ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಮಹಾರಾಷ್ಟ್ರ ಡರ್ಬಿಯಲ್ಲಿ ಮುಂಬೈ, ಪುಣೆ ಸೆಣಸು

By Isl Media
Mumbai team to beat Pune team in ISL football match

ಪುಣೆ, ಮಾರ್ಚ್ 1: ಇಲ್ಲಿನ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಶನಿವಾರ (ಫೆಬ್ರವರಿ 2) ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಕೊನೆಯ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ತಂಡ ಮಹಾರಾಷ್ಟ್ರದ ಡರ್ಬಿಯ ಹೋರಾಟದಲ್ಲಿ ಪುಣೆ ವಿರುದ್ಧ ಗೆದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.

ಏಕದಿನ ಕ್ರಿಕೆಟ್‌ನಲ್ಲಿ 400+ ರನ್ ದಾಖಲೆ: ಕುತೂಹಲಕಾರಿ ಅಂಕಿ-ಅಂಶಗಳು!ಏಕದಿನ ಕ್ರಿಕೆಟ್‌ನಲ್ಲಿ 400+ ರನ್ ದಾಖಲೆ: ಕುತೂಹಲಕಾರಿ ಅಂಕಿ-ಅಂಶಗಳು!

ಮುಂಬೈ ಈಗಾಗಲೇ ಇಂಡಿಯನ್ ಸೂಪರ್ ಲೀಗ್‌ನ ಸೆಮಿಫೈನಲ್ ಹಂತ ತಲುಪಿದ್ದು, ಪುಣೆ ವಿರುದ್ಧ ಗೆದ್ದರೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪುವ ಗುರಿ ಹೊಂದಿದೆ. ಹಾಗಾದಲ್ಲಿ , ನಾಕೌಟ್ ಹಂತದಲ್ಲಿ ಬಲಿಷ್ಠ ಗೋವಾ ತಂಡವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಾರ್ತ್ ಈಸ್ಟ್ ಯುನೈಟೆಡ್ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯ ಗಳಿಸಿದರೆ, ಜಾರ್ತ್ ಕೋಸ್ಟಾ ಪಡೆ ಲೀಗ್‌ನ ಅಗ್ರ ಸ್ಥಾನಿ ಬೆಂಗಳೂರು ವಿರುದ್ಧ ಸೆಣಸಲಿದೆ.

1
1042975

ಸೌವಿಕ್ ಚಕ್ರವರ್ತಿ ಹಾಗೂ ಸೆಹನಾಜ್ ಸಿಂಗ್ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ಆಟಗಾರರು ನಾಳೆಯ ಪಂದ್ಯಕ್ಕೆ ಗೈರಾಗಿರುತ್ತಾರೆ, ಆದರೂ ಕೋಸ್ಟಾ ಜಯವೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.

ವಿಲಕ್ಷಣ ರೀತೀಲಿ ಔಟಾದ ನ್ಯೂಜಿಲ್ಯಾಂಡ್‌ನ ಕೇಟೀ ಪರ್ಕಿನ್ಸ್: ವಿಡಿಯೋ!ವಿಲಕ್ಷಣ ರೀತೀಲಿ ಔಟಾದ ನ್ಯೂಜಿಲ್ಯಾಂಡ್‌ನ ಕೇಟೀ ಪರ್ಕಿನ್ಸ್: ವಿಡಿಯೋ!

