ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚೆನ್ನೈ, ಜೆಮ್ಷೆಡ್ಪುರ ಹೋರಾಟದಲ್ಲಿ ಪ್ಲೇ ಆಫ್ ತಲುಪಿದ ನಾರ್ತ್ ಈಸ್ಟ್

NorthEast qualify after JFC draw a blank in Chennai

ಚೆನ್ನೈ, ಫೆಬ್ರವರಿ 24: ಇಬ್ಬರ ಜಗಳ ಮೂರನೆಯವರಿಗೆ ಲಾಭ. ಜೆಮ್ಷೆಡ್ಪುರ ಹಾಗೂ ಚೆನ್ನೈಯಿನ್ ಎಫ್ ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ ನ 84ನೇ ಪಂದ್ಯ ಗೋಲಿಲ್ಲದೆ ಡ್ರಾದಲ್ಲಿ ಕೊನೆಗೊಂಡಿದೆ. ಈ ಫಲಿತಾಂಶ ಚೆನ್ನೈ ತಂಡಕ್ಕೆ ಯಾವುದೇ ರೀತಿಯ ಪರಿಣಾಮ ಉಂಟುಮಾಡದು. ಆದರೆ ಜೆಮ್ಷೆಡ್ಪುರ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿತು. ಆ ಕಡೆ ನಾರ್ತ್ ಈಸ್ಟ್ ಯುನೈಟೆಡ್ ಪ್ಲೇ ಆಫ್ ಹಂತ ತಲುಪಿತು.

ಗೋಲಿಲ್ಲದ ಪ್ರಥಮಾರ್ಧ : ಮೊದಲ 45 ನಿಮಿಷಗಳ ಆಟ ಹೆಚ್ಚು ರಕ್ಷಣಾತ್ಮಕವಾಗಿತ್ತು. ಚೆನ್ನೈ ಇಲ್ಲಿಯೂ ಗೋಲು ಗಳಿಸುವಲ್ಲಿ ವಿಲವಾಯಿತು. ಅದೇ ರೀತಿ ಎದುರಾಳಿ ತಂಡಕ್ಕೂ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಕೇವಲ ಆರು ಬಾರಿ ಗೋಲ್ ಬಾಕ್ಸ್‌ಗೆ ಇತ್ತಂಡಗಳು ಗುರಿ ಇಟ್ಟಿದ್ದವು. ಅದರಲ್ಲಿ ನಾಲ್ಕು ಬಾರಿ ಮಾತ್ರ ನೇರವಾಗಿತ್ತು. ಅದನ್ನೂ ಎರಡೂ ತಂಡಗಳ ಗೋಲ್‌ಕೀಪರ್‌ಗಳು ಯಶಸ್ವಿಯಾಗಿ ತಡೆದರು. ಮುಂದಿನ 45 ನಿಮಿಷಗಳಲ್ಲಿ ಜೆಮ್ಷೆಡ್ಪುರಕ್ಕೆ ಗೋಲು ಗಳಿಸಲಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಮತ್ತೆ ಉಳಿಯುವುದು ಒಂದು ಪಂದ್ಯ ಮಾತ್ರ.

ಇಂಡಿಯನ್ ಸೂಪರ್ ಲೀಗ್‌ನ 84ನೇ ಪಂದ್ಯದಲ್ಲಿ ಜೆಮ್ಷೆಡ್ಪುರ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳ ನಡುವೆ ನಡೆಯಿತು. ಚೆನ್ನೈಗೆ ಗೌರವ ಕಾಯ್ದುಕೊಳ್ಳಬೇಕು. ಜೆಮ್ಷೆಡ್ಪುರಕ್ಕೆ ಜಯ ಕಾಣುವ ಅಗತ್ಯ. ಹಾಲಿ ಚಾಂಪಿಯನ್ ಚೆನ್ನೈಗೆ ಈಗ ಸಾಧಿಸಬೇಕಾಗಿರುವುದು ಏನೂ ಇಲ್ಲ ಅನಿಸುತ್ತೆ., ಏಕೆಂದರೆ ಸಾಧಿಸಬೇಕಾದ ಸಮಯದಲ್ಲಿ ಸಾಧನೆ ಮಾಡಿಲ್ಲ. ಹೀಗಾಗಿ ಕೊನೆಯ ಸ್ಥಾನವನ್ನು ಕಾಯ್ದುಕೊಂಡಿದೆ. ಚೆನ್ನೈ ದುರ್ಬಲ ತಂಡವಾಗಿ ರೂಪುಗೊಂಡಿತು ಎಂಬುದಕ್ಕೆ 31 ಗೋಲುಗಳನ್ನು ನೀಡಿರವುದೇ ಸಾಕ್ಷಿ. ಬೆಂಗಳೂರು ವಿರುದ್ಧ ಜಯ ಗಳಿಸಿರುವುದೇ ಚೆನ್ನೈ ತಂಡ ಈ ವರ್ಷ ಮಾಡಿದ ಅದ್ಭುತ ಹಾಗೂ ಅಚ್ಚರಿಯ ಸಾಧನೆ ಎನ್ನಬಹುದು.

ಆದರೆ ಅದು ಕೂಡ ತಂಡವನ್ನು ಕೊನೆಯ ಸ್ಥಾನದಿಂದ ಮೇಲಕ್ಕೆತ್ತಲಿಲ್ಲ. ಅದೇ ರೀತಿ ಆ ಜಯ ತಂಡದ ಆಟಗಾರರ ಮನೋಬಲವನ್ನೂ ಹೆಚ್ಚಿಸಲಿಲ್ಲ ಎಂಬುದಕ್ಕೆ ಕೇರಳ ವಿರುದ್ಧ ನಡೆದ ಪಂದ್ಯದಲ್ಲಿ ಅನುಭವಿಸಿದ ಸೋಲು. ಟಾಟಾ ಪಡೆಗೆ ಈಗಲೂ ಅಂತಿಮ ನಾಲ್ಕರ ಹಂತ ತಲಪುವ ಅವಕಾಶವಿದೆ. ಆದರೆ ಉಳಿದಿರುವ ಪಂದ್ಯಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕಾಗಿದೆ. ಜತೆಯಲ್ಲಿ ಕೇರಳ ತಂಡ ನಾರ್ತ್ ಈಸ್ಟ್ ವಿರುದ್ಧ ಜಯ ಗಳಿಸಬೇಕು. ಜೆಮ್ಷೆಡ್ಪುರ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರಿದೆ, ಆದರೆ ಗೆದ್ದ ಪಂದ್ಯಗಳಿಗಿಂತ ಡ್ರಾ ಗಳಿಸಿದ್ದೇ ಹೆಚ್ಚು.

ಇದರಿಂದಾಗಿ ತಂಡ ಪ್ಲೇ ಆಫ್ ಸ್ಥಾನಕ್ಕಾಗಿ ಹರಸಾಹಸ ಪಡುತ್ತಿದೆ. ಉಳಿದ ಪಂದ್ಯಗಳಲ್ಲಿ ಗೆದ್ದರೂ ಇತರ ತಂಡಗಳ ಫಲಿತಾಂಶವನ್ನು ಆಧರಿಸಬೇಕಾಯಿತು. ಹೆಚ್ಚಿನ ಪಂದ್ಯಗಳು ಜಯದಲ್ಲಿ ಅಂತ್ಯಗೊಳ್ಳದ ಕಾರಣ ಇಂಥ ಉತ್ತಮ ಸ್ಥಿತಿಯಲ್ಲೂ ಆತಂಕದ ಹೆಜ್ಜೆ ಇಡಬೇಕಾಯಿತು. ಪುಣೆ ವಿರುದ್ಧ ಹಿಂದಿನ ಪಂದ್ಯದಲ್ಲಿ ಸೋತಿರುವುದು ಜೆಮ್ಷೆಡ್ಪುರದ ದಿಟ್ಟ ನಡೆಗೆ ಅಡ್ಡಿಯಾಯಿತು. ಹಿಂದಿನ ಲೆಕ್ಕಾಚಾರಗಳನ್ನು ಬದಿಗಿಟ್ಟು ಉಳಿದಿರುವ ಪಂದ್ಯದಲ್ಲಿ ಜಯದ ಹೆಜ್ಜೆ ಇಟ್ಟರೆ ಟಾಟಾ ಪಡೆಯನ್ನು ಅಂತಿಮ ನಾಲ್ಕರ ಸ್ಥಾನದಲ್ಲಿ ಕಾಣಬಹುದು.

Story first published: Sunday, February 24, 2019, 9:52 [IST]
Other articles published on Feb 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X