ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕ ಹಂಚಿಕೊಂಡ ನಾರ್ಥ್ ಈಸ್ಟ್ ಹಾಗೂ ಚೆನ್ನೈಯಿನ್

By Isl Media
NorthEast remain unbeaten after tame draw against Chennaiyin

ಗೋವಾ, ಡಿಸೆಂಬರ್ 13: ಹೀರೋ ಇಂಡಿಯನ್ ಸೂಪರ್ ಲೀಗ್ ನ 26ನೇ ಪಂದ್ಯ ಗೋಲಿಲ್ಲದೆ ಡ್ರಾಗೊಂಡಿದೆ. ಚೆನ್ನೈಯಿನ್ ಎಫ್ ಸಿ ಹಾಗೂ ನಾರ್ಥ್ ಈಸ್ಟ್ ಯುನೈಟೆಡ್ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿ ಅಂಕ ಹಂಚಿಕೊಂಡವು. ಒಂದು ಅಂಕದ ಸೇರ್ಪಡೆಯೊಂದಿಗೆ ನಾರ್ಥ್ ಈಸ್ಟ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯಿತು. ಆದರೆ ಚೆನ್ನೈಗೆ ಈ ರೀತಿಯ ಫಲಿತಾಂಶ ತೃಪ್ತಿ ತುರುವಂಥದ್ದಲ್ಲ. 66ನೇ ನಿಮಿಷದಲ್ಲಿ ಇಡ್ರಿಸಾ ಸಿಲ್ಲಾಗೆ ಸುಲಭವಾಗಿ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಕ್ಷಿಪ್ರ ಗತಿಯಲ್ಲಿ ತೀರ್ಮಾನ ಕೈಗೊಂಡ ಕಾರಣ ಚೆಂಡು ಗೋಲ್ ಬಾಕ್ಸ್ ನಿಂದ ಹೊರ ಸಾಗಿತು.

ಗೋಲಿಲ್ಲದ ಪ್ರಥಮಾರ್ಧ: ಚೆಂಡಿನ ಮೇಲೆ ಹೆಚ್ಚು ಕಾಲ ತನ್ನ ನಿಯಂತ್ರಣವನ್ನು ಸಾಧಿಸಿ ಮೂರು ಬಾರಿ ಟಾರ್ಗೆಟ್ ಗೆ ಗುರಿ ಇಟ್ಟರೂ ಚೆನ್ನೈಯಿನ್ ತಂಡಕ್ಕೆ ಆತ್ಮವಿಶ್ವಾಸದ ಅಲೆಯಲ್ಲಿದ್ದ ನಾರ್ಥ್ ಈಸ್ಟ್ ಯುನೈಟೆಎಡ್ ವಿರುದ್ಧ ಗೋಲು ಗಳಿಸಲಾಗಲಿಲ್ಲ. ಚೆಂಡಿನ ಮೇಲೆ ಹೆಚ್ಚು ಕಾಲ ನಿಯಂತ್ರಣ ಸಾಧಿಸುವಲ್ಲಿ ವಿಫಲವಾದ ನಾರ್ಥ್ ಈಸ್ಟ್ ಕೂಡ ಎರಡು ಬಾರಿ ಟಾರ್ಗೆಟ್ ಗೆ ಗುರಿ ಇಟ್ಟಿತ್ತು ಆದರೆ ಗೋಲು ಗಳಿಸುವಲ್ಲಿ ವಿಫಲವಾಗಿತ್ತು.

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೋಲಿನ ಮಳೆಯಲ್ಲಿ ಗೆದ್ದ ಬೆಂಗಳೂರುಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೋಲಿನ ಮಳೆಯಲ್ಲಿ ಗೆದ್ದ ಬೆಂಗಳೂರು

ಚೆನ್ನೈಯಿನ್ ತಂಡಕ್ಕೆ ಗೋಲು ಗಳಿಸಬೇಕಾದ ಒತ್ತಡವಿದೆ. ಇತ್ತಂಡಗಳಿಗೂ 45 ನಿಮಿಷಗಳ ಆಟದಲ್ಲಿ ಉತ್ತಮವಾದ ಅವಕಾಶ ಸಿಗಲಿಲ್ಲ. ಚೆನ್ನೈಯಿನ್ ತಂಡಕ್ಕೆ ನಾರ್ಥ್ ಈಸ್ಟ್ ವಿರುದ್ಧ ಗೋಲು ಗಳಿಸಲು ಕಷ್ಟವಾಗಿದೆ ಎಂದರೆ ಮಾಜಿ ಚಾಂಪಿಯನ್ನರಲ್ಲಿ ಹೊಂದಾಣಿಕೆಯ ಕೊರತೆ ಇದೆ ಎಂದರೆ ತಪ್ಪಾಗಲಾರದು. ಏಕೆಂದರೆ ಚೆನ್ನೈ ಗೋಲು ಗಳಿಕೆಯಲ್ಲಿ ಕೇವಲ ಒಬ್ಬ ಆಟಗಾರನ ಮೇಲೆ ಅವಲಂಬಿತವಾದ ತಂಡವಲ್ಲ. ಸಮಗ್ರ ಹೋರಾಟ ನೀಡುವ ತಂಡವಾಗಿದೆ.

ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್: ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಹಾಗೂ ನಾರ್ಥ್ ಈಸ್ಟ್ ತಂಡಗಳು ಮುಖಾಮುಖಿಯಾದವು. ಆಡಿರುವ ಐದು ಪಂದ್ಯಗಳಲ್ಲಿ ಎರಡು ಜಯ ಮತ್ತು ಮೂರು ಡ್ರಾ ಕಂಡಿರುವ ನಾರ್ಥ್ ಈಸ್ಟ್ ನಿಜವಾಗಿಯೂ ಚೆನ್ನೈಗಿಂತ ಬಲಿಷ್ಠವಾಗಿದೆ. ಗೆರಾರ್ಡ್ ನಸ್ ಪಡೆ ಇದುವರೆಗೂ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿರುವುದೇ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಲು ಪ್ರಮುಖ ಕಾರಣವಾಗಿದೆ. ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ನಾರ್ಥ್ ಈಸ್ಟ್ ಮೇಲುಗೈ ಸಾಧಿಸಿದೆ. ಐದು ಪಂದ್ಯಗಳಲ್ಲಿ ಒಟ್ಟು 8 ಗೋಲುಗಳನ್ನು ಗಳಿಸಿರುವ ನಾರ್ಥ್ ಈಸ್ಟ್ ಅತಿ ಹೆಚ್ಚು ಗೋಲು ಗಳಿಕೆಯಲ್ಲಿ ಮುಂಬೈ ಜತೆಯಲ್ಲಿ ಸಮಬಲ ಸಾಧಿಸಿದೆ.

ಒಡಿಶಾಕ್ಕೆ ಮತ್ತೆ ಸೋಲಿನ ಆಘಾತ, ಗೋವಾಕ್ಕೆ ಸತತ ಎರಡನೇ ಜಯಒಡಿಶಾಕ್ಕೆ ಮತ್ತೆ ಸೋಲಿನ ಆಘಾತ, ಗೋವಾಕ್ಕೆ ಸತತ ಎರಡನೇ ಜಯ

ಇಡ್ರಿಸಾ ಸಿಲ್ಲಾ, ಕ್ಬೆಸಿ ಅಪ್ಪಿಯ್ಯ ಮತ್ತು ಲೂಯಿಸ್ ಮಚಾಡೊ ತಂಡಕ್ಕಾಗಿ ತಲಾ ಎರಡು ಗೋಲು ಗಳಿಸಿದ್ದಾರೆ. ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಚೆನ್ನೈಯಿನ್ ಗಾಯದ ಕಾರಣ ಅನಿರುದ್ಧ್ ಥಾಪಾ ತಂಡದಲ್ಲಿ ಅನುಪಸ್ಥಿತಿ ತಂಡದ ಬಲವನ್ನು ಕುಗ್ಗಿಸುವಂತೆ ಮಾಡಿದೆ. ಈ ಪಂದ್ಯದಲ್ಲಿ ಅನಿರುದ್ಧ್ ಥಾಪಾ ಆಡುತ್ತಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ.ಋತುವಿನ ಆರಂಭವನ್ನು ಹೊರತುಪಡಿಸಿದರೆ ಚೆನ್ನೈಯಿನ್ ಆ ನಂತರ ಜಯದ ರುಚಿ ಕಂಡಿಲ್ಲ. ನಾಲ್ಕು ಪಂದ್ಯಗಳಲ್ಲಿ ತಂಡ ಮೂರು ಗೋಲುಗಳನ್ನು ಗಳಿಸಿತ್ತು, ಈಗ ತಂಡಕ್ಕೆ ಜಯದ ಅನಿವಾರ್ಯತೆ ಇದೆ.

Story first published: Monday, December 14, 2020, 11:07 [IST]
Other articles published on Dec 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X