ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮುಂದೊಂದು ದಿನ ಆಗಸದಲ್ಲಿ ಜೊತೆಯಾಗಿ ಫುಟ್ಬಾಲ್ ಆಡೋಣ: ಮರಡೋನಾ ಅಗಲಿಗೆ ಪೀಲೆ ಸಂತಾಪ

One day well kick a ball together in the sky above: Pele ofter Maradonas death

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಡಿಗೋ ಮರಡೋನಾ ಅಗಲಿಕೆಗೆ ಇಡೀ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ. ಫುಟ್ಬಾಲ್ ಲೋಕದ ಇನ್ನೋರ್ವ ದಿಗ್ಗಜ ಆಟಗಾರ ಬ್ರೆಜಿಲ್‌ನ ಪೀಲೆ ಮರಡೋನಾ ಅಗಲಿಕೆಗೆ ಶೋಕವನ್ನು ವ್ಯಕ್ತಪಡಿಸಿದ್ದಾರೆ. ನಾನೋರ್ವ ಶ್ರೇಷ್ಠ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದು ಪೀಲೆ ಹೇಳಿದ್ದಾರೆ.

"ಇದೆಂತಾ ಬೇಸರದ ಸುದ್ದಿ. ನಾನು ಶ್ರೇಷ್ಠ ಗೆಳೆಯನನ್ನು ಹಾಗೂ ಇಡೀ ವಿಶ್ವ ದಿಗ್ಗಜನೊಬ್ಬನನ್ನು ಕಳೆದುಕೊಂಡಿದೆ. ಇಲ್ಲಿ ಸಾಕಷ್ಟು ಹೇಳಲು ಬಾಕಿಯಿದೆ. ಆದರೆ ಈಗ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೊರೆಯಲಿ ಎಂದು ಬೇಡಿಕೊಳ್ಳುತ್ತೇನೆ. ಮುಂದೊಂದು ದಿನ ನಾವು ಖಂಡಿತಾ ಆಕಾಶಕ್ಕಿಂತ ಮೇಲೆ ಫುಟ್ಬಾಲ್ ಆಡುವ ಭರವಸೆಯಿದೆ" ಎಂದು ಪೀಲೆ ಅವರು ತಮ್ಮ ಹೇಳಿಕೆಯಲ್ಲಿ ನೋವಿನ ನುಡಿಗಳನ್ನು ಆಡಿದ್ದಾರೆ.

ಫುಟ್ಬಾಲ್‌ಲೋಕದ ಧ್ರುವತಾರೆ ಮರಡೋನಾ ಮತ್ತು ಏಳುಬೀಳಿನ ಹಾದಿಫುಟ್ಬಾಲ್‌ಲೋಕದ ಧ್ರುವತಾರೆ ಮರಡೋನಾ ಮತ್ತು ಏಳುಬೀಳಿನ ಹಾದಿ

ಬ್ರೆಝಿಲ್‌ನ ಶ್ರೇಷ್ಠ ಆಟಗಾರ ಪೀಲೆ ಹಾಗೂ ಮರಡೋನಾ ಮಧ್ಯೆ ಯಾರು ಶ್ರೇಷ್ಠ ಆಟಗಾರ ಎಂಬ ಚರ್ಚೆ ಸಾಕಷ್ಟು ನಡೆದಿತ್ತು. ಮರಡೋನಾ ಹಾಗೂ ಪೀಲೆ ಇಬ್ಬರೂ ಬೇರೆ ಕಾಲದ ಆಟಗಾರರಾಗಿದ್ದರು. ಮರಡೋನಾ ಫುಟ್ಬಾಲ್ ಲೋಕಕ್ಕೆ ಕಾಲಿಟ್ಟವೇಳೆ ಪೀಲೆ ತಮ್ಮ ಅಂತಿಮಪಂದ್ಯವನ್ನು ಆಡಿದ್ದರು. ಪೀಲೆ 1977ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ಇತ್ತೀಚೆಗೆ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮರಡೋನಾ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿನಲ್ಲಿ ರಕ್ರಹೆಪ್ಪುಗಟ್ಟಿದ್ದ ಕಾರಣ ಅವರಿಗೆ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಅವರು ಶೀಘ್ರದಲ್ಲಿ ಚೇತರಿಸುಕೊಳ್ಳುವ ವಿಶ್ವಾಸಲ್ಲಿ ಅಭಿಮಾನಿಗಳು ಇದ್ದರು. ಆದರೆ ಹೃದಯಾಘಾತದಿಂದ ಮರಡೋನಾ ಕೊನೆಯುಸಿರೆಳೆದಿದ್ದಾರೆ.

ನನ್ನ ಹೀರೋ ಇನ್ನಿಲ್ಲ, ನಿಮಗಾಗಿ ಫುಟ್ಬಾಲ್ ನೋಡುತ್ತಿದೆ: ಗಂಗೂಲಿನನ್ನ ಹೀರೋ ಇನ್ನಿಲ್ಲ, ನಿಮಗಾಗಿ ಫುಟ್ಬಾಲ್ ನೋಡುತ್ತಿದೆ: ಗಂಗೂಲಿ

ಮರಡೋನಾ ಅವರ ಅಗಲಿಕೆಗೆ ಕ್ರೀಡಾಲೋಕ ಆಘಾತಗೊಂಡಿದೆ. ಅರ್ಜೆಂಟೈನಾ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಮೂಲಕ ಅಗಲಿದೆ ಶ್ರೇಷ್ಠ ಆಟಗಾರನಿಗೆ ಗೌರವ ಸಲ್ಲಿಲಾಗುತ್ತಿದೆ.

Story first published: Thursday, November 26, 2020, 10:03 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X