ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೈಜೀರಿಯಾ ಆಟಗಾರ ಮೋಸಸ್ ನಿವೃತ್ತಿ

Nigerias Victor Moses Announces International Retirement

ಅಬುಜಾ, ಆಗಸ್ಟ್ 16: ನೈಜೀರಿಯಾದ ವಿಕ್ಟರ್ ಮೋಸಸ್ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ. ಕೇವಲ 27ರ ಹರೆಯದ ವಿಕ್ಟರ್, ಕ್ಲಬ್ ಆಟದ ಕಡೆಗೆ ಗಮನ ಹರಿಸುವ ಸಲುವಾಗಿ ತಾನು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.

ಹೋಗಿ ಬನ್ನಿ ಕ್ಯಾಪ್ಟನ್, ನಿಮಗಿದೋ ವಿದಾಯ: ವಾಡೇಕರ್‌ಗೆ ಟ್ವಿಟ್ಟರ್ ನಮನಹೋಗಿ ಬನ್ನಿ ಕ್ಯಾಪ್ಟನ್, ನಿಮಗಿದೋ ವಿದಾಯ: ವಾಡೇಕರ್‌ಗೆ ಟ್ವಿಟ್ಟರ್ ನಮನ

ಇಂಗ್ಲೆಂಡ್ ನ ಲಂಡನ್ ನಲ್ಲಿರುವ ಚೆಲ್ಸಿಯಾ ಫುಟ್ಬಾಲ್ ಕ್ಲಬ್ ನ ಪ್ರಮುಖ ಆಟಗಾರರಾಗಿರುವ ಮೋಸಸ್, ನೈಜೀರಿಯಾ ಪರ 37 ಪಂದ್ಯಗಳನ್ನಾಡಿದ್ದಾರೆ. ಕಳೆದ ತಿಂಗಳು ಮುಕ್ತಾಯಗೊಂಡ ರಷ್ಯಾ ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ನೈಜೀರಿಯಾ ಪರ ಹೆಚ್ಚು ಕೊಸರಾಡಿದ್ದವರು ಇವರೇ. ಆದರೆ ಗ್ರೂಪ್ ಹಂತದ ಸ್ಪರ್ಧೆಯಲ್ಲಿ ನೈಜೀರಿಯಾ ಹೊರಬಿದ್ದಿತ್ತು.

'ಸೂಪರ್ ಈಗಲ್ಸ್ (ನೈಜೀರಿಯಾ ರಾಷ್ಟ್ರೀಯ ಫುಟ್ಬಾಲ್ ತಂಡ) ಟಿ-ಶರ್ಟ್ ಧರಿಸಿದ ಅನುಭವ ನನ್ನೊಂದಿಗಿದೆ. ನಾನದನ್ನು ಬದುಕಿನುದ್ದಕ್ಕೂ ಸ್ಮರಿಸಿಕೊಳ್ಳುತ್ತಿರುತ್ತೇನೆ' ಎಂದು ನಿವೃತ್ತಿ ಘೋಷಿಸಿದ ಸಂದರ್ಭ ವಿಕ್ಟರ್ ಹೇಳಿದರು.

'ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಹೇಳಲು ಇದು ಸಕಾಲ ಎಂದು ನಾನು ಭಾವಿಸುತ್ತೇನೆ. ನಾನಿನ್ನು ನನ್ನ ಕ್ಲಬ್ ಮತ್ತು ಯುವ ಕುಟುಂಬದತ್ತ ಸಂಪೂರ್ಣ ಗಮನ ಹರಿಸಲು ಬಯಸಿದ್ದೇನೆ. ಇದರೊಂದಿಗೆ ಮುಂದಿನ ಪೀಳಿಗೆಗೆ ಅವಕಾಶದ ನೆಲೆಯಲ್ಲೂ ನಾನು ಹಿಂಸರಿಯುತ್ತಿದ್ದೇನೆ' ಎಂದು ಮೋಸಸ್ ತಿಳಿಸಿದರು.

ಮೋಸಸ್ ಅವರು 2013ರಲ್ಲಿ ಆಫ್ರಿಕನ್ ಕಪ್ ಆಫ್ ನೇಷನ್ಸ್ ಪ್ರಶಸ್ತಿ ಜಯಿಸಿದ್ದರು. 2014ರಲ್ಲಿ ಫೀಫಾ ವಿಶ್ವಕಪ್ ನಲ್ಲಿ ನೈಜೀರಿಯಾ ತಂಡ ಅಂತಿಮ 16 ಸುತ್ತಿಗೆ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2016-17ರಲ್ಲಿ ವಿಕ್ಟರ್ ಅವರ ಚೆಲ್ಸಿಯಾ ತಂಡ ಇಂಗ್ಲೆಂಡ್ ನ ಪ್ರತಿಷ್ಠಿತ ಪ್ರೀಮಿಯರ್ ಲೀಗ್ ಪ್ರಶಸ್ತಿ ಜಯಿಸಿತ್ತು.

Story first published: Thursday, August 16, 2018, 14:32 [IST]
Other articles published on Aug 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X