ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾದಿಂದ ನಿಷೇಧದ ಬೆನ್ನಲ್ಲೇ ಚುನಾವಣೆಗೆ ಎಐಎಫ್ಎಫ್ ಸಜ್ಜು: ಆಟಗಾರರಿಗಿಂತಲೂ ರಾಜಕಾರಣಿಗಳಿಗೇ ಹೆಚ್ಚು ಆಸಕ್ತಿ!

More politicians than footballers are competing for the top position at the Indian football body: reports

ಫೀಫಾದಿಂದ ನಿಷೇಧಕ್ಕೆ ಒಳಗಾಗಿರುವ ಭಾರತದ ಫುಟ್ಬಾಲ್ ಸಂಸ್ಥೆ ಆಲ್‌ ಇಂಡಿಯಾ ಫುಟ್ಬಾಲ್ ಫೆಡರೇಶನ್‌ನ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 28ರಂದು ಎಐಎಫ್ಎಫ್‌ನ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಭಾರತದ ಪ್ರಮುಖ ಕ್ರೀಡಾ ಸಂಸ್ಥೆಯ ಸ್ಥಾನದ ಮೇಲೆ ಫುಟ್ಬಾಲಿಗರಿಗಿಂತ ಹೆಚ್ಚಾಗಿ ರಾಜಕಾರಣಿಗಳು ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ. ಅಧ್ಯಕ್ಷ ಸ್ಥಾನಕ್ಕೆ 7 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಈಗಾಗಲೇ ಸಲ್ಲಿಸಿದ್ದಾರೆ.

'ದಿ ಪ್ರಿಂಟ್‌' ವರದಿಯ ಪ್ರಕಾರ ಈ ಚುನಾವಣೆಯಲ್ಲಿ ಮಾಜಿ ಫುಟ್‌ಬಾಲ್ ಆಟಗಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಿಗಳು ಸ್ಪರ್ಧಿಸುತ್ತಿದ್ದಾರೆ. ಎಐಎಫ್‌ಎಫ್ ಅಧ್ಯಕ್ಷ ಸ್ಥಾನಕ್ಕೆ ಏಳು ಮಂದಿ ನಾಮಪತ್ರ ಸಲ್ಲಿಸಿದ್ದು ಇದರಲ್ಲಿ ಇಬ್ಬರು ಮಾತ್ರವೇ ಮಾಜಿ ಫುಟ್ಬಾಲ್ ಆಟಗಾರರು ಎಂಬುದು ಗಮನಾರ್ಹ ಅಂಶ. ಭಾರತ ಫುಟ್ಬಾಲ್ ತಮಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಮತ್ತು ಮೋಹನ್ ಭಾಗನ್ ಹಾಘೂ ಈಸ್ಟ್ ಬೆಂಗಾಲ್‌ನ ಮಾಜಿ ಗೋಲ್‌ಕೀಪರ್ ಹಾಗೂ ಸದ್ಯ ರಾಜಕಾರಣಿಯಾಗಿರುವ ಕಲ್ಯಾಣ್ ಚೌಬೆ ಮಾತ್ರ ವೃತ್ತಿಪಟ ಫುಟ್ಬಾಲ್ ಆಟಗಾರರಾಗಿದ್ದು ಈ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಾಗಿದ್ದಾರೆ.

IND vs ZIM: ಭಾರತಕ್ಕೆ ಅದೃಷ್ಟದ ಆಟಗಾರನಾದ ದೀಪಕ್ ಹೂಡಾ; ವಿಶ್ವದಾಖಲೆ ನಿರ್ಮಿಸಿದ ಆಲ್‌ರೌಂಡರ್IND vs ZIM: ಭಾರತಕ್ಕೆ ಅದೃಷ್ಟದ ಆಟಗಾರನಾದ ದೀಪಕ್ ಹೂಡಾ; ವಿಶ್ವದಾಖಲೆ ನಿರ್ಮಿಸಿದ ಆಲ್‌ರೌಂಡರ್

