ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಎಸ್‌ಎಲ್: ಜಯದ ಹುಡುಕಾಟದಲ್ಲಿದ್ದ ಒಡಿಶಾಕ್ಕೆ ನಾರ್ಥ್ ಈಸ್ಟ್ ಸವಾಲು

By Isl Media
Odisha out for first win, NorthEast look to bounce back

ಗೋವಾ, ಡಿಸೆಂಬರ್,21: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು ಜಯಕ್ಕಾಗಿ ಹಾತೊರೆಯುತ್ತಿರುವ ಒಡಿಶಾ ಎಫ್ ಸಿ ಮಂಗಳವಾರ ಬಲಿಷ್ಠ ನಾರ್ಥ್ ಈಸ್ಟ್ ವಿರುದ್ಧ ಮತ್ತೊಮ್ಮೆ ಹೋರಾಟ ನಡೆಸಲಿದೆ. ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿವೆ.

ಒಡಿಶಾ ತಂಡ ಬಲಿಷ್ಠ ಬೆಂಗಳೂರು ವಿರುದ್ಧ ಸೋಲನುಭವಿಸಿದ್ದರೆ, ನಾರ್ಥ್ ಈಸ್ಟ್ ಯುನೈಟೆಡ್ ಏಕೈಕ ಗೋಲಿನಿಂದ ಜೆಮ್ಷೆಡ್ಪುರಕ್ಕೆ ಶರಣಾಗಿತ್ತು. ಈ ಮೂಲಕ ನಾರ್ಥ್ ಈಸ್ಟ್ ನ ಅಜೇಯ ಅಭಿಯಾನಕ್ಕೆ ತಡೆಬಿದ್ದಿತ್ತು. ಆದರೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಗೆರಾರ್ಡನಸ್ ಪಡೆಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇದು ಉತ್ತಮ ಅವಕಾಶ.

ಐಎಸ್‌ಎಲ್: ಉಡುಗೊರೆ ಗೋಲು ನೀಡಿದರೂ ಗೆಲ್ಲದ ಈಸ್ಟ್ ಬೆಂಗಾಲ್ಐಎಸ್‌ಎಲ್: ಉಡುಗೊರೆ ಗೋಲು ನೀಡಿದರೂ ಗೆಲ್ಲದ ಈಸ್ಟ್ ಬೆಂಗಾಲ್

7 ಪಂದ್ಯಗಳನ್ನು ಆಡಿರುವ ನಾರ್ಥ್ ಈಸ್ಟ್ 2 ಜಯ, 4 ಡ್ರಾ ಹಾಗೂ 1ಸೋಲಿನೊಂದಿಗೆ 10 ಅಂಕಗಳನ್ನು ಗಳಿಸಿದೆ. ಇಡ್ರೆಸಾ ಸಿಲ್ಲಾ, ಕ್ವಿಸಿ ಅಪ್ಪಿಯ್ಯಾ ಮತ್ತು ಲೂಯಿಸ್ ಮಚಾಡೋ ಅವರು ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 8 ಗೋಲುಗಳನ್ನು ಗಳಿಸಿರುವ ತಂಡ ಎದುರಾಳಿ ತಂಡಕ್ಕೆ 6 ಗೋಲುಗಳನ್ನು ಗಳಿಸಲು ಅವಕಾಶ ಕಲ್ಪಿಸಿದೆ.

ಒಡಿಶಾ ತಂಡದ ಸಾಧನೆಯಲ್ಲಿ ಹೇಳಿಕೊಳ್ಳುವಂಥ ವಿಶೇಷ ಕಾಣುತ್ತಿಲ್ಲ. ಆಡಿರುವ ಆರು ಪಂದ್ಯಗಳಲ್ಲಿ ತಂಡ ಗಳಿಸಿದ್ದು ಕೇವಲ ಒಂದು ಅಂಕ. ಇದುವರೆಗೂ ಲೀಗ್ ನಲ್ಲಿ ಗಳಿಸಿದ್ದು ಅತಿ ಕಡಿಮೆ ಗೋಲುಗಳು. ಒಟ್ಟು ದಾಖಲಾಗಿರುವ ಮೂರು ಗೋಲುಗಳಲ್ಲಿ ಎರಡು ಗೋಲುಗಳು ದಾಖಲಾದದ್ದು ತಂಡದಲ್ಲಿ ಕೇವಲ ಹತ್ತು ಮಂದಿ ಆಟಗಾರರಿದ್ದಾಗ. ಅದು ಕೂಡ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ, ಬೆಂಗಳೂರು ವಿರುದ್ಧ ಗಳಿಸಿರುವ ಮೂರನೇ ಗೋಲು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ಖಚಿತ. ಒಡಿಶಾ ತಂಡದ ಕೋಚ್ . ಇಂಗ್ಲೆಂಡ್ ಮೂಲದ ಸ್ಟುವರ್ಟ್ ಬಾರ್ಕ್ಸ್ಟ ತಂಡದ ಆಟಗಾರರಲ್ಲಿ ಆಕ್ರಮಣಕಾರಿ ಆಟದ ಅಗತ್ಯ ಇದೆ ಎಂದು ಹೇಳಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆ ಆಕ್ರಮಣಕಾರಿ ಗುಣ ಕಂಡುಬಂದಿತ್ತು, ಪರಿಣಾಮ ಗೋಲು ಗಳಿಸಿ ಕ್ಲೀನ್-ಶೀಟ್ ಗೆ ಅವಕಾಶ ನೀಡಲಿಲ್ಲ ಎಂದಿದ್ದಾರೆ.

ದುಬೈ ಸೈಫಾ ವಾಲಿಬಾಲ್ ಪ್ರೀಮಿಯರ್ ಲೀಗ್‌: ಕಾನ್ಸೆಪ್ಟ್ ಕ್ರಿಯೇಷನ್ ಚಾಂಪಿಯನ್ಸ್ದುಬೈ ಸೈಫಾ ವಾಲಿಬಾಲ್ ಪ್ರೀಮಿಯರ್ ಲೀಗ್‌: ಕಾನ್ಸೆಪ್ಟ್ ಕ್ರಿಯೇಷನ್ ಚಾಂಪಿಯನ್ಸ್

ಇನ್ನು ನಾರ್ತ್ ಈಸ್ಟ್ ತಂಡ ತಮ್ಮ ಹಿಂದಿನ ಎರಡು ಪಂದ್ಯಗಳಲ್ಲಿ ಗೋಲ್ ಗಳಿಸಲು ವಿಫಲರಾಗಿದ್ದೇವೆ. ನಾವು ಮಂಗಳವಾರದ ಪಂದ್ಯವನ್ನು ಅತ್ಯುತ್ತಮ ರೀತಿಯಲ್ಲಿ ಆಡಲು ಬಯಸುತ್ತೇವೆ. ನಾವು 3 ಅಂಕಗಳನ್ನು ಪಡೆಯುವುದರೊಂದಿಗೆ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದಾಗಿ ನಾರ್ತ್ ಈಸ್ಟ್ ತಂಡದ ಕೋಚ್ ನುಸ್ ಅಭಿಪ್ರಾಯಪಡುತ್ತಾರೆ.

Story first published: Tuesday, December 22, 2020, 9:53 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X