ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಷ್ಯಾವನ್ನು ಅಮಾನತುಗೊಳಿಸಿದ ಫಿಫಾ, ಯುಇಎಫ್‌ಎ: ಕತಾರ್ ವಿಶ್ವಕಪ್‌ನಿಂದಲೂ ಹೊರಬೀಳುವ ಸಾಧ್ಯತೆ

Qatar 2022: FIFA and UEFA suspend Russia from international football Russia may miss out Qatar 2022

ಫುಟ್ಬಾಲ್‌ನ ಜಾಗತಿಕ ಆಡಳಿತ ಮಂಡಳಿ ಫಿಫಾ ಮತ್ತು ಯುರೋಪಿಯನ್ ಫೆಡರೇಶನ್ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ವಿರೋಧಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ರಷ್ಯಾ ರಾಷ್ಟ್ರೀಯ ತಂಡವನ್ನು ಹಾಗೂ ಫುಟ್ಬಾಲ್ ಕ್ಲಬ್‌ಗಳನ್ನು ಮುಂದಿನ ಸೂಚನೆಯವರೆಗೂ ಅಮಾನತುಗೊಳಿಸಿದೆ. ಹೀಗಾಗಿ ಜಾಗತೀಕ ಟೂರ್ನಿಯಲ್ಲಿ ರಷ್ಯಾ ಫುಟ್ಬಾಲ್ ತಂಡ ಹಾಗೂ ಕ್ಲಬ್‌ಗಳು ಭಾಗವಹಿಸಲು ಸಾಧ್ಯವಾಗುವುದಿಲ್ಲ. ಈ ಬೆಳವಣಿಗೆಯಿಂದಾಗಿ ಮುಂದಿನ ಕತಾರ್ ವಿಶ್ವಕಪ್‌ನಿಂದಲೂ ರಷ್ಯಾ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಯುಇಎಫ್‌ಗೆ ಈ ವಿಚಾರವಾಗಿ ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದ್ದು ಈ ಪ್ರಕಟಣೆಯಲ್ಲಿ "ಫಿಫಾ ಹಾಗೂ ಯುಇಎಫ್‌ಎ ಇಂದು ಜೊತೆಯಾಗಿ ರಷ್ಯಾದ ರಾಷ್ಟ್ರೀಯ ಫುಟ್ಬಾಲ್ ತಂಡ ಹಾಗೂ ಕ್ಲಬ್ ತಂಡಗಳು ಫಿಫಾ ಹಾಗೂ ಯುಇಎಫ್‌ಎ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ಮುಂದಿನ ಸೂಚನೆಯ ವರೆಗೆ ಅಮಾನತುಗೊಳಿಸಲಾಗಿದೆ" ಎಂದು ತಿಳಿಸಿದೆ.

ಸಂಜು ಸ್ಯಾಮ್ಸನ್‌ನಲ್ಲಿ ಪ್ರತಿಭೆ ಇದೆ, ಆದ್ರೆ ಪ್ರದರ್ಶನ ಇಲ್ಲ ಎಂದ ಸಲ್ಮಾನ್ ಬಟ್ಸಂಜು ಸ್ಯಾಮ್ಸನ್‌ನಲ್ಲಿ ಪ್ರತಿಭೆ ಇದೆ, ಆದ್ರೆ ಪ್ರದರ್ಶನ ಇಲ್ಲ ಎಂದ ಸಲ್ಮಾನ್ ಬಟ್

ಈ ನಿರ್ಧಾರಗಳನ್ನು ಫಿಫಾ ಕೌನ್ಸಿಲ್‌ನ ಬ್ಯೂರೋ ಮತ್ತು ಯುಇಎಫ್‌ಎ ಯ ಕಾರ್ಯಕಾರಿ ಸಮಿತಿ ಸೇರಿಕೊಂಡು ತುರ್ತು ವಿಷಯಗಳಲ್ಲಿ ಎರಡೂ ಸಂಸ್ಥೆಗಳ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಿಂದ ಅಂಗೀಕರಿಸಲ್ಪಟ್ಟಿದೆ ಎಂದು ಪ್ರಕಟನೆಯಲ್ಲಿ ಮಾಹಿತಿ ನೀಡಲಾಗಿದೆ.

ಮಾರ್ಚ್ 24 ರಂದು ವಿಶ್ವಕಪ್ ಅರ್ಹತಾಯನ್ನು ಗಳಿಸಲು ಪೋಲೆಂಡ್‌ ವಿರುದ್ಧದ ಪ್ಲೇಆಫ್ ಪಂದ್ಯಕ್ಕಾಗಿ ರಷ್ಯಾ ಆತಿಥ್ಯ ವಹಿಸಬೇಕಿತ್ತು. ಆ ಸಂದರ್ಭದಲ್ಲಿಯೂ ಈ ಅಮಾನತು ಮುಂದುವರಿದರೆ ರಷ್ಯಾ ಮುಂದಿನ ವಿಶ್ವಕಪ್‌ನಿಂದ ಹೊರಗುಳಿಯುತ್ತಾರೆ. ನವೆಂಬರ್‌ನಲ್ಲಿ ಕತಾರ್‌ನಲ್ಲಿ ನಡಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗುವ ಅರ್ಹತೆಯನ್ನು ಪಡೆಯಲು ರಷ್ಯಾ ವಿಫಲವಾಗಲಿದೆ.

100ನೇ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ100ನೇ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ

ಈ ಮಧ್ಯೆ ಪೋಲಿಶ್ ಎಫ್‌ಎ ರಷ್ಯಾ ವಿರುದ್ಧದ ಈ ಟೂರ್ನಿಯಲ್ಲಿ ಭಾಗಿಯಾಗಲು ಹಿಂದೇಟು ಹಾಕಿದ್ದು ಪ್ಲೇಆಫ್ ