ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್‌ಗೆ ಸೋಲುಣಿಸಿ ಅಗ್ರ ಸ್ಥಾನವನ್ನು ಕಾಯ್ದುಕೊಂಡ ಮುಂಬೈ

By Isl Media
Mumbai inflict first defeat of the season on Hyderabad

ಗೋವಾ, ಡಿಸೆಂಬರ್ 20: ವಿಘ್ನೇಶ್ ದಕ್ಷಿಣಾಮೂರ್ತಿ (38ನೇ ನಿಮಿಷ) ಹಾಗೂ ಆಡಂ ಲೆ ಫೊಂಡ್ರೆ (59ನೇ ನಿಮಿಷ) ಅವರು ಪ್ರಥಮ ಮತ್ತು ದ್ವಿತಿಯಾರ್ಧದಲ್ಲಿ ಗಳಿಸಿದ ಗೋಲುಗಳ ನೆರವಿನಿಂದ ಹೈದರಾಬಾದ್ ತಂಡದ ವಿರುದ್ಧ 2-0 ಗೋಲಿನಿಂದ ಮಣಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.

ಪ್ರಥಮಾರ್ಧದಲ್ಲಿ ಮುಂಬೈ ಮೇಲುಗೈ: ವಿಘ್ನೇಶ್ ದಕ್ಷಿಣ ಮೂರ್ತಿ 38ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಮುಂಬಯ ಸಿಟಿ ಎಫ್ ಸಿ ತಂಡ ಹೈದರಾಬಾದ್ ಎಫ್ ಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 1-0 ಮುನ್ನಡೆ ಕಂಡಿದೆ. ಅರಿದಾನೆ ಸ್ಯಾಂಟನಾ ಅವರಿಗೆ ಗೋಲು ಗಳಿಸುವ ಅವಕಾಶ ಸಿಗಲಿಲ್ಲ. ತಂಡದ ಪರ ನಾಲ್ಕು ಗೋಲುಗಳನ್ನು ಗಳಿಸಿದ್ದ ನಾಯಕ ಅರಿದಾನೆ ಅವರನ್ನು ನಿಯಂತ್ರಿಸುವಲ್ಲಿ ಮುಂಬೈ ಸಿಟಿ ತಂಡದ ಡಿಫೆನ್ಸ್ ವಿಭಾಗ ಯಶಸ್ವಿಯಾಯಿತು.

ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ಸೋಲಿಗೆ ಶರಣಾದ ನಾರ್ಥ್ ಈಸ್ಟ್ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ಸೋಲಿಗೆ ಶರಣಾದ ನಾರ್ಥ್ ಈಸ್ಟ್

ಗೋಲು ಗಳಿಸದಿದ್ದರೂ ಹೈದರಾಬಾದ್ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿತ್ತು. 5ನೇ ನಿಮಿಷದಲ್ಲಿ ಬಿಪಿನ್ ಸಿಂಗ್ ನೀಡಿದ ಪಾಸ್ ಮೂಲಕ ಮುಂಬೈಗೆ ಸುಲಭವಾಗಿ ಗೋಲು ಗಳಿಸಬಹುದಾಗಿತ್ತು. ಆದರೆ ಹೈದರಾಬದ್ ನ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ತಡೆಯಿತು. 15ನೇ ನಿಮಿಷದಲ್ಲೂ ಬಿಪಿನ್ ತಮ್ಮ ಪಾಸ್ ಮೂಲಕ ಇದೇ ರೀತಿಯ ಅವಕಾಶ ನಿರ್ಮಿಸಿದ್ದರೂ ಈ ಬಾರಿ ಬೋರ್ಗಸ್ ತುಳಿದ ಚೆಂಡು ಆಫ್ ಸೈಡ್ ಆಗಿತ್ತು. ಕೊನೆಗೂ 38ನೇ ನಿಮಿಷದಲ್ಲಿ ಬಿಪಿನ್ ಸಿಂಗ್ ನೀಡಿದ ಪಾಸ್ ಗೆ ವಿಘ್ನೇಶ್ ದಕ್ಷಿಣಮೂರ್ತಿ ಉತ್ತಮ ರೀತಿಯಲ್ಲಿ ಸ್ಪಂದಿಸಿ ಮಿಂಚಿನ ಗೋಲು ಗಳಿಸಿದರು.

