ನಾಲ್ಕನೇ ಸ್ಥಾನ ಭದ್ರಪಡಿಸಲು ಮುಂಬೈ, ಬೆಂಗಳೂರು ನಡುವೆ ಫೈಟ್

By Isl Media

ಮುಂಬೈ, ಜನವರಿ, 17: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶುಕ್ರವಾರ ಇಲ್ಲಿನ ಮುಂಬೈ ಫುಟ್ಬಾಲ್ ಅರೇನಾದಲ್ಲಿ ಬೆಂಗಳೂರು ಎಫ್ ಸಿ ತಂಡ ಹಾಗೂ ಬೆಂಗಳೂರು ಎಫ್ ಸಿ ತಂಡಗಳು ಮುಖಾಮುಖಿ ನಡೆಸಲಿವೆ. ಎಟಿಕೆ ಹಾಗೂ ಒಡಿಶಾ ವಿರುದ್ಧದ ಪಂದ್ಯಗಳಲ್ಲಿ 0-2 ಅಂತರದಲ್ಲಿ ಮೋಲನುಭವಿಸಿದ ನಂತರ ಮುಂಬೈ ತಂಡ ಈಗ ಕಠಿಣ ಶ್ರಮ ವಹಿಸಬೇಕಾಗಿದೆ. ಈಗ ಪ್ಲೇ ಆಫ್ ಗಾಗಿ ಹಾದಿಯನ್ನು ಸುಗಮಗೊಇಸಬೇಕಾಗಿದೆ. 16 ಅಂಕಗಳನ್ನು ಗಳಿಸಿರುವ ಮುಂಬೈ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಒಡಿಶಾಕ್ಕಿಂತ ಒಂದು ಪಂದಯ ಹೆಚ್ಚು ಆಡಬೇಕಾಗಿರುವ ಮುಂಬೈ ಈಗ ನಾಲ್ಕನೇ ಸ್ಥಾನ ಭದ್ರಪಡಿಸಿಕೊಳ್ಳಬೇಕಾದಲ್ಲಿ ಬೆಂಗಳೂರಿಗೆ ಸೋಲುಣಿಸಬೇಕಾಗಿದೆ.

ಐಎಸ್‌ಎಲ್ 2020: ಜಯದ ಓಟ ಮುಂದುವರೆಸಿದ ಒಡಿಶಾ ಎಫ್‌ಸಿ

ಒಡಿಶಾ 21 ಅಂಕಗಳನ್ನು ಹೊಂದಿದ್ದು, ಬೆಂಗಳೂರು 22 ಅಂಕಗಳನ್ನು ಗಳಿಸಿಸದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎಟಿಕೆ ವಿರುದ್ಧ ಸೋಲು ಆನುಭವಿಸಿದ ನಂತರ ಪುಟಿದೆದ್ದ ಬೆಂಗಳೂರು ಗೋವಾ ಮತ್ತು ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಿ ಮತ್ತೆ ಮೇಲುಗೈ ಸಾಧಿಸಿತು. ಕಳೆದ ಎರಡು ಪಂದ್ಯಗಳಲ್ಲಿ ಮೂರು ಗೋಲು ಗಳಿಸಿರುವ ಛೆಟ್ರಿ, ಋತುವಿನಲ್ಲಿ ಒಟ್ಟು ಎಂಟು ಗೋಲು ಗಳಿಕೆಯ ಸಾಧನೆ ಮಾಡಿದ್ದಾರೆ. ಮಿಡ್ ಫೀಲ್ಡ್ ನಲ್ಲಿ ಎರಿಕ್ ಪಾರ್ಥಲು ಉತ್ತಮವಾಗಿ ಪ್ರದರ್ಶನ ತೋರುತ್ತಿದ್ದು, ಎರಡು ಗೋಲುಗಳನ್ನು ಗಳಿಸಿದ್ದಲ್ಲದೆ, ನಾಲ್ಕು ಗೋಲುಗಳನ್ನಗ ಗಳಿಸುವಲ್ಲಿ ನೆರವಾಗಿದ್ದಾರೆ. ದಿಮಾಸ್ ಡೆಲ್ಗಾಡೋ ಈ ಋತುವಿನಲ್ಲಿ ಅತಿ ಹೆಚ್ಚು ಪಾಸ್ ಗಳನ್ನು ನೀಡಿದ ಆಟಗಾರರೆನಿಸಿದ್ದಾರೆ. ಹೊಸ ಸ್ಟ್ರೈಕರ್ ಡೆಸ್ಮನ್ ಬ್ರೌನ್ ಪ್ರವಾಸಿ ತಂಡದ ಆಯ್ಕೆಗೆ ಲಭ್ಯರಿರುವುದು ತಂಡದ ಬಲವನ್ನು ಹೆಚ್ಚಿಸಿದೆ.

