ಐಎಸ್‌ಎಲ್: ಜಯದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿ

By Isl Media

ಗೋವಾ, ಜನವರಿ 2: ಅಗ್ರ ಸ್ಥಾನ ತಲಪುವುದನ್ನೇ ಗುರಿಯಾಗಿಸಿಕೊಂಡ ಮುಂಬೈ ಸಿಟಿ ಎಫ್ ಸಿ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.ಲೆ ಫ್ರಾಂಡೆ (3ನೇ ನಿಮಿಷ) ಮತ್ತು ಗಾಯದಿಂದ ಚೇತರಿಸಿಕೊಂಡು ಮತ್ತೆ ಅಂಗಣಕ್ಕಿಳಿದ ಹ್ಯೂಗೋ ಬೌಮಾಸ್ 11ನೇ ನಿಮಿಷದಲ್ಲಿ ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತು.

ಒಟ್ಟು 19 ಅಂಕಗಳನ್ನು ಗಳಿಸಿದ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕ್ಕೇರಿತು. ಕೊನೆಗೂ ಕೇರಳ ತಂಡಕ್ಕೆ ಸರ್ಗಿಯೋ ಲೊಬೆರಾ ವಿರುದ್ಧ ಗೆಲ್ಲಲಾಗಲಿಲ್ಲ. ಈ ಕೋಚ್ ವಿರುದ್ಧ ಸತತ ಏಳನೇ ಪಂದ್ಯದಲ್ಲಿ ಗೆಲ್ಲಲು ಕೇರಳ ವಿಫಲವಾಯಿತು.

ಕೊನೆ ಘಟ್ಟದಲ್ಲಿ ಎಫ್‌ಸಿ ಗೋವಾಗೆ ಶರಣಾದ ಹೈದರಾಬಾದ್‌ ಎಫ್‌ಸಿ

ಪ್ರಥಮಾರ್ಧದಲ್ಲಿ ಮುಂಬೈ ಮೇಲುಗೈ: ಲೆ ಫ್ರಾಂಡೆ (3ನೇ ನಿಮಿಷ) ಹಾಗೂ ಮತ್ತು ಹ್ಯೂಗೋ ಬೌಮಾಸ್ (11ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಮುಂಬೈ ಸಿಟಿ ಎಫ್ ಸಿ ದುರ್ಬಲ ಪ್ರದರ್ಶನ ತೋರಿದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಪ್ರಥಮಾರ್ಧದಲ್ಲಿ 2-0 ಗೋಲುಗಳಿಂದ ಪ್ರಥಮಾರ್ಧದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಸತತ ಎರಡು ಪಂದ್ಯಗಳಲ್ಲಿ ಐದು ಗೋಲುಗಳನ್ನು ಗಳಿಸಿ ಆತ್ಮವಿಶ್ವಾಸದಲ್ಲಿದ್ದ ಕೇರಳಕ್ಕೆ ಈ ಆರಂಭಿಕ ಹಿನ್ನಡೆ ಸೋಲಿಗೆ ವೇದಿಕೆಯಾಗಿ ಕಂಡು ಬಂದು.

ಮುಂಬೈಗೆ ಅಗ್ರ ಸ್ಥಾನದ ಗುರಿ:

ಕೋಚ್ ಸರ್ಗಿಯೊ ಲೊಬೆರಾ ಬಂದಾಗಿನಿಂದ ಉತ್ತಮ ಪ್ರದರ್ಶನ ತೋರುತ್ತಿರುವ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಶನಿವಾರ ನಡೆಯಲಿರುವ ಹೊಸ ವರುಷದ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನವನ್ನು ಮರಳಿ ಪಡೆಯುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.

ಐಎಸ್‌ಎಲ್: ಚೆನ್ನೈ ವಿರುದ್ಧ ಡ್ರಾ ಕಂಡರೂ ಅಗ್ರಸ್ಥಾನ ಪಡೆದ ಮೋಹನ್ ಬಗಾನ್

16 ಅಂಕಗಳನ್ನು ಗಳಿಸಿರುವ ಮುಂಬೈ ತಂಡ ಕೇರಳ ವಿರುದ್ಧ ಜಯ ಗಳಿಸಿದರೆ ಮತ್ತೆ ಅಗ್ರ ಸ್ಥಾನ ತಲುಪಲಿದೆ.ಹಿಂದಿನ ಆರು ಪಂದ್ಯಗಳಲ್ಲಿ ಲೊಬೆರಾ ಅವರು ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೋಲು ಅನುಭವಿಸಿರಲಿಲ್ಲ. ಐದು ಪಂದ್ಯಗಳಲ್ಲಿ ಜಯ ಗಳಿಸಿ ಒಮದು ಪಂದ್ಯದಲ್ಲಿ ಡ್ರಾ ಕಂಡಿತ್ತು. ಆದರೆ ಅದು ಬೇರೆಯೇ ಕತೆ. ಶನಿವಾರದ ಪಂದ್ಯ ಒಂದೇ ರೀತಿಯ ಆಟದ ಶೈಲಿಯನ್ನು ಹೊಂದಿರುವ ತಂಡಗಳ ನಡುವಿನ ಹೋರಾಟವಾಗಿದೆ.

ಅವರ ಪಡೆ ಎದುರಾಳಿ ತಂಡಕ್ಕೆ ಕೇವಲ ಮೂರು ಗೋಲುಗಳನ್ನು ಗಳಿಸುವ ಅವಕಾಶ ನೀಡುತ್ತು. 11 ಗೋಲುಗಳನ್ನು ಗಳಿಸಿ ಸಮತೋಲನದ ಆಟ ಪ್ರದರ್ಶಿಸಿತ್ತು. ಶನಿವಾರದ ಪಂದ್ಯಕ್ಕೆ ಹ್ಯುಗೊ ಬೌಮಾಸ್ ಅವರ ಲಭ್ಯವಿದೆ ಎಂಬುದನ್ನು ಲೊಬೆರಾ ಸ್ಪಷ್ಟಪಡಿಸಿದ್ದಾರೆ

For Quick Alerts
ALLOW NOTIFICATIONS
For Daily Alerts
Story first published: Sunday, January 3, 2021, 8:56 [IST]
Other articles published on Jan 3, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X