ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾಗೆ ದಿನಪತ್ರಿಕೆಗಳಲ್ಲಿ ಗೌರವ

Newspaper front pages pay tribute to a legend Diego Maradona

ಲಂಡನ್: ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಸಾವು ವಿಶ್ವದಾದ್ಯಂತ ದಿನಪತ್ರಿಗಳಲ್ಲಿ ಮುಖಪುಟ ಸುದ್ದಿಯಾಗಿದೆ. ವಿಶ್ವದ ಬಹುತೇಕ ದಿನಪತ್ರಿಕೆಗಳು ಫುಟ್ಬಾಲ್‌ ದಿಗ್ಗಜನಿಗೆ ಮುಖಪುಟದಲ್ಲಿ ಗೌರವ ಸಲ್ಲಿಸಿವೆ. ವಿಶ್ವದಗಲದ ಫುಟ್ಬಾಲ್ ಅಭಿಮಾನಿಗಳು ಶ್ರೇಷ್ಠ ಆಟಗಾರನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಡಿಯಾಗೋ ಮರಡೋನಾ ರೋಮಾಂಚಕಾರಿ ಗೋಲ್: ವಿಡಿಯೋಡಿಯಾಗೋ ಮರಡೋನಾ ರೋಮಾಂಚಕಾರಿ ಗೋಲ್: ವಿಡಿಯೋ

60 ವರ್ಷ ವಯಸ್ಸಾಗಿದ್ದ ಡಿಯಾಗೋ ಮರಡೋನಾ ನವೆಂಬರ್ 26ರ ಬುಧವಾರ ಬ್ಯೂನಸ್ ಏರ್ಸ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೆದುಳಿನ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮರಡೋನಾಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿತ್ತು. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಕೂಡ ಆಗಿದ್ದರು.

ಮರಡೋನಾ ಕೊನೆಯುಸಿರೆಳೆದಿರುವ ವಿಚಾರವನ್ನು ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಶನ್ ಘೋಷಿಸಿದ ಬಳಿಕ ನಾಪೋಲಿ ಫುಟ್ಬಾಲ್‌ ಕ್ಲಬ್‌ನ ದಿಗ್ಗಜನಿಗೆ ವಿಶ್ವದಾದ್ಯಂತ ಸಂತಾಪ ವ್ಯಕ್ತವಾಗಿತ್ತು. ಭಾರತವೂ ಸೇರಿ ಜಗತ್ತಿನ ಬಹುತೇಕ ದಿನಪತ್ರಿಕೆಗಳು ಮೊದಲ ಮತ್ತು ಕೊನೆಯ ಪುಟಗಳಲ್ಲಿ ಫುಟ್ಬಾಲ್ ತಾರೆಗೆ ಗೌರವ ಸಲ್ಲಿಸಿವೆ.

ಫುಟ್ಬಾಲ್‌ಲೋಕದ ಧ್ರುವತಾರೆ ಮರಡೋನಾ ಮತ್ತು ಏಳುಬೀಳಿನ ಹಾದಿಫುಟ್ಬಾಲ್‌ಲೋಕದ ಧ್ರುವತಾರೆ ಮರಡೋನಾ ಮತ್ತು ಏಳುಬೀಳಿನ ಹಾದಿ

1986ರಲ್ಲಿ ಮರಡೋನಾ ನಾಯಕತ್ವದ ಅರ್ಜೆಂಟೀನಾ ತಂಡ ವಿಶ್ವಕಪ್ ಗೆದ್ದಿತ್ತು. 1986ರಲ್ಲಿ ಗೋಲ್ಡನ್ ಬಾಲ್ ವಿನ್ನರ್ ಆಗಿರುವ ಡಿಯಾಗೋ ಒಟ್ಟು ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಬೋಕಾ ಜೂನಿಯರ್ಸ್ ಪರ 1, ಬಾರ್ಸಿಲೋನಾ ಪರ 3, ನೆಪೋಲಿ ಪರ 5 ಹೀಗೆ ಒಟ್ಟು 9 ಬಾರಿ ಕ್ಲಬ್‌ಗಾಗಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ.

Story first published: Thursday, November 26, 2020, 17:13 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X