ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೇರಳ ಬ್ಲಾಸ್ಟರ್ಸ್ ವಿರುದ್ಧ ಕಠಿಣ ಸವಾಲಿನ ನಿರೀಕ್ಷೆಯಲ್ಲಿ ನಾರ್ಥ್ ಈಸ್ಟ್ ಯುನೈಟೆಡ್

By Isl Media
North East expecting tough Kerala challenge after dream start

ಗೆರಾರ್ಡ್ ನಸ್ ಪಡೆ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ಗೆ ಸೋಲಿನ ಶಾಕ್ ನೀಡಿತ್ತು. ಮೊದಲ ಪಂದ್ಯದಲ್ಲಿ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿತ್ತು. ಎಟಿಕೆ ಮೊಹನ್ ಬಾಗನ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಕೇರಳ ತಂಡ ಉತ್ತಮ ರೀತಿಯ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಆ ತಂಡದ ವಿರುದ್ಧ ನಸ್ ಅದೇ ರೀತಿಯ ಡಿಫೆನ್ಸ್ ವಿಭಾಗವನ್ನು ಮುಂದುವರಿಸಲಿದ್ದಾರೆ.

ಕೇರಳ ಬ್ಲಾಸ್ಟರ್ಸ್ ವಿರುದ್ಧದ ಹಿಂದಿನ ನಾಲ್ಕು ಪಂದ್ಯಗಳಲ್ಲಿ ನಾರ್ಥ್ ಈಸ್ಟ್ ಸೋಲು ಕಂಡಿರಲಿಲ್ಲ ಎಂಬುದು ಗಮನಾರ್ಹ. ಆದರೂ ನಸ್, ಕೇರಳ ವಿರುದ್ಧ ಕಠಿಣ ಸವಾಲಿನ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ. " ಕೇರಳ ಬ್ಲಾಸ್ಟರ್ಸ್ ಪಡೆ ಐಎಸ್ಎಲ್ ನಲ್ಲೇ ಉತ್ತಮವಾದುದು. ಅವರ ವಿರುದ್ಧ ಆಡುವುದು ಕಠಿಣ ಸವಾಲು. ಅವರು ಆಟಗಾರರನ್ನು ಕಟ್ಟುವುದು, ಸಂಘಟಿಸುವುದು ಮತ್ತು ಸೆಟ್-ಪೀಸ್ ನಲ್ಲಿ ನಿಸ್ಸೀಮರು. ವಿಭಿನ್ನ ರೀತಿಯಲ್ಲಿ ಅವರು ಅವಕಾಶಗಳನ್ನು ನಿರ್ಮಿಸಬಲ್ಲರು. ಆದ್ದರಿಂದ ನಾಳೆಯ ಪಂದ್ಯ ಕಠಿಣವೆನಿಸಲಿದೆ,'' " ಅವರು ಸೋಲಲು ಅರ್ಹವಾದ ತಂಡವಲ್ಲ, ಅವರು ಮತ್ತೆ ಉತ್ತಮವಾದ ಆಟ ಪ್ರದರ್ಶಿಸಲಿದ್ದಾರೆ,'' ಎಂದರು.

ಐಎಸ್‌ಎಲ್: ಮಿಂಚಿದ ಥಾಪಾ, ಚೆನ್ನೈಯಿನ್ ತಂಡದ ಜಯದ ಆರಂಭಐಎಸ್‌ಎಲ್: ಮಿಂಚಿದ ಥಾಪಾ, ಚೆನ್ನೈಯಿನ್ ತಂಡದ ಜಯದ ಆರಂಭ

ಕೇರಳ ಕೋಚ್ ಕಿಬು ವಿಕುನ ತಮ್ಮ ಎದುರಾಳಿ ಎಷ್ಟು ಬಲಿಷ್ಠರು ಎಂಬುದನ್ನು ಬಲ್ಲರು. ,"ಅಚರು ಮುಂಬೈ ಸಿಟಿ ವಿರುದ್ಧ ಉತ್ತಮವಾಗಿಯೇ ಆಡಿದರು. ಅವರದ್ದು ಉತ್ತಮ ತಂಡ, ಖಚಿತವಾಗಿಯೂ ಅವರದ್ದು ಉತ್ತಮ ತಂಡವಾಗಿ ರೂಪುಗೊಳ್ಳಲಿದೆ, ನಮಗೆ ಉತ್ತಮ ರೀತಿಯಲ್ಲಿ ಕಠಿಣ ಸವಾಲನ್ನು ನೀಡಬಲ್ಲರು," ಎಂದರು.

ಕಳೆದ ವರ್ಷ ಕೇರಳ ಹಾಗೂ ನಾರ್ಥ್ ಈಸ್ಟ್ ತಂಡಗಳು ಕಳೆದ ವರ್ಷದ ಲೀಗ್ ನಲ್ಲಿ ಡಿಫೆನ್ಸ್ ವಿಭಾಗದಲ್ಲಿ ದುರ್ಬಲಗೊಂಡಿದ್ದವು. ಕೇವಲ ತಲಾ ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದ್ದವು. ಆದರೆ ಈ ಬಾರಿ ಆ ಸಮಸ್ಯೆಯನ್ನು ದಾಟಿ ಬಂದಿವೆ ಎನಿಸುತ್ತಿದೆ, ಕೇರಳ ಮಾತ್ರ ಸ್ವಲ್ಪಮಟ್ಟಿನಲ್ಲಿ ಆ ಸಮಸ್ಯೆಯಲ್ಲೇ ಮುಂದುವರಿದಿದೆ. ಎಟಿಕೆಎಂಬಿ ವಿರುದ್ಧದ ಪಂದ್ಯದಲ್ಲಿ ದಾಖಲಾದ ಗೋಲು ಕೇರಳ ತಂಡದ ಡಿಫೆನ್ಸ್ ವಿಭಾಗದ ವೈಫಲ್ಯವೇ ಆಗಿದೆ.

ಆದರೆ ವಿಕುನಾ ಅವರ ಪ್ರಕಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸುಧಾರಣೆ ಮಾಡಲಾಗಿದೆ. ಕೇರಳ ತಂಡ ಈ ವಿಭಾಗದ ಸುಧಾರಣೆಗಾಗಿ ಕೆಲಸ ಮಾಡುತ್ತಿದೆ. "ನಾವು ಈಗ ಸುಧಾರಣೆಯಲ್ಲಿ ಕಾರ್ಯಗತವಾಗಿದ್ದೇವೆ, ಕೆಲ ಸಮಯದಲ್ಲೇ ನಾವು ಸುಧಾರಣೆ ಕಂಡುಕೊಳ್ಳಲಿದ್ದೇವೆ, ಉತ್ತಮ ಆಟವನ್ನು ಆಡಲಿದ್ದೇವೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೊಸ ಆಟಗಾರರಿದ್ದಾರೆ. ಅದರಲ್ಲಿ ಭಾರತ ಮತ್ತು ವಿದೇಶಿ ಆಟಗಾರರು ಸೇರಿದ್ದಾರೆ. ಆದ್ದರಿಂದ ನಮ್ಮದು ಫುಟ್ಬಾಲ್ ತಂಡವೆಂಬುದನ್ನು ನಾವು ಸಾಬೀತು ಮಾಡಬೇಕಾಗಿದೆ,'' ಎಂದರು.

Story first published: Wednesday, November 25, 2020, 19:01 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X