ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಲೀಗ್ ದಾಖಲೆ ಸಮ, 9 ಗೋಲು ಸಿಡಿಸಿದ ಮ್ಯಾಂಚೆಸ್ಟರ್ ಯುನೈಟೆಡ್

Premier League: Man Utd defeat Southampton 9-0, equal biggest win record

ಲಂಡನ್, ಫೆಬ್ರವರಿ 3: ಓಲ್ಡ್ ಟಾಫಾರ್ಡ್ ನಲ್ಲಿ ನಡೆದ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸೌಥಾಂಪ್ಟನ್ ತಂಡದ ವಿರುದ್ಧ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಭರ್ಜರಿ ಜಯ ದಾಖಲಿಸಿದೆ. ಮ್ಯಾಂಚೆಸ್ಟರ್ ಯುನೈಟೆಡ್ 9 ಗೋಲು ಸಿಡಿಸಿದರೆ, ಸೌಥಾಂಪ್ಟನ್ ಖಾತೆ ತೆರೆಯಲು ವಿಫಲವಾಯಿತು.

ಸುಮಾರು 26 ವರ್ಷಗಳ ಬಳಿಕ 20 ಬಾರಿ ಚಾಂಪಿಯನ್ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ತನ್ನ ಅದ್ಭುತ ಪ್ರದರ್ಶನ ನೀಡಿ ಲೀಗ್ ಇತಿಹಾಸದಲ್ಲೇ ಭಾರಿ ಅಂತರದಿಂದ ಜಯ ದಾಖಲಿಸಿದ ಸಾಧನೆ ಮಾಡಿದೆ.

ಗಾಯದ ಮೇಲೆ ಬರೆ ಎಳೆದಂತೆ ಸೌಥಾಂಪ್ಟನ್ಸ್ (ಸೈಂಟ್ಸ್) ಪರ ಮೊದಲ ಬಾರಿಗೆ ಮೈದಾನಕ್ಕಿಳಿದಿದ್ದ ಅಲೆಕ್ಸಾಂಡ್ರೆ ಜಾಂಕೆವಿಜ್ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರ ನಡೆದರು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಮ್ಯಾಂಚೆಸ್ಟರ್ ತಂಡ ಅಂತಿಮವಾಗಿ 9-0 ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿತು.

Premier League: Man Utd defeat Southampton 9-0, equal biggest win record

ಮ್ಯಾಂಚೆಸ್ಟರ್ ಪರ ಮೊದಲಾರ್ಧದಲ್ಲಿ ಅರೋನ್ ವಾನ್ ಬಿಸಾಕಾ, ಮಾರ್ಕಸ್ ರಾಶ್ ಫೋರ್ಡ್, ಜನ್ ಬೆಡ್ ನಾರೆಕ್(ಸ್ವಂತ ಗೋಲು) ಹಾಗೂ ಸ್ಟಾರ್ ಆಟಗಾರ ಎಡಿನ್ಸನ್ ಕವಾನಿ ಗೋಲಿಗಳಿಂದ ಮುನ್ನಡೆ ಪಡೆಯಿತು. ಎರಡನೇ ಅವಧಿಯ ಕೊನೆ 45 ನಿಮಿಷದಲ್ಲಿ 5 ಗೋಲು ಬಾರಿಸಿತು. ಅಂಥೋನಿ ಮಾರ್ಷಿಯಲ್ 2, ಮೆಕ್ ಟೊಮಿನಾಯ್, ಬ್ರುನೋ ಫರ್ನಾಂಡಿಸ್ ಹಾಗೂ ಡೇನಿಯಲ್ ಜೇಮ್ಸ್ ತಲಾ ಒಂದು ಗೋಲು ಬಾರಿಸಿ ಐತಿಹಾಸಿಕ ಗೆಲುವಿಗೆ ಕಾರಣರಾದರು.

ಈ ಗೆಲುವಿನ ಮೂಲಕ ಈ ಋತುವಿನ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿ ಮ್ಯಾಂಚೆಸ್ಟರ್ ಸಿಟಿ ಇದ್ದು, ಉಭಯ ತಂಡಗಳು ತಲಾ 44 ಅಂಕಗಳನ್ನು ಗಳಿಸಿವೆ.

ಈ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡ 1995ರಲ್ಲಿ ಇಪ್ಸ್ವಿಚ್ ಟೌನ್ ವಿರುದ್ಧ 9-0ರಲ್ಲಿ ಜಯ ದಾಖಲಿಸಿತ್ತು. 2019ರಲ್ಲಿ ಲಿಸ್ಟೆಸ್ಟರ್ ಸಿಟಿ ಕೂಡಾ ಸೌಥಾಂಪ್ಟನ್ ತಂಡವನ್ನು 9-0ರಲ್ಲಿ ಸೋಲಿಸಿತ್ತು.

ಭಾರಿ ಅಂತರದ ಗೆಲುವು ಸಾಧಿಸಿದ ಪಂದ್ಯಗಳು:
* ಮ್ಯಾಂಚೆಸ್ಟರ್ ಯುನೈಟೆಡ್ 9--0 ಸೌಥಾಂಪ್ಟನ್, ಫೆಬ್ರವರಿ 2, 2021
* ಲಿಸ್ಟೆಸ್ಟರ್ ಸಿಟಿ 9-0- ಸೌಥಾಂಪ್ಟನ್, ಅಕ್ಟೋಬರ್ 25, 2019
* ಮ್ಯಾಂಚೆಸ್ಟರ್ ಯುನೈಟೆಡ್ 9--0 ಇಪ್ಸ್ವಿಚ್ ಟೌನ್, ಮಾರ್ಚ್ 4, 1995.
* ಟೊಂಟೆನ್ ಹ್ಯಾಮ್ 9-1 ವಿಗಾನ್ ಅಥ್ಲೆಟಿಕ್, ನವೆಂಬರ್ 22, 2009.
* ಸೌಥಾಂಪ್ಟನ್ 8-0 ಸಂದರ್ ಲ್ಯಾಂಡ್, ಅಕ್ಟೋಬರ್ 18, 2014
* ಮ್ಯಾಂಚೆಸ್ಟರ್ ಯುನೈಟೆಡ್ 8-0 ವಾಟ್ ಫೋರ್ಡ್, ಸೆಪ್ಟೆಂಬರ್ 21, 2019
* ನಾಟಿಂಗ್ ಹ್ಯಾಮ್ ಫಾರೆಸ್ಟ್ 1-8 ಮ್ಯಾಂಚೆಸ್ಟರ್ ಯುನೈಟೆಡ್, ಫೆಬ್ರವರಿ 6, 2019

Story first published: Wednesday, February 3, 2021, 12:54 [IST]
Other articles published on Feb 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X