ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅರ್ಜೆಂಟೀನಾ ಪಂದ್ಯ ಗೆದ್ದ ಬಳಿಕ ಚಿಕಿತ್ಸೆ ಪಡೆದ ಮರಡೋನಾ

Maradona receives treatment after Argentinas dramatic win

ಸೇಂಟ್ ಪೀಟರ್ಸ್‌ಬರ್ಗ್, ಜೂನ್ 27: ಫೀಫಾ ವಿಶ್ವಕಪ್‌ನ ಅತ್ಯಂತ ಮಹತ್ವದ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಅರ್ಜೆಂಟೀನಾ ತಂಡದ ಗೆಲುವನ್ನು ಕಣ್ತಂಬಿಕೊಂಡು ಸಂಭ್ರಮಿಸಿದ ಬಳಿಕವೇ ಫುಟ್‌ಬಾಲ್ ದಂತಕತೆ ಡಿಯಾಗೊ ಮರಡೋನಾ ಅನಾರೋಗ್ಯದ ಚಿಕಿತ್ಸೆಗೆ ಒಳಗಾಗಿದ್ದು.

ಅರ್ಜೆಂಟೀನಾ ಗ್ರೂಪ್ ಡಿ ಹಂತದಿಂದಲೇ ಹೊರಬೀಳುವ ಭೀತಿಯಲ್ಲಿತ್ತು. ಆದರೆ 86ನೇ ನಿಮಿಷದಲ್ಲಿ ಮನಾರ್ಕಸ್ ರೊಜೊ ಕಾಲಿನಿಂದ ಚಿಮ್ಮಿದ ಚೆಂಡು ನೈಜೀರಿಯಾದ ಗೋಲ್‌ಕೀಪರ್‌ನನ್ನು ವಂಚಿಸಿ ನೆಟ್ಅನ್ನು ಸ್ಪರ್ಶಿಸುವ ಮೂಲಕ ಜಾರ್ಜ್ ಸಂಪೋಲಿ ಪಡೆಯಲ್ಲಿ ಸಂಭ್ರಮ ಮೂಡಿಸಿತು.

ಫೀಫಾ 2018 : ನೈಜೀರಿಯಾ ಮಣಿಸಿ, 16ರ ಹಂತಕ್ಕೆ ಜಿಗಿದ ಮೆಸ್ಸಿ ಪಡೆ ಫೀಫಾ 2018 : ನೈಜೀರಿಯಾ ಮಣಿಸಿ, 16ರ ಹಂತಕ್ಕೆ ಜಿಗಿದ ಮೆಸ್ಸಿ ಪಡೆ

ಆದರೆ, ಮರಡೋನಾ ಅವರು ಪಂದ್ಯ ಮುಗಿದ ಬಳಿಕ ಕ್ರೀಡಾಂಗಣದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಕಂಡುಬಂತು. ಇದಕ್ಕೂ ಮುನ್ನ ಅವರು ತಮ್ಮ ಕುರ್ಚಿವರೆಗೆ ತೆರಳಲು ಸಹಾಯಕರ ನೆರವು ಪಡೆದುಕೊಂಡಿದ್ದರು.

1986ರ ವಿಶ್ವಕಪ್ ಹೀರೊ ಮರಡೋನಾ, ಪಂದ್ಯದ ವೇಳೆ ಸಾಕಷ್ಟು ಭಾವುಕರಾಗಿದ್ದರು. ಪಂದ್ಯಕ್ಕೂ ಮೊದಲು ನೈಜೀರಿಯಾದ ಅಭಿಮಾನಿಯೊಬ್ಬನ ಜತೆ ನೃತ್ಯವನ್ನೂ ಮಾಡಿದ್ದರು.

ಲಿಯೊನಲ್ ಮೆಸ್ಸಿ ಮೊದಲ ಗೋಲ್ ಬಾರಿಸಿದಾಗ ಚಿಕ್ಕ ಮಗುವಿನಂತೆ ಸಂಭ್ರಮಿಸಿದ್ದ ಮರಡೋನಾ, ಬಳಿಕ ಆಯಾಸದಿಮದ ನಿದ್ರಿಸುವುದು ಕಂಡುಬಂದಿತ್ತು.'

ಫೀಫಾ 2018 : 16ರ ಹಂತದಲ್ಲಿ ಫ್ರಾನ್ಸ್ ಜತೆ ಅರ್ಜೆಂಟೀನಾ ಕದನಫೀಫಾ 2018 : 16ರ ಹಂತದಲ್ಲಿ ಫ್ರಾನ್ಸ್ ಜತೆ ಅರ್ಜೆಂಟೀನಾ ಕದನ

ನೈಜೀರಿಯಾ ಕೂಡ ಗೋಲು ಬಾರಿಸಿ 1-1 ಸಮಬಲ ಸಾಧಿಸಿದಾಗ ಮರಡೋನಾ ಕಣ್ಣೀರಿಟ್ಟಿದ್ದರು.

ಆದರೆ, ಕೊನೆಯಲ್ಲಿ ರೋಜೊ ಗೆಲುವಿನ ಗೋಲು ಬಾರಿಸಿದಾಗ ಮರಡೋನಾ ಮತ್ತೆ ಸಂಭ್ರಮಾಚರಣೆಯಲ್ಲಿ ತೊಡಗಿದರು.

ಕ್ರೀಡಾಂಗಣದಲ್ಲಿಯೇ ಚಿಕಿತ್ಸೆ ಪಡೆದ ಮರಡೋನಾ ತಾವು ಆರಾಮಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ. ಕುತ್ತಿಗೆ ಭಾಗದಲ್ಲಿ ಗಾಯವಾಗಿರುವುದಾಗಿ ಅವರು ತಿಳಿಸಿದ್ದಾರೆ.

ಫೀಫಾ 2018: ಐಸ್ ಲ್ಯಾಂಡ್ ವಿರುದ್ಧ ಕ್ರೋವೇಷಿಯಾಕ್ಕೆ ಜಯಫೀಫಾ 2018: ಐಸ್ ಲ್ಯಾಂಡ್ ವಿರುದ್ಧ ಕ್ರೋವೇಷಿಯಾಕ್ಕೆ ಜಯ

'ಎರಡನೆಯ ಅವಧಿ ವೇಳೆ ನನ್ನನ್ನು ತಪಾಸಣೆ ನಡೆಸಿದ್ದ ವೈದ್ಯರು ಮನೆಗೆ ತೆರಳುವಂತೆ ಸಲಹೆ ನೀಡಿದ್ದರು. ಆದರೆ, ನಾನು ಇಲ್ಲಿಯೇ ಇರಲು ಬಯಸಿದ್ದೆ. ಇಂತಹ ಸಂದರ್ಭದಲ್ಲಿ ನಾನು ಹೇಗೆ ಹೋಗುವುದು?' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಹೇಳಿಕೊಂಡಿದ್ದಾರೆ.

Story first published: Wednesday, June 27, 2018, 15:21 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X