ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರೋಚಕ ಕಾಳಗಕ್ಕೆ ಸಜ್ಜಾಗಿವೆ ಬೆಂಗಳೂರು ಎಫ್‌ಸಿ-ಚೆನ್ನೈಯಿನ್ ಎಫ್‌ಸಿ

By Isl Media
More than a football match, says Gregory ahead of Bengaluru clash

ಬೆಂಗಳೂರು, ನವೆಂಬರ್ 10: ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಋತುವಿನಲ್ಲಿ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿದ್ದು, ಮೊದಲ ಜಯದ ನಿರೀಕ್ಷೆಯಲ್ಲಿವೆ.

ರಿಷಬ್ ಪಂತ್‌ ವಿಕೆಟ್‌ ಕೀಪಿಂಗ್ ಎಡವಟ್ಟಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾರಿಷಬ್ ಪಂತ್‌ ವಿಕೆಟ್‌ ಕೀಪಿಂಗ್ ಎಡವಟ್ಟಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ

ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಚೆನ್ನೈಯಿನ್ ಎಫ್ ಸಿ ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಹಿಂದಿನ ಸಮಸ್ಯೆಯೇ ಪುನರಾವರ್ತನೆ ಆದಂತಿದೆ, ಹಾಲಿ ಚಾಮ್ಪಿಯೋನ್ ಬೆಂಗಳೂರು ಎಫ್ ಸಿ ಮೂರು ಪಂದ್ಯಗಳಲ್ಲಿ ಡ್ರಾ ಕಂಡು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 2017-18 ರ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ಮೂರು ಪಂದ್ಯಗಳಲ್ಲಿ ಕೇವಲ ಒಂದು ಡ್ರಾ ಕಂಡು ಕೊನೆಯ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಜಯ ಗಳಿಸಿ ಅಂತಯಾರಾಷ್ಟ್ರೀಯ ಪಂದ್ಯಗಳಿಗಾಗಿ ಆತ್ಮವಿಶ್ವಾಸದೊಂದಿಗೆ ತೆರಳುವ ಗುರಿ ಹೊಂದಿವೆ.

ಸಿಕ್ಕ ಅವಕಾಶದಲ್ಲಿ ಗೋಲು ಗಳಿಸುವಲ್ಲಿ ಇತ್ತಂಡಗಳು ವಿಫಲವಾಗಿರುವುದು ಇತ್ತಂಡಗಳ ಆರಂಭಿಕ ಹಿನ್ನಡೆಗೆ ಕಾರಣವಾಗಿದೆ. ಬೆಂಗಳೂರು ತಂಡ ಕನಿಷ್ಠ ಒಂದು ಗೋಲನ್ನಾದರೂ ಗಳಿಸಲು ಶಕ್ಯವಾಗಿದೆ. ಚೆನ್ನೈಯಿನ್ ಎಫ್ ಸಿ ಇದುವರೆಗೂ ಗೋಲು ಗಳಿಸುವಲ್ಲಿ ವಿಫಲವಾಗಿರುವ ತಂಡವೆನಿಸಿದೆ.

ಮೇರಿ ಕೋಮ್-ನಿಖಾತ್ ಝರೀನ್ ಕುತೂಹಲಕಾರಿ ಕಾಳಗ ಡಿಸೆಂಬರ್‌ನಲ್ಲಿ!ಮೇರಿ ಕೋಮ್-ನಿಖಾತ್ ಝರೀನ್ ಕುತೂಹಲಕಾರಿ ಕಾಳಗ ಡಿಸೆಂಬರ್‌ನಲ್ಲಿ!

ಇತ್ತಂಡಗಳಿಗೆ ಇಲ್ಲಿಗೆ ಎಲ್ಲವೂ ಮುಗಿದು ಹೋಗಿಲ್ಲ. ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಉತ್ತಮವಾಗಿ ಆಡಿದರೂ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಗೋವಾ ವಿರುದ್ಧದ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಎದುರಾಳಿ ತಂಡ ಗಳಿಸಿದ ಗೋಲಿನಿಂದ ಅಂಕ ಹಂಚಿಕೊಳ್ಳುವಂತಾಯಿತು. ಸುಬ್ರತಾ ಪಾಲ್ ಮಿಂಚಿದ ಪರಿಣಾಮ ಜೇಮ್ಶೆಡ್ಪುರ ಎಫ್ ಸಿ ವಿರುದ್ಧದ ಜಯ ಕೈ ಜಾರಿತು.

More than a football match, says Gregory ahead of Bengaluru clash

'' ಈ ರೀತಿ ಫುಟ್ಬಾಲ್ ನಲ್ಲಿ ಸಂಭವಿಸುವುದು ಸಹಜ. ಕೆಲವು ಬಾರಿ ನಡೆಯುವ ಘಟನೆಗಳು ಕಾರಣವಾಗುತ್ತವೆ. ಆದರೆ ಅದಕ್ಕೆ ನಿಜವಾದ ಕಾರಣವೇ ಇರುವುದಿಲ್ಲ. ಅದು ಕೇವಲ ಸಂಖ್ಯೆ. ಚೆನ್ನೈಗೂ ಇದೆ ರೀತಿ. ಹಲವು ಪಂದ್ಯಗಳನ್ನಾಡಿದರೂ ಚೆನ್ನೈ ಗೋಲಿನಿಂದ ವಂಚಿತವಾಗಿದೆ. ಆದರೆ ಅವರು ಬದಲಾವಣೆ ಮಾಡುವುದು ಖಂಡಿತ. ವಿಭಿನ್ನ ಆಟಗಾರರಿಂದ ನಾವು ಹಲವು ಅವಕಾಶಗಳನ್ನು ಸೃಷ್ಟಿಸಿದೆವು. ಅದು ಪ್ರಮುಖವಾದುದು,'' ಎಂದು ಬೆಗಳೂರು ಎಫ್ ಸಿ ಕೋಚ್ ಕಾರ್ಲ್ಸ್ ಕ್ವಾಡ್ರಟ್ ಹೇಳಿದ್ದಾರೆ.

