ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮರಡೋನಾ ಸ್ಮರಣಾರ್ಥ ಕೇರಳದಲ್ಲಿ 2 ದಿನ ಶೋಕಾಚರಣೆ

Maradonas 86 World Cup goal most beautiful goal says Kerala CM

ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಎರಡು ದಿನಗಳ ಕಾಲ ಸರ್ಕಾರಿ ಶೋಕಾಚರಣೆ ಘೋಷಿಸಿದ್ದಾರೆ.

1986 ವಿಶ್ವಕಪ್ ವಿಜೇತ ಮರಡೋನಾ (60) ಅವರು ಅರ್ಜೆಂಟೀನಾದ ಖಾಸಗಿ ಆಸ್ಪತ್ರೆಯಲ್ಲಿ ನವೆಂಬರ್ 25ರಂದು ಹೃದಯ ಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಅಗಲಿದ್ದಾರೆ. 1986ರ ವಿಶ್ವಕಪ್‌ನಲ್ಲಿ ಮರಡೋನಾ ಗಳಿಸಿದ ಗೋಲು ಫುಟ್ಬಾಲ್ ಇರುವ ತನಕ ಸದಾ ನೆನಪಲ್ಲಿ ಉಳಿಯಲಿದೆ. ಕೇರಳ ಸೇರಿದಂತೆ ವಿಶ್ವದೆಲ್ಲೆಡೆ ಇರುವ ಫುಟ್ಬಾಲ್ ಪ್ರೇಮಿಗಳಿಗೆ ಇಂದು ದುಃಖಕರ ದಿನ ಎಂದರು.

Maradonas 86 World Cup goal most beautiful goal says Kerala CM

ಗೋವಾದಲ್ಲಿ ದಿಗ್ಗಜ ಮರಡೋನಾ ಸ್ಮರಣೆ, ಪ್ರತಿಮೆ ನಿರ್ಮಾಣ ಗೋವಾದಲ್ಲಿ ದಿಗ್ಗಜ ಮರಡೋನಾ ಸ್ಮರಣೆ, ಪ್ರತಿಮೆ ನಿರ್ಮಾಣ

''ವಿಶ್ವದಲ್ಲಿ ಫುಟ್ಬಾಲ್ ಆಟವನ್ನು ಸುಂದರ ಆಟ ಎಂದು ಕರೆಯಲಾಗುತ್ತದೆ, ಈ ಆಟದಲ್ಲಿ ನಿಜಕ್ಕೂ ತಾರೆಯಾಗಿ ಮೆರೆದವರು ಅರ್ಜೆಂಟೀನಾದ ಮರಡೋನಾ. ಮರಡೋನಾಗೆ ಕೇರಳದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಬಹುಶಃ 1986ರ ವಿಶ್ವಕಪ್ ಎತ್ತಿ ಹಿಡಿದ ಮರಡೋನಾ ನಮ್ಮೆಲ್ಲರ ನೆಚ್ಚಿನ ಆಟಗಾರನಾಗಿ ಉಳಿದು ಬಿಟ್ಟಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ವಿಶ್ವಕಪ್ ನಡೆದರೂ ಕೇರಳದಲ್ಲಿ ಮರಡೋನಾ ಚಿತ್ರ, ಅರ್ಜೆಂಟೀನಾ ಜರ್ಸಿ ತೊಟ್ಟ ಯುವಕರನ್ನು ಕಾಣಬಹುದು, ಆ ಮಟ್ಟಿಗೆ ನಮ್ಮಲ್ಲಿ ಫುಟ್ಬಾಲ್ ಹಾಸುಹೊಕ್ಕಿದೆ'' ಎಂದು ಹೇಳಿದರು.

ಮರಡೋನಾ ರೋಮಾಂಚಕಾರಿ ಗೋಲ್: ವಿಡಿಯೋಮರಡೋನಾ ರೋಮಾಂಚಕಾರಿ ಗೋಲ್: ವಿಡಿಯೋ

1986ರಲ್ಲಿ ಐವರು ಇಂಗ್ಲೀಷ್ ಆಟಗಾರರಿಗೆ ಚೆಂಡು ಸಿಗದಂತೆ ಚಾಕಚಕ್ಯತೆಯಿಂದ ವಂಚಿಸಿ, ಗೋಲ್ ಕೀಪರ್ ಪೀಟರ್ ಶಿಲ್ಟನ್ ಕಣ್ತಪ್ಪಿಸಿ ಗೋಲು ಗಳಿಸಿದ್ದು ಇಂದಿಗೂ ಮರೆಯುವಂತಿಲ್ಲ. ಅರ್ಜೆಂಟೀನಾವನ್ನು ಫುಟ್ಬಾಲ್ ಲೋಕದಲ್ಲಿ ಉನ್ನತ ಸ್ಥಾನಕ್ಕೇರಿಸಿದ್ದಲ್ಲದೆ, ಕ್ಯೂಬಾದ ಗೆಳೆಯನಾಗಿ ಫಿಡೆಲ್ ಕ್ಯಾಸ್ಟ್ರೋ ಆಪ್ತರಾಗಿ ಗುರುತಿಸಿಕೊಂಡಿದ್ದರು. ಮರಡೋನಾ ಅವರು ಪಶ್ಚಿಮ ಜರ್ಮನಿಯನ್ನು 1986ರಲ್ಲಿ ಸೋಲಿಸಿದ್ದು ಸದಾ ಸ್ಮರಣೀಯ ಎಂದು ವಿಜಯನ್ ಹೇಳಿದರು.

Story first published: Thursday, November 26, 2020, 22:10 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X