ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕಳಿಂಗ ಯುದ್ಧದಲ್ಲಿ ಜೆಮ್ಷೆಡ್ಪುರ ವಿರುದ್ಧ ಒಡಿಶಾಕ್ಕೆ ಗೆಲ್ಲುವ ಹಂಬಲ

By Isl Media
Odisha ready to reinvent against stuttering Jamshedpur in Kalinga bow

ಭುವನೇಶ್ವರ್, ಡಿಸೆಂಬರ್ 27: ಹೀರೊ ಇಂಡಿಯನ್ ಸೂಪರ್ ಲೀಗ್ ನಲ್ಲಿ ವಿಭಿನ್ನ ರೀತಿಯಲ್ಲಿ ಓಟ ಆರಂಭಿಸಿರುವ ಒಡಿಶಾ ಎಫ್ ಸಿ ಹಾಗೂ ಜೆಮ್ಷೆಡ್ಪುರ ಎಫ್ ಸಿ ತಂಡಗಳು ಈಗ ಮತ್ತೊಮ್ಮೆ ಹೊಸ ಹಾದಿ ಕಂಡುಕೊಳ್ಳನು ಮುಖಾಮುಖಿ ನಡೆಸಲಿವೆ.

ಒಡಿಶಾದ ಕ್ರೀಡಾ ಇತಿಹಾಸದಲ್ಲೇ ಇದೊಂದು ಅವಿಸ್ಮರಣೀಯ ಕ್ಷಣ, ಏಕೆಂದರೆ ಒಡಿಶಾ ಎಫ್ ಸಿ ಕೊನೆಗೂ ತನ್ನ ಮನೆಯಾದ ಕಳಿಂಗ ಕ್ರೀಡಾಂಗಣದಲ್ಲಿ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯವನ್ನು ಆಡುವ ಅವಕಾಶ ಪಡೆಯಿತು. ಇದುವರೆಗೋ ತಂಡ ಪುಣೆಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಮನೆಯಂಗಣದ ಪಂದ್ಯಗಳನ್ನು ಆಡಿತ್ತು.

1
2026472

ಮನೆಯಂಗಣದಲ್ಲಿ ಆಡುವುದರಿಂದ ತಂಡ ಹೊಸ ರೂಪ ಹಾಗೂ ಉತ್ಸಾಹ ಪಡೆಯಲಿದೆ ಎಂಬುದು ಸ್ಪೇನ್ ಮೂಲದ ಕೋಚ್ ಹಂಬಲ. ಒಡಿಶಾ ತಂಡ ಪ್ಲೇ ಆಫ್ ಹಂತ ತಲುಪಲು ಕಠಿಣ ಶ್ರಮದ ಜತೆಯಲ್ಲಿ ಜಯದ ಅಗತ್ಯ ಇರುತ್ತದೆ. 9 ಅಂಕಗಳನ್ನು ಗಳಿಸಿರುವ ಗೋವಾ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಗೊವಾ ವಿರುದ್ಧ 3-0 ಅಂತರದಲ್ಲಿ ಸೋತಿರುವುದು ತಂಡದ ಇತ್ತೀಚಿನ ವೈಫಲ್ಯವಾಗಿದೆ.

''ಹೌದು ನಮಗೆ ಪ್ಲೇ ಆಫ್ ತಲುಪುವ ಅವಕಾಶ ಇದೆ. ನಾವು ಒಂಬತ್ತು ಪಂದ್ಯಗಳನ್ನು ಆಡಿದ್ದೇವೆ. ಅದೇ ರೀತಿ ನಾವು ಮೆಯಂಗಣದ ಹೊರಗೆ ಒಂಬತ್ತು ಪಂದ್ಯಗಳನ್ನು ಆಡಿದ್ದೇವೆ. ಕೊನೆಗೂ ಮನೆಯಂಗಣದಲ್ಲಿ ಆಡಲು ಅವಕಾಶ ಸಿಕ್ಕಿರುವುದಕ್ಕೆ ಅತೀವ ಸಂಭ್ರಮ ಆಗಿದೆ. ಇಲ್ಲಿ ನಡೆಯುವ ಮೂರು ಪಂದ್ಯಗಳನ್ನು ಆಧರಿಸಿ ನಮ್ಮ ತಂಡಜ ಮುಂದಿನ ಹಂತ ತಲಪುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ಜೆಮ್ಷೆಡ್ಪುರ 13 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ನಾಳೆ ನಾವು ಅವರನ್ನು ಸೋಲಿಸಿದರೆ ಅವರಿಗಿಂತ ಒಂದು ಅಂಕ ಹಿಂದೆ ಬೀಳಲಿದ್ದೇವೆ,'' ಎಂದು ಕೋಚ್ ಜೊಸೆಫ್ ಗೋಂಬಾವ್ ಹೇಳಿದ್ದಾರೆ.

Odisha ready to reinvent against stuttering Jamshedpur in Kalinga bow

ಎದುರಾಳಿ ಜೆಮ್ಷೆಡ್ಪುರ ಕೂಡ ಜಯದ ಅಗತ್ಯದಲ್ಲಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡ ಜಯ ಕಂಡಿಲ್ಲ. 13 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಇದು ಉತ್ತಮ ಆರಂಭ ಕಂಡಿದುದರ ಪರಿಣಾಮ. ಶುಕ್ರವಾರ ಜಯ ಗಳಿಸಿದರೆ ಟಾಟಾ ಪಡೆ ಬೆಂಗಳೂರು ತಂಡಕ್ಕಿಂತ ಒಂದು ಅಂಕ ಹಿಂದೆ ಬೀಳಲಿದೆ.