ಉಳಿದಂತೆ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನ ಫುಟ್ಬಾಲ್ ಅಸೋಸಿಯೇಷನ್ ​​ಅಧ್ಯಕ್ಷ ಮನ್ವೇಂದ್ರ ಸಿಂಗ್ (ದಿವಂಗತ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಪುತ್ರ), ಫುಟ್ಬಾಲ್ ತಜ್ಞ ಮತ್ತು ದೆಹಲಿ ಫುಟ್ಬಾಲ್ ಅಸೋಸಿಯೇಷನ್ ​​ಅಧ್ಯಕ್ಷ ಶಾಜಿ ಪ್ರಭಾಕರನ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿ ಮತ್ತು ಐಎಫ್ಎ ಅಧ್ಯಕ್ಷ ಅಜಿತ್ ಬ್ಯಾನರ್ಜಿ, ಕರ್ನಾಟಕ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಮತ್ತು ಕಳೆದ ಗೋವಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಲಂಕಾ ನತಾಶಾ ಅಲೆಮಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಏಕೈಕ ಮಹಿಳೆಯಾಗಿದ್ದಾರೆ.

ಇನ್ನು ಭಾರತದ ಮಾಜಿ ಮಿಡ್‌ಫೀಲ್ಡರ್ ಯುಜೆನ್ಸನ್ ಲಿಂಗ್ಡೋಹ್ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗುವ ಸ್ಪರ್ಧೆಯಲ್ಲಿದ್ದಾರೆ. ಮೂವತ್ತಾರು ವರ್ಷದ ಲಿಂಗ್ಡೊ ಅವರು ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ ಶಾಸಕರಾಗಿದ್ದು, ಮೇಘಾಲಯ ವಿಧಾನಸಭೆಯ ಮೊಫ್ಲಾಂಗ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಭಾರತ ಫುಟ್‌ಬಾಲ್ ಫೆಡರೇಶನ್‌ನಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ ಹಾಗೂ ಫಿಫಾ ನಿಯಮಗಳ ಉಲ್ಲಂಘನೆ ಆದ ಕಾರಣ ಈ ನಿರ್ಧಾರವನ್ನು ಫಿಫಾ ತೆಗೆದುಕೊಂಡಿದೆ. ಫಿಫಾದ ಈ ನಿರ್ಧಾರ ಇದೀಗ ಭಾರತ ಫುಟ್‌ಬಾಲ್ ಫೆಡರೇಶನ್‌ಗೆ ಭಾರಿ ಮುಖಭಂಗವನ್ನು ತರಿಸಿದೆ.

ಫುಟ್‌ಬಾಲ್‌ನಲ್ಲಿ 85 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಭಾರತದ ಫುಟ್‌ಬಾಲ್ ಸಂಸ್ಥೆಯನ್ನು ಫಿಫಾ ನಿಷೇಧಿಸಿದೆ. ಫಿಫಾ ಇತಿಹಾಸದಲ್ಲಿ ಅಖಿಲ ಭಾರತೀಯ ಫುಟ್‌ಬಾಲ್ ಫೆಡರೇಶನ್ (ಎಐಎಫ್ಎಫ್) ವಿರುದ್ಧ ಇಂತಹ ಕಠಿಣ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಆದರೆ ದೇಶದ ಫುಟ್‌ಬಾಲ್ ಪ್ರೇಮಿಗಳಿಗೆಲ್ಲ ಶಾಕ್ ನೀಡುವ ಮೂಲಕ ಫಿಫಾ ಇದೀಗ ಭಾರತಕ್ಕೆ ರೆಡ್ ಕಾರ್ಡ್ ತೋರಿಸಿದೆ. ಭಾರತೀಯ ಫುಟ್‌ಬಾಲ್ ಫೆಡರೇಶನ್‌ನಲ್ಲಿ ಬಾಹ್ಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಫಿಫಾದ ಕ್ರಮವು ಎತ್ತಿ ತೋರಿಸಿದೆ. ಇದರೊಂದಿಗೆ ಈ ವರ್ಷ ಭಾರತದಲ್ಲಿ ನಡೆಯಬೇಕಿದ್ದ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ಗೆ ಕೂಡ ಅನಿಶ್ಚಿತೆ ಉಂಟಾಗಿದೆ. ಅಕ್ಟೋಬರ್ 11ರಿಂದ 30ರವರೆಗೆ ಟೂರ್ನಿ ನಡೆಯಬೇಕಿತ್ತು.

Story first published: Monday, August 22, 2022, 9:29 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X