ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವೈರಲ್ ವಿಡಿಯೋ : ಮಾರ್ಸೆಲೊ ಪುತ್ರನ ಹೆಡ್ ಟು ಹೆಡ್ ಚಾಲೆಂಜ್

By Prasad
Marcelos son becomes viral with Real heading challenge

ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ಆಟಗಾರ ಮಾರ್ಸೆಲೊ ಅವರ ಎಂಟು ವರ್ಷದ ಪುತ್ರನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ. ತನ್ನ ತಂದೆ ಆಡುವ ರಿಯಲ್ ಮ್ಯಾಡ್ರಿಡ್ ತಂಡದ ಸದಸ್ಯರೊಂದಿಗೆ ಹೆಡ್ ಟು ಹೆಡ್ ಫುಟ್ ಬಾಲ್ ಆಡುವ ಮೂಲಕ, ತನ್ನಲ್ಲಿರುವ ಅಸಾಧಾರಣ ಫುಟ್ ಬಾಲ್ ಕಲೆಯಿಂದ ಈತ ಈಗ ಪ್ರಸಿದ್ಧನಾಗಿದ್ದಾನೆ.

ರಿಯಲ್ ಮ್ಯಾಡ್ರಿಡ್ ತಂಡದ ಡ್ರೆಸಿಂಗ್ ರೂಂ ನಲ್ಲಿ ಈ ಆಟ ಆಡಲಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಆಗಿರುವ ಇದರ ವಿಡಿಯೋವನ್ನು ಈಗಾಗಲೇ ನಾಲ್ಕು ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಮಾರ್ಸೆಲೊ ಪುತ್ರ ಎಂಜೊ ವಿಯೆರಾ, ಡ್ರೆಸಿಂಗ್ ರೂಂನಲ್ಲಿ ಸಾಲಾಗಿ ಕುಳಿತ 11 ಜನ ಆಟಗಾರರೊಂದಿಗೆ ಹೆಡ್ ಟು ಹೆಡ್ ಫುಟ್ ಬಾಲ್ ಆಡಿದ್ದಾನೆ.

ವಿಶ್ವಕಪ್ 2018: ಕೇನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ವಿಶ್ವಕಪ್ 2018: ಕೇನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ

ಪ್ರತಿ ಬಾರಿ ಒಬ್ಬ ಆಟಗಾರ ತನ್ನ ತಲೆಯಿಂದ ಬಾಲ್ ಅನ್ನು ವಿಯೆರಾ ಕಡೆಗೆ ಎಸೆಯುತ್ತಾನೆ. ಒಮ್ಮೆಯೂ ಗುರಿ ತಪ್ಪದ ವಿಯೆರಾ ಪ್ರತಿ ಬಾರಿಯೂ ಸರಿಯಾಗಿ ಬಾಲ್ ಅನ್ನು ಹೆಡ್ ಮಾಡುತ್ತಾನೆ. ಕೊನೆಗೆ ಟಬ್ ಒಂದಕ್ಕೆ ಬಾಲ್ ಚಿಮ್ಮಿಸುವುದರ ಮೂಲಕ ಚಾಲೆಂಜ್ ಕೊನೆಗೊಳ್ಳುತ್ತದೆ. ಈ ಆಟ ನಡೆದಾಗ ಸ್ವತಃ ಮಾರ್ಸೆಲೊ ಸಹ ಡ್ರೆಸಿಂಗ್ ರೂಂನಲ್ಲಿ ಹಾಜರಿದ್ದದ್ದು ವಿಶೇಷ.

ಚಾಲೆಂಜ್ ಮುಗಿಯುತ್ತಿದ್ದಂತೆಯೇ ರಿಯಲ್ ಮ್ಯಾಡ್ರಿಡ್ ಆಟಗಾರರು ಬಾಲಕ ಎಂಜೊನನ್ನು ಮೇಲಕ್ಕೆತ್ತಿ ಸಂಭ್ರಮಿಸುತ್ತಾರೆ. ಈ ವಿಡಿಯೋ ಈಗ ಜಗತ್ತಿನಾದ್ಯಂತ ವೈರಲ್ ಆಗಿದ್ದು, ಎಂಜೊ ಹೀರೊ ಆಗಿದ್ದಾನೆ. ಈ ವಿಡಿಯೋ ಪೋಸ್ಟ್ ನಲ್ಲಿ ಮಾರ್ಸೆಲೊ 'ತಂದೆಯ ಹೆಮ್ಮೆ' ಎಂದು ಮಗನ ಬಗ್ಗೆ ಹಾಗೂ ರಿಯಲ್ ಮ್ಯಾಡ್ರಿಡ್ ಒಂದು ಕುಟುಂಬವಿದ್ದಂತೆ ಎಂದು ತಂಡದ ಬಗ್ಗೆ ಬರೆದುಕೊಂಡಿದ್ದಾರೆ.