ಐಎಸ್‌ಎಲ್ 2020: ಎಟಿಕೆಗೆ ಮನೆಯಂಗಣದಲ್ಲಿ ಶಾಕ್ ನೀಡಿದ ಬ್ಲಾಸ್ಟರ್ಸ್

ಈ ಋತುವಿನಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ಮುಂಬೈ ಸಿಟಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ''ಮುಂಬೈ ಸಿಟಿ ತಂಡ ನಮ್ಮ ಪಾಲಿಗೆ ಕಠಿಣ ಎದುರಾಳಿ ಎನಿಸಿದೆ. ಅದೊಂದು ತಕ್ಕ ತಿರುಗೇಟು ನೀಡುವ ತಂಡ. ಹೆಚ್ಚು ದೂರದಲ್ಲಿರುವ ಚೆಂಡನ್ನು ನಿರಾಯಾಸವಾಗಿ ಪಾಸ್ ಮಾಡುವ ಸಾಮರ್ಥ್ಯ ಹೊಂದಿರುವ ತಂಡವದು. ಮೊದಲಿಗೆ ಗೋಲು ಗಳಿಸಬೇಕು. ಒಂದುವೇಳೆ ಅವರು ಮೊದಲು ಗೋಲು ಗಳಿಸಿದರೆ ಮತ್ತೆ ಪ್ರತಿದಾಳಿ ಆರಂಭಿಸುತ್ತಾರೆ. ಆದ್ದರಿಂದ ನಾವು ಮೊದಲು ಗೋಲು ಗಳಿಸಲು ಯತ್ನಿಸುತ್ತೇವೆ,'' ಎಂದು ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.

''ಲೀಗ್ ನ ಸ್ಥಿತಿ ಅತ್ಯಂತ ವೇಗವಾಗಿ ಬದಲಾಗಬಹುದು, ಎಟಿಕೆ ಉತ್ತಮ ಸ್ಥಿತಿಯಲ್ಲಿತ್ತು, ಆದರೆ ಎರಡು ಪಂದ್ಯ ಸೋತ ಬಳಿಕ ಪರಿಸ್ಥಿತಿ ಬಲಾಯಿತು. ಒಡಿಶಾ ಇದ್ದಕ್ಕಿದ್ದಂತೆ ಸುಧಾರಣೆಕಂಡಿತು. ನಾವು ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದರೆ ಪ್ಲೇ ಆಫ್ ತಲುಪಬಹುದು, ಮುಂಬೈ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುವುದು ಖಚಿತ,'' ಎಂದರು.

ಪೌಲೋ ಮಚಾಡೋ ಅವರು ದೀರ್ಘ ಅವಧಿಯಲ್ಲಿ ಗಾಯಗೊಂಡ ಕಾರಣ ಕೋಚ್ ಜಾರ್ಜ್ ಕೋಸ್ಟಾ ಅವರಿಗೆ ಮಿಡ್ ಫೀಲ್ಡ್ ನಲ್ಲಿ ಮಿಶ್ರ ಆಯ್ಕೆ ಅನಿವಾರ್ಯವಾಗಿದೆ. ಬೆಂಗಳೂರಿನ ಡಿಫೆನ್ಸ್ ವಿಭಾಗ ಉತ್ತಮವಾಗಿರುವುದರಿಂದ ಮುಂಬೈ ಆ ಬಗೆಗೆ ಎಚ್ಚರಿಕೆ ವಹಿಸಬೇಕಾಗಿರುವುದು ಅನಿವಾರ್ಯ. ಅಮೈನ್ ಚೆರ್ಮಟಿ ಮತ್ತು ಮೊಡೌ ಸೊಗೌ ಒಟ್ಟಾಗಿ ಇದುವರೆಗೂ ಆರು ಗೋಲುಗಳನ್ನು ಗಳಿಸಿದ್ದಾರೆ.

''ಕಳೆದ ಎರಡು ಪಂದ್ಯಗಳನ್ನು ನಾವು ಸೋತಿರುವುದು ನಿಜ, ಎಟಿಕೆ ವಿರುದ್ಧ ನಾವು ಸೋಲಬೇಕಾಗಿರಲಿಲ್ಲ. ಮತ್ತು ಒಡಿಶಾ ವಿರುದ್ಧ ನಾವು ಆಡಿರುವ ಪಂದ್ಯ ಇದುವರೆಗಿನ ಅತ್ಯಂತ ಕಳಪೆ ಪಂದ್ಯವಾಗಿತ್ತು. ಇದು ಕಳೆದ ಒಂದೂವರೆ ವರ್ಷದಲ್ಲೇ ಕಂಡ ಕಳಪೆ ಪಂದ್ಯವಾಗಿದೆ. ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಕಳೆದ ಪಂದ್ಯದಲ್ಲಿ ಏನಾಯಿತು ಎಂಬುದುನ್ನು ವಿವರಿಸುವುದು ನನಗೆ ಕಷ್ಟ,'' ಎಂದು ಮುಂಬೈ ಸಿಟಿ ಎಫ್ ಸಿ ತಂಡದ ಕೋಚ್ ಜಾರ್ಜ್ ಕೋಸ್ಟಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, January 17, 2020, 7:01 [IST]
Other articles published on Jan 17, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X