ನಾಪೋಲಿ ಸ್ಟೇಡಿಯಂಗೆ ದಂತಕತೆ ಡಿಯಾಗೋ ಮರಡೋನಾ ಹೆಸರು

ನೇಪಲ್ಸ್: ಇಟಲಿಯ ನೇಪಲ್ಸ್‌ನಲ್ಲಿರುವ ಸ್ಯಾನ್ ಪಾವೊಲೊ ಸ್ಟೇಡಿಯಂನ ಹೆಸರು ಬದಲಾಗಲಿದೆ. ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಹೆಸರಿಗೆ ಸ್ಟೇಡಿಯಂ ಹೆಸರು ಬದಲಾಯಿಸಲು ನೇಪಲ್ಸ್‌ನ ಮೇಯರ್ ಗುರುವಾರ (ನವೆಂಬರ್ 26) ಔಪಚಾರಿಕ ಪ್ರಕ್ರಿಯೆಗಳಲ್ಲಿ ತೊಡಗಿದ್ದಾರೆ.

ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾಗೆ ದಿನಪತ್ರಿಕೆಗಳಲ್ಲಿ ಗೌರವ

ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಗುರುತಿಸಿಕೊಂಡಿದ್ದ ಡಿಯಾಗೋ ಮರಡೋನಾ ಅವರು ಮಂಗಳವಾರ (ನವೆಂಬರ್ 25) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸ್ಟಾರ್ ಫುಟ್ಬಾಲಿಗನ ಅಗಲಿಕೆಗೆ ಜಗತ್ತಿನಾದ್ಯಂತ ಕ್ರೀಡಾಭಿಮಾನಿಗಳು ಸಂತಾಪ ಸೂಚಿಸಿದ್ದರು.

ನಾಪೋಲಿ ಫುಟ್ಬಾಲ್‌ ಕ್ಲಬ್ ಪರ ಆಡುತ್ತಿದ್ದ ಮರಡೋನಾ ಅನೇಕ ಸಾರಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಹೀಗಾಗಿ ಅಗಲಿದ ತಾರೆಗೆ ಗೌರವಾರ್ಥವಾಗಿ ಸ್ಟೇಡಿಯಂಗೆ ಅವರ ಹೆಸರನ್ನಿಡಲು ನೇಪಲ್ಸ್ ಮೇಯರ್ ನಿರ್ಧರಿಸಿದ್ದಾರೆ. ಮರಡೋನಾ ಅವರು ಬೋಕಾ ಜೂನಿಯರ್ಸ್ ಕ್ಲಬ್ ಪರ 1, ಬಾರ್ಸಿಲೋನಾ ಪರ 3, ನಾಪೋಲಿ ಪರ 5 ಹೀಗೆ ಒಟ್ಟು 9 ಬಾರಿ ಕ್ಲಬ್‌ಗಾಗಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?

'ನೇಪಲ್ಸ್ ಸ್ಟೇಡಿಯಂ ಅನ್ನು ಮರಡೋನಾ ಸ್ಟೇಡಿಯಂ ಎಂದು ಬದಲಾಯಿಸಲಿದ್ದೇವೆ. ಬೆಳಗ್ಗಿನಿಂದಲೇ ಆ ಬಗೆಗಿನ ಪ್ರಕ್ರಿಯೆ ಆರಂಭವಾಗಿದೆ. ಔಪಚಾರಿಕ ಪ್ರಕ್ರಿಯೆಗಳು ನಡೆಯಲಿವೆ,' ಎಂದು ನೇಪಲ್ಸ್ ಮೇಯರ್ ಲುಯಿಗಿ ಡಿ ಮ್ಯಾಜಿಸ್ಟ್ರಿಸ್ ಹೇಳಿದ್ದಾರೆ. 1986ರಲ್ಲಿ ಮರಡೋನಾ ನಾಯಕತ್ವದ ಅರ್ಜೆಂಟೀನಾ ತಂಡ ವಿಶ್ವಕಪ್ ಗೆದ್ದಿತ್ತು.

For Quick Alerts
ALLOW NOTIFICATIONS
For Daily Alerts
Story first published: Thursday, November 26, 2020, 21:40 [IST]
Other articles published on Nov 26, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X