ಬಾಲಕ ಎಂಜೊ ವಿಯೆರಾ ಸದ್ಯ ಜ್ಯೂನಿಯರ್ ಮಟ್ಟದಲ್ಲಿ ಸ್ಪ್ಯಾನಿಷ್ ಕ್ಲಬ್ ಗಾಗಿ ಆಡುತ್ತಿದ್ದಾನೆ.

ಮೇ 26ರಂದು ನಡೆಯಲಿರುವ UEFA ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಲಿವರಪೂಲ್ ತಂಡದೊಂದಿಗೆ ಸೆಣಸಲಿದೆ. ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಡ್ಯಾನಿ ಕಾರ್ವಜಲ್ ಇಬ್ಬರೂ ಮ್ಯಾಡ್ರಿಡ್ ತಂಡಕ್ಕೆ ಮರಳಿ ಪೂರ್ಣ ಪ್ರಮಾಣದಲ್ಲಿ ತರಬೇತಿ ಪಡೆಯುತ್ತಿರುವುದು ತಂಡಕ್ಕೆ ಖುಷಿಯ ಸಂಗತಿಯಾಗಿದೆ.

ಪೋರ್ಚುಗಲ್ ಸ್ಟಾರ್ ಆಟಗಾರ ರೊನಾಲ್ಡೊ ಅವರು ಕೊನೆಯ ಎರಡು ಲಾ ಲಿಗಾ ಪಂದ್ಯಗಳಲ್ಲಿ ಆಡಿರಲಿಲ್ಲ. ಮೇ 6ರಂದು ಬಾರ್ಸಿಲೋನಾ ವಿರುದ್ಧದ ಪಂದ್ಯದ ಮೊದಲನೇ ಹಾಫ್ ನಲ್ಲಿ ರೊನಾಲ್ಡೊ ಅವರ ಹಿಮ್ಮಡಿಗೆ ಗಾಯವಾಗಿದ್ದರಿಂದ ಅವರು ಪಂದ್ಯಗಳಿಂದ ದೂರ ಉಳಿಯುವಂತಾಗಿತ್ತು. ಅದೇ ರೀತಿ ಬಾಯರ್ನ್ ಮ್ಯುನಿಚ್ ವಿರುದ್ಧ ಆಡಿ ಗೆದ್ದ ಪಂದ್ಯದ ನಂತರ ಮಂಡಿ ನೋವು ಉಂಟಾಗಿದ್ದರಿಂದ ಕಾರ್ವಜಲ್ ಸಹ ಆಟದಿಂದ ದೂರ ಉಳಿಯುವಂತಾಗಿತ್ತು.

ರೊನಾಲ್ಡೊ ಹಾಗೂ ಕಾರ್ವಜಲ್ ಇಬ್ಬರೂ ಆಡುತ್ತಿರುವ ದೃಶ್ಯಾವಳಿಗಳ ವಿಡಿಯೋವನ್ನು ಮ್ಯಾಡ್ರಿಡ್ ವತಿಯಿಂದ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇರುವಂತೆ ಕಂಡುಬರುತ್ತದೆ.

ನಂತರ ಇಬ್ಬರೂ ಝಿನೆಡೈನ್ ಝಿಡಾನೆ ಅವರ ತಂಡದೊಂದಿಗೆ ನಡೆದ ಅಭ್ಯಾಸ ಪಂದ್ಯದಲ್ಲಿ ಆಡಿದ್ದಾರೆ. ಚಾಂಪಿಯನ್ ಲೀಗ್ ಅನ್ನು ಎರಡು ಬಾರಿ ಗೆದ್ದಿರುವ ಮ್ಯಾಡ್ರಿಡ್ ತಂಡ ಈಗ ಮತ್ತೊಮ್ಮೆ ಗೆಲ್ಲುವ ಮೂಲಕ UEFAದ ಹ್ಯಾಟ್ರಿಕ್ ಸಾಧನೆ ಮಾಡುವ ತವಕದಲ್ಲಿದೆ.

Story first published: Monday, May 28, 2018, 12:31 [IST]
Other articles published on May 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X