ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಗೆ 6ನೇ ಬ್ಯಾಲನ್ ಡಿ'ಓರ್ ಪ್ರಶಸ್ತಿ

Messi wins sixth Ballon d’Or as Rapinoe takes women’s prize

ಬ್ಯೂನಸ್ ಏರ್ಸ್, ಡಿಸೆಂಬರ್ 3: ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಗೆ ಪುರುಷರ ವಿಭಾಗದ 6ನೇ ಬ್ಯಾಲನ್ ಡಿ'ಓರ್ ಪ್ರಶಸ್ತಿ ಲಭಿಸಿದೆ. 32ರ ಹರೆಯದ ಮೆಸ್ಸಿ ಪ್ಯಾರೀಸ್‌ನಲ್ಲಿ ಸೋಮವಾರ (ಡಿಸೆಂಬರ್ 2) ಪ್ರಶಸ್ತಿ ಸ್ವೀಕರಿಸಿದರು. ಯುಎಸ್‌ಎ ವಿಶ್ವಕಪ್ ಸೂಪರ್ ಸ್ಟಾರ್ ಮೇಗನ್ ರಾಪಿನೋಯ್‌ ಮಹಿಳಾ ವಿಭಾಗದ ಪ್ರಶಸ್ತಿ ಪಡೆದುಕೊಂಡರು.

ಈ ತಂಡ ಮಾತ್ರ ಆಸ್ಟ್ರೇಲಿಯಾ ನೆಲದಲ್ಲಿ ಅದಕ್ಕೆ ಚಾಲೆಂಜ್ ಮಾಡಲು ಸಾಧ್ಯ: ಮೈಕಲ್ ವಾನ್ಈ ತಂಡ ಮಾತ್ರ ಆಸ್ಟ್ರೇಲಿಯಾ ನೆಲದಲ್ಲಿ ಅದಕ್ಕೆ ಚಾಲೆಂಜ್ ಮಾಡಲು ಸಾಧ್ಯ: ಮೈಕಲ್ ವಾನ್

ರಾಪಿನೋಯ್‌ಗೆ ಫ್ರೆಂಚ್ ಕ್ಯಾಪಿಟಲ್ ಚಾಟೆಲೆಟ್ ಥಿಯೇಟರ್‌ಗೆ ಬಂದು ಪ್ರಶಸ್ತಿ ಸ್ವೀಕರಿಸಲಾಗಿಲ್ಲ. ಆದರೆ ಲಿಯೋನೆಲ್ ಮೆಸ್ಸಿ ತನ್ನ ಪತ್ನಿ, ಆಂಟೊನೆಲ್ಲ ರೊಕುಝೋ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

2015ರ ಬಳಿಕ ಮೆಸ್ಸಿಗೆ ಲಭಿಸುತ್ತಿರುವ ಮೊದಲ ಬ್ಯಾಲನ್ ಡಿ'ಓರ್ ಪ್ರಶಸ್ತಿಯಿದು. ಅದಕ್ಕೂ ಮುನ್ನ 2009, 2010, 2011, 2012 ಮತ್ತು 2015ರಲ್ಲಿ ಮೆಸ್ಸಿ ಈ ಪ್ರಶಸ್ತಿ ಗೆದ್ದಿದ್ದರು. ತನ್ನ ಎಂದಿನ ಪ್ರತಿಸ್ಪರ್ಧಿ ಕ್ರಿಸ್ಟಿಯಾನೋ ರೊನಾಲ್ಡೋಗಿಂತ ಸದ್ಯ ಒಂದು ಹೆಜ್ಜೆ ಮುಂದಿರುವ ಮೆಸ್ಸಿಗೆ ಈಗ 6ನೇ ಪ್ರಶಸ್ತಿ ಲಭಿಸಿದೆ.

ಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳುಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳು

'ಇವತ್ತಿಗೆ 10 ವರ್ಷಗಳ ಹಿಂದೆ ನಾನು ಇದೇ ಪ್ಯಾರಿಸ್‌ನಲ್ಲಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿದ್ದೆ. ನನ್ನ ಮೂವರು ಸಹೋದರರೊಂದಿಗೆ ಇಲ್ಲಿಗೆ ಬಂದಿದ್ದನ್ನು ನಾನು ನೆನಪಿಸಿಕೊಳ್ಳಬಲ್ಲೆ. ಆಗ ನಾನು 22 ವರ್ಷದವನಾಗಿದ್ದೆ. ಆ ದಿನ ನಾನು ಇಲ್ಲೀವರೆಗೆ ಬೆಳೆದುನಿಲ್ಲುತ್ತೇನೆ ಎಂದು ಯೋಚಿಸಲಾಗದ ವಯಸ್ಸಿನಲ್ಲಿದ್ದೆ,' ಎಂದು ಮೆಸ್ಸಿ ಖುಷಿ ಹಂಚಿಕೊಂಡರು.

Story first published: Tuesday, December 3, 2019, 10:46 [IST]
Other articles published on Dec 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X