ಗೋಲ್ ಮುಂಭಾಗದಲ್ಲಿ ಒಡಿಶಾ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ. ಅರಿಡಾನೆ ಸ್ಯಾಂಟನಾ ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಬೇಕು. ಹಾಗಿದ್ದಲ್ಲಿ ಮಾತ್ರ ಅಗ್ರ ನಾಲ್ಕು ಸ್ಥಾನಗಳಿಗಾಗಿ ಸ್ಪರ್ಧೆಯನ್ನು ಜೀವಂತವಾಗಿ ಇರಿಸಿಕೊಳ್ಳಬಹುದು.

ಕ್ಸಿಸ್ಕೋ ಹೆರ್ನಾಂಡೀಸ್, ಜೆರ್ರಿ ಮಾಹ್ವಿಮಿಂಗ್ತಾಂಗ ಮತ್ತು ನಂದ ಕುಮಾರ್ ಶೇಖರ್ ಉತ್ತಮವಾಗಿ ಆಡಿದರೂ ಗೋಲು ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಸ್ಥಿರ ಪ್ರದರ್ಶನ ಕೂಡಾ ನೀಡುತ್ತಿಲ್ಲ. ಡಿಫೆನ್ಸ್ ವಿಭಾಗದ ಬಗ್ಗೆ ಗೋಂಬಾವ್ ಗಂಭೀರವಾಗಿ ಯೋಚಿಸಬೇಕಾಗಿದೆ. ಎದುರಾಳಿ ತತಂಡಕ್ಕೆ 6 ಗೋಲುಗಳನ್ನು ನೀಡಿರುವ ಒಡಿಶಾ ಸಂಘಟಿತ ರೂಪದಲ್ಲಿ ಗಳಿಸಿರುವುದು ಕೇವಲ 2 ಗೋಲುಗಳು. ಇದು ಜೆಮ್ಷೆಡ್ಪುರ ತಂಡಡಕ್ಕೆ ಲಾಭವಾಗಿ ಪರಿಗಣಿಸಲಿದೆ ಆದರೆ ಟಾಟಾ ಪಡೆಗೂ ಅದರದ್ದೇ ಆದ ಸಮಸ್ಯೆ ಇದೆ. ಡಿಫೆನ್ಸ್ ವಿಭಾಗದಲ್ಲಿ ತಂಡ ಸುಧಾರಣೆ ಕಂಡುಕೊಳ್ಳಬೇಕಾಗಿದೆ. ಮೂರು ಪಂದ್ಯಗಳಲ್ಲಿ ಆರಂಭದಲ್ಲೇ ಗೋಲು ಗಳಿಸಿಯೂ ಜಯ ಕಾಣುವಲ್ಲಿ ವಿಫಲವಾಗಿರುವುದು ತಂಡದ ದಿಫೆನ್ಸ್ ವಿಭಾಗದ ವೈಫಲ್ಯವನ್ನು ಸೂಚಿಸುತ್ತದೆ. ಎದುರಾಳಿ ತಂಡಳಿಗೆ ನೀಡಿರುವ 11 ಗೋಲಿಗಳಲ್ಲಿ 7 ಗೋಲುಗಳನ್ನು ತಂಡ ದ್ವಿತಿಯಾರ್ಧದಲ್ಲಿ ನೀಡಿದೆ. ಈ ಬಗ್ಗೆ ತಿರಿ ಹಾಗೂ ಅವರ ಪಡೆ ಯೋಚಿಸಬೇಕಾಗಿದೆ.

''ನಮ್ಮ ಶೈಲಿಯಲ್ಲಿ ನಾವು ಡಿಫೆನ್ಸ್ ಅಥವಾ ಅಟ್ಯಾಕ್ ಬಗ್ಗೆ ಯೋಚಿಸುವುದಿಲ್ಲ. ಎರಡರಲ್ಲೂ ನಾವು ಸಮಾನತೆಯನ್ನು ಕಾಯ್ದುಕೊಳ್ಳಲಿದ್ದೇವೆ. ಸಂಖ್ಯೆಗಳ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಅದು ದೊಡ್ಡ ಸಮಸ್ಯಡಯಲ್ಲ. ನಾವು ಸುಧಾರಣೆ ಕಾಣುತ್ತೇವೆ. ಹೆಚ್ಚು ಕಾಲ ಚೆಂಡನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ನಮ್ಮ ಆಟದ ಶೈಲಿ. ನಮಗೆ ಉತ್ತಮವಾಗಿ ಗೋಲು ಗಳಿಸುವ ಅವಕಾಶ ಇದ್ದಿತ್ತು, ಆದರೆ ನಾವು ಡಿಫೆನ್ಸ್ ಕಡೆಗೆ ಹೆಚ್ಚಿನ ಅವಕಾಶ ನೀಡಲಿಲ್ಲ,'' ಎಂದು ಕೋಚ್ ಇರಿಯಾಂಡೋ ಹೇಳಿದ್ದಾರೆ.

Story first published: Friday, December 27, 2019, 14:11 [IST]
Other articles published on Dec 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X