ಸತತ ಜಯದ ಗುರಿಯಲ್ಲಿ ಹೈದರಾಬಾದ್: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್ ಸಿ ವಿರುದ್ಧ ಜಯ ಗಳಿಸಿ ಸತತ ಯಶಸ್ಸಿನ ಹಂಬಲದೊಂದಿಗೆ ಹೈದರಾಬಾದ್ ಎಫ್ ಸಿ ಅಂಗಣಕ್ಕಿಳಿಯಿತು. ಇಲ್ಲಿ ಜಯ ಗಳಿಸಿದರೆ ಹೈದರಾಬಾದ್ ಎಫ್ ಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲುಪಲಿದೆ. ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆದ್ದ ನಂತರ ಹೈದರಾಬಾದ್ ನ ಆತ್ಮವಿಶ್ವಾಸ ಹೆಚ್ಚಿದೆ. ಅರಿದಾನೆ ಸ್ಯಾಂಟನಾ ಒಂದೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಂಡ ಗಳಿಸಿರುವ ಒಟ್ಟು ಆರು ಗೋಲುಗಳಲ್ಲಿ ಸ್ಯಾಂಟನಾ ನಾಲ್ಕು ಗೋಲುಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಹೈದರಾಬಾದ್ ಇದುವರೆಗೂ ಉತ್ತಮ ಗುಣಮಟ್ಟದ ಫುಟ್ಬಾಲ್ ಆಡಿದೆ. ಎದುರಾಳಿ ತಂಡಕ್ಕೆ ಹೆಚ್ಚು ಸಮಯ ಚೆಂಡನ್ನು ವಶದಲ್ಲಿಟ್ಟುಕೊಳ್ಳಲು ಮಾನ್ವೆಲ್ ಮಾರ್ಕ್ಬೆಜ್ ಪಡೆ ಅವಕಾಶ ನೀಡುವುದಿಲ್ಲ.

ಐಎಸ್‌ಎಲ್: ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ನಡುವೆ ರೋಚಕ ಪಂದ್ಯಐಎಸ್‌ಎಲ್: ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ನಡುವೆ ರೋಚಕ ಪಂದ್ಯ

ಆದರೆ ವೈಯಕ್ತಿಕ ಪ್ರಮಾದಗಳು ತಂಡದ ಯಶಸ್ಸಿಗೆ ಅಡ್ಡಿಯಾದವು. ಬಲಿಷ್ಠ ಮುಂಬೈ ವಿರುದ್ಧ ತಮ್ಮ ಆಟದ ಉತ್ತಮ ಆಂಶಗಳನ್ನು ಪ್ರದರ್ಶಿಸಲು ತಂಡ ಅಂಗಣಕ್ಕಿಳಿಯಿತು. ತನ್ನ ಹಿಂದಿನ ಪಂದ್ಯದಲ್ಲಿ ಮುಂಬೈ ಸಿಟಿ ತಂಡ ಜೆಮ್ಷೆಡ್ಪುರ ವಿರುದ್ಧ ಡ್ರಾಗೆ ತೃಪ್ತಿಪಟ್ಟಿತ್ತು. ಹ್ಯೂಗೋ ಬೌಮಾಸ್ ಗಾಯಗೊಂಡು ಅಂಗಣದಿಂದ ಹೊರನಡೆದದ್ದು ಟಾಟಾ ಪಡೆಯ ವಿರುದ್ಧ ಮುಂಬೈ ಜಯ ಗಳಿಸಲು ವಿಫಲವಾಗಲು ಪ್ರಮುಖ ಕಾರಣವಾಯಿತು. ಆಡಂ ಲೆ ಫೊಂಡ್ರೆ ಮತ್ತು ಬಾರ್ಥಲೋಮ್ಯೊ ಒಗ್ಬಚೆ ಆಕ್ರಮಣಕಾರಿ ಆಟಕ್ಕಿಳಿದರೆ ತಂಡದ ಗೋಲು ಗಳಿಕೆಯಲ್ಲಿ ಏರಿಕೆ ಆಗಬಹುದು ಎಂಬುದು ಕೋಚ್ ಸರ್ಗಿಯೊ ಲೊಬೆರಾ ಅವರ ಯೋಚನೆ. ಎಲ್ಲ ನಾಲ್ಕೂ ಪಂದ್ಯಗಳಲ್ಲಿ ಫೊಂಡ್ರೆ ನಾಲ್ಕು ಗೋಲುಗಳನ್ನು ಗಳಿಸಿರುವುದು ಗಮನಾರ್ಹ.

Story first published: Monday, December 21, 2020, 10:12 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X