ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅಭ್ಯಾಸ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಇಟಲಿ ಗೆಲುವು

Mario Balotelli Gives Italy 2-1 Win Over Saudi Arabia

ಸೇಂಟ್ ಗ್ಯಾಲನ್ (ಸ್ವಿಜರ್ ಲ್ಯಾಂಡ್), ಮೇ 30: ಇನ್ನೆರಡು ವಾರಗಳಲ್ಲಿ ರಷ್ಯಾದಲ್ಲಿ ಫೀಫಾ ವರ್ಲ್ಡ್ ಕಪ್ 2018 ಫುಟ್ಬಾಲ್ ಹಬ್ಬ ಪ್ರಾರಂಭಗೊಳ್ಳುವುದರಲ್ಲಿದೆ. ಈ ಪ್ರತಿಷ್ಠಿತ ಪಂದ್ಯಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡಗಳು ಸಜ್ಜಾಗುತ್ತಿದ್ದು, ಸ್ವಿಜರ್ ಲ್ಯಾಂಡ್ ನ ಸೇಂಟ್ ಗ್ಯಾಲನ್ ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಇಟಲಿ ಗೆಲುವು ಸಾಧಿಸಿದೆ.

ಮಂಗಳವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಇಟಲಿ 2-1 ಗೋಲುಗಳಿಂದ ಗೆಲುವನ್ನು ಸಂಭ್ರಮಿಸಿತು. ಇಟಲಿಯ ಫಾರ್ವರ್ಡ್ ಆಟಗಾರ ಮರಿಯೋ ಬಲೊಟೆಲಿ ಅವರು 21ನೇ ನಿಮಿಷದಲ್ಲಿ ಗೋಲು ಸಿಡಿಸಿ ಖಾತೆ ತೆರೆದರು. ಅನಂತರ ಬೆಲೋಟ್ಟಿ ಅವರೂ 69ನೇ ನಿಮಿಷದಲ್ಲಿ ಬಾರಿಸಿದ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು.

ಸೌದಿ ಅರೇಬಿಯಾದಿಂದ ಶೆರ್ ಹಿರಿ 72ನೇ ನಿಮಿಷದಲ್ಲಿ ಸಿಡಿಸಿದ ಗೋಲು ಎದುರಾಳಿ ನೀಡಿದ್ದ ಅಂತರವನ್ನು ಕಿರಿದುಗೊಳಿಸಿತು.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಇಟಲಿ ತಂಡದ ಮ್ಯಾನೇಜರ್ ರಾಬರ್ಟೋ ಮಾನ್ಸಿನಿ, 'ಬಲೊಟೆಲಿ ಆಟ ಚೆನ್ನಾಗಿತ್ತು. ಹಾಗಂತ ಸೌದಿ ಅರೇಬಿಯಾವೂ ಉತ್ತಮ ಪ್ರದರ್ಶನ ನೀಡಿತು. ಯಾಕೆಂದರೆ ಅವರೂ ಫುಟ್ಬಾಲ್ ವರ್ಲ್ಡ್ ಕಪ್ ನೆಡೆಗೆ ಮುನ್ನಡೆಯುತ್ತಿದ್ದಾರೆ' ಎಂದರು.

ಪೋರ್ಚುಗಲ್‌ನ ಬ್ರಾಗಾದಲ್ಲಿ ನಡೆದ ಪೋರ್ಚುಗಲ್‌-ಟ್ಯುನೀಷಿಯಾ ನಡುವಿನ ಅಭ್ಯಾಸ ಪಂದ್ಯದಲ್ಲಿ ಎರಡೂ ತಂಡಗಳು 2-2 ಗೋಲುಗಳಿಂದ ಡ್ರಾ ಸಾಧಿಸಿದವು.

ಪ್ಯಾರಿಸ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್‌ 2-0 ಗೋಲುಗಳಿಂದ ರಿಪಬ್ಲಿಕ್‌ ಆಫ್‌ ಐರ್ಲೆಂಡ್‌ ತಂಡವನ್ನು ಸೋಲಿಸಿದರೆ, ಕ್ಯಾಲಿಫೋರ್ನಿಯಾದಲ್ಲಿ ನಡೆದ ಮೆಕ್ಸಿಕೊ ಮತ್ತು ವೇಲ್ಸ್‌ ನಡುವಣ ಪಂದ್ಯ ಗೋಲೇ ದಾಖಲಾಗದೆ ಡ್ರಾಗೊಂಡಿತು.

Story first published: Friday, June 8, 2018, 18:17 [IST]
Other articles published on Jun 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X