'ಯಾರಿಗೂ ವಿಶ್ರಾಂತಿ ನೀಡುವುದಿಲ್ಲ, ಗಾಯದ ಕಾರಣ ಕೆಲವು ಆಟಗಾರರು ನಾಳೆಯ ಪಂದ್ಯದಲ್ಲಿ ಆಡುವುದಿಲ್ಲ. ಕೆಲವು ಆಟಗಾರರು ಅಮಾನತಿನಲ್ಲಿದ್ದು, ಇನ್ನು ಕೆಲವರು ಮೂರು ಹಳದಿ ಕಾರ್ಡ್ ಪಡೆದು ಆತಂಕದಲ್ಲಿದ್ದಾರೆ. ಇದರಿಂದಾಗಿ ಉಳಿದವರು ಆಟವಾಡಲಿದ್ದಾರೆ. ಇದು ಲೀಗ್ ಹಂತದ ಅಂತಿಮ ಪಂದ್ಯವಾಗಿರುವುದರಿಂದ ನಮಗೆ ನಾಳೆ ಗೆಲ್ಲಲೇಬೇಕಾಗಿದೆ,' ಎಂದು ಕೋಸ್ಟಾ ಹೇಳಿದ್ದಾರೆ.

ಆಸ್ಟ್ರೇಲಿಯಾ vs ಭಾರತ: ದಾಖಲೆ ನಿರ್ಮಿಸಲು ರೋಹಿತ್ ಶರ್ಮಾ ಸಜ್ಜು!ಆಸ್ಟ್ರೇಲಿಯಾ vs ಭಾರತ: ದಾಖಲೆ ನಿರ್ಮಿಸಲು ರೋಹಿತ್ ಶರ್ಮಾ ಸಜ್ಜು!

ಪುಣೆ ತಂಡ ಸೇಡು ತೀರಿಸಿಕೊಳ್ಳುವ ಗುರಿ ಹೊಂದಿದೆ. ಏಕೆಂದರೆ ಹಿಂದಿನ ಪಂದ್ಯದಲ್ಲಿ ಪುಣೆ ತಂಡ ಮುಂಬೈ ವಿರುದ್ಧ 0-2 ಗೋಲುಗಳಿಂದ ಸೋತಿತ್ತು. ಫಿಲ್ ಬ್ರೌನ್ ಪಡೆ ಸೆಮಿಫೈನಲ್ ಹೋರಾಟದಿಂದ ಹೊರತಳ್ಳಪಟ್ಟಿದೆ, ಆದರೆ ಶನಿವಾರ ಪುಣೆ ಗೆದ್ದು, ಎಟಿಕೆ ತಂಡ ಸೋಲನುಭವಿಸಿದರೆ, ಬ್ರೌನ್ ಪಡೆ ಆರನೇ ಸ್ಥಾನದಲ್ಲಿ ನಿಲ್ಲಲಿದೆ. ಬ್ರೌನ್ ಆಗಮನದ ನಂತರ ಪುಣೆ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದೆ.

'ಮುಂಬೈಯ ಶಕ್ತಿ ನಮಗೆ ಗೊತ್ತಿದೆ. ಮುಂಭಾಗದಲ್ಲಿರುವ ಆಟಗಾರ ಮೊಡೌ ಸೌಗೌ ಹಲವಾರು ಗೋಲುಗಳನ್ನು ಗಳಿಸಿದ್ದಾರೆ. ಅದೇ ರೀತಿ ಡಿಫೆನ್ಸ್‌ನಲ್ಲೂ ಉತ್ತಮವಾಗಿ ಆಡಬಲ್ಲ. ಆದರೆ ತಂಡದ ಶಕ್ತಿ ಬಲಭಾಗದಲ್ಲಿದೆ. ಅಮಾನತುಗೊಂಡಿರುವ ಆಟಗಾರ ಸೌವಿಕ್ ಗೈರಾಗಲಿದ್ದಾರೆ. ಆದ್ದರಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಲು ನಮಗೆ ಅವಕಾಶವಿದೆ. ಅವರು ಯಾವುದೇ ರೀತಿಯ ಅಸ್ತ್ರ ಎಸೆದರೂ ನಾವು ಅದಕ್ಕೆ ಸಜ್ಜಾಗಿರಬೇಕು,' ಎಂದು ಬ್ರೌನ್ ಹೇಳಿದ್ದಾರೆ.

Story first published: Friday, March 1, 2019, 20:41 [IST]
Other articles published on Mar 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X