ತಮ್ಮ ತಂಡ ಪ್ರದರ್ಶನ ನೀಡುತ್ತಿರುವ ರೀತಿಯ ಬಗ್ಗೆ ಸ್ಪೇನ್ ನ ಕೋಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಡಿಫೆನ್ಸ್ ವಿಭಾಗದ ಆಟದ ಬಗ್ಗೆ. ಗೇಯಗೊಂಡಿರುವ ಆಲ್ಬರ್ಟ್ ಸೆರ್ರಾನ್ ಅವರ ಅನುಪಸ್ಥಿತಿ ತಂಡಕ್ಕೆ ಚಿಂತೆಯಾಗಿದೆ.

ಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾ

''ನಾವು ನಮ್ಮ ತಂಡದ ಜತೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಅದು ಮೊದಲ ಮೂರು ಪಂದ್ಯಗಳಲ್ಲಿ ಪ್ರಕಟವಾಗಿದೆ. ನಾವು ಗೋಲು ಗಾಳಿಸುತ್ತಿಲ್ಲ. ಆದರೆ ನಮ್ಮ ಪ್ರದರ್ಶನದಲ್ಲಿ ಸ್ಥಿರತೆ ಇದೆ,'' ಎಂದು ಅವರು ಹೇಳಿದರು.

ಜಾನ್ ಗ್ರೆಗೊರಿ ಪಡೆ ಕಳೆದ ಋತುವಿನ ಫಾರ್ವರ್ಡ್ ವಿಭಾಗವನ್ನು ಸಂಪೂರ್ಣವಾಗಿ ತೆಗೆದು, ಹೊಸತನ ನೀಡಿದೆ. ಆದರೆ ಉತ್ತಮ ರೀತಿಯಲ್ಲಿ ತೀರ್ಮಾನ ಕೈಗೊಳ್ಳುವುದು ಮತ್ತು ನಿಖರವಾದ ಅಂತಿಮ ರೂಪು ನೀಡದಿರುವುದು ತಂಡದ ಗೋಲು ಗಳಿಕೆ ವಿಫಲವಾಗಲು ಪ್ರಮುಖ ಕಾರಣ.

''ನಾವು ನಿಜವಾಗಿಯೂ ಉತ್ತಮವಾಗಿ ಆಡಿದ್ದೇವೆ. ವಿಶೇಷವಾಗಿ ಹಿಂದಿನ ಎರಡು ಪಂದ್ಯಗಳಲ್ಲಿ ನಮ್ಮ ಆಟ ಉತ್ತಮವಾಗಿತ್ತು. ಎರಡು ಪಂದ್ಯಗಳಲ್ಲಿ ತಲಾ 20 ರಂತೆ ನಾವು 40 ಹೊಡೆತಗಳನ್ನು ಪ್ರದರ್ಶಿಸಿದ್ದೇವೆ. ಅಲ್ಲಿ ಗೋಳು ಗಳಿಸಬಹುದಾಗಿತ್ತು ಎಂಬುದೂ ನಮಗೆ ಗೊತ್ತಿತ್ತು. ಆ ಎರಡು ಪಂದ್ಯಗಳಿಂದ ನಾವು ಆರು ಅಂಕಗಳನ್ನು ಗಳಿಸಬಹುದಾಗಿತ್ತು.,'' ಎಂದು ಗ್ರೆಗೊರಿ ಹೇಳಿದ್ದಾರೆ.

ಅನಿರುಧ್ ಥಾಪಾ ಮತ್ತು ರಫಾಯೆಲ್ ಕ್ರೆವೆಲ್ಲರೋ ಮಿಡ್ ಫೀಲ್ಡ್ ವಿಭಾಗದಲ್ಲಿ ತಂಡಕ್ಕೆ ಆಧಾರವೆನಿಸಿದ್ದಾರೆ. '' 2016ರಲ್ಲಿ ಬೆಂಗಳೂರು ಎಫ್ ಸಿ ಲೀಗ್ ಗೆ ಬಂದಾಗಿನಿಂದ ಎರಡು ತಂಡಗಳ ನಡುವಿನ ವೈರತ್ವ ಹೆಚ್ಚಿದೆ. ನಮ್ಮ ಹಾಗೂ ಅವರ ಅಭಿಮಾನಿಗಳು ಆಟವನ್ನು ಸಂಭ್ರಮಿಸುತ್ತಿದ್ದಾರೆ ಏಕೆಂದರೆ, ಅದರಲ್ಲಿ ಅನೇಕ ಅಂಶಗಳಿವೆ. ಋತುವಿನ ಮೊದಲ ಜಯ ಗಳಿಸಲು ಬೆಂಗಳೂರಿಗಿಂತ ಉತ್ತಮವಾದ ಸ್ಥಳ ಬೇರಿಲ್ಲ. ಇದು ಫುಟ್ಬಾಲ್ ಆಟಕ್ಕಿಂತ ಭಿನ್ನವಾದುದು,'' ಎಂದು ಗ್ರೆಗೊರಿ ಹೇಳಿದ್ದಾರೆ.

Story first published: Saturday, November 9, 2019, 19:30 [IST]
Other articles published on Nov 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X