿಗೆಗಳು ಭಾರತದಲ್ಲಿ ಮಹಿಳಾ ಅಂಡರ್17 ಫುಟ್‌ಬಾಲ್ ವಿಶ್ವಕಪ್ ನಡೆಯುವಂತೆ ಮಾಡಲಿವೆಯಾ ಎಂಬ ನಿರೀಕ್ಷೆ ಹುಟ್ಟಿದೆ. ಹಾಗಿದ್ದರೆ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಮತ್ತು ಚುನಾವಣಾ ಏರ್ಪಡಿಸುವ ವಿಚಾರವಾಗಿ ಹೊರಡಿಸಿರುವ ಆದೇಶದಲ್ಲಿನ ಅಂಶಗಳೇನು ಎಂಬುದರ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ.

1. 3 ಆಗಸ್ಟ್ 2022ರ ಆದೇಶದ ಅನುಸಾರವಾಗಿ ನಿಗದಿಪಡಿಸಲಾದ ಚುನಾವಣಾ ಕಾರ್ಯಕ್ರಮವನ್ನು ಚುನಾವಣೆಯ ದಿನಾಂಕವನ್ನು 1 ವಾರದ ಅವಧಿಗೆ ವಿಸ್ತರಿಸುವ ಮೂಲಕ ಮಾರ್ಪಡಿಸಲು ಅನುಮತಿ ನೀಡಲಾಗಿದೆ.

2. ಚುನಾವಣೆಗೆ ಮತದಾರರ ಪಟ್ಟಿಯು 36 ರಾಜ್ಯ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡಿರಬಹುದು ಎಂದು ತಿಳಿಸಿದೆ.

3. ಯಾವುದೇ ಪಕ್ಷಗಳಿಂದ ಅವರ ವಿರುದ್ಧ ಯಾವುದೇ ಆಕ್ಷೇಪಣೆ ದಾಖಲಾಗಿಲ್ಲವಾದ್ದರಿಂದ ನೇಮಕಗೊಂಡ ಚುನಾವಣಾಧಿಕಾರಿಗಳು ಈ ನ್ಯಾಯಾಲಯದಿಂದ ನೇಮಕಗೊಂಡವರು ಎಂದು ಪರಿಗಣಿಸಲಾಗುತ್ತದೆ.

4. ಎಐಎಫ್‌ಎಫ್‌ನ ದಿನನಿತ್ಯದ ವಿಷಯಗಳನ್ನು ಪ್ರಧಾನ ಕಾರ್ಯದರ್ಶಿ ನೇತೃತ್ವದ ನಿರ್ವಾಹಕರು ಪ್ರತ್ಯೇಕವಾಗಿ ನೋಡುತ್ತಾರೆ

5. ಸಿಒಎ ಈಗಾಗಲೇ ಕರಡು ಸಂವಿಧಾನವನ್ನು ಅನುಷ್ಠಾನಕ್ಕಾಗಿ ಕೋಷ್ಟಕಗಳೊಂದಿಗೆ ಸಲ್ಲಿಸಿದೆ. ಶ್ರೀ ಸಮರ್ ಬನ್ಸಾಲ್ ಅವರೊಂದಿಗೆ ಅಮಿಕಸ್ ಕ್ಯೂರಿಯಾಗಿ ನಮಗೆ ಸಹಾಯ ಮಾಡಲು ನಾವು ಶ್ರೀ ಅಡ್ವ ಗೋಪಾಲ್ ಶಂಕರನಾರಾಯಣ ಅವರನ್ನು ವಿನಂತಿಸುತ್ತೇವೆ.

ಮಹಾರಾಜ ಟ್ರೋಫಿ: ಪ್ಲೇಆಫ್‌ಗೆ ಒಂದೇ ದಿನ ಬಾಕಿ; ಅಂಕಪಟ್ಟಿಯ ಟಾಪ್ 4 ತಂಡಗಳಾವುವು?ಮಹಾರಾಜ ಟ್ರೋಫಿ: ಪ್ಲೇಆಫ್‌ಗೆ ಒಂದೇ ದಿನ ಬಾಕಿ; ಅಂಕಪಟ್ಟಿಯ ಟಾಪ್ 4 ತಂಡಗಳಾವುವು?

6. ಚುನಾವಣೆಯ ವೇಳಾಪಟ್ಟಿಯನ್ನು 1 ವಾರ ವಿಸ್ತರಿಸಬಹುದಾಗಿದೆ.

7. AIFFನ ಎಲೆಕ್ಷನ್ ಕಮಿಟಿ 23 ಸದಸ್ಯರನ್ನು ಒಳಗೊಂಡಿರುತ್ತದೆ (17 ಖಜಾಂಚಿ ಸೇರಿದಂತೆ 36 ರ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ); (6 ಸದಸ್ಯರನ್ನು ಹೆಸರಾಂತ ಆಟಗಾರರಿಂದ ತೆಗೆದುಕೊಳ್ಳಲಾಗುವುದು)

8. ಫಿಫಾ ಅಮಾನತು ರದ್ದುಗೊಳಿಸಲು ಅನುಕೂಲವಾಗುವಂತೆ ಮತ್ತು ವಿಶ್ವಕಪ್ ಹೋಸ್ಟಿಂಗ್ ಮತ್ತು ಭಾಗವಹಿಸುವ ಪ್ರತಿಷ್ಠೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಆದೇಶವನ್ನು ಹೊರಡಿಸಲಾಗಿದೆ.

9. ಮೇಲಿನದನ್ನು ಅದರ ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳದಿದ್ದಲ್ಲಿ, ಸುಪ್ರೀಂ ಕೋರ್ಟ್ ಮುಂದಿನ ಆದೇಶಗಳನ್ನು ರವಾನಿಸುತ್ತದೆ.

Story first published: Monday, August 22, 2022, 14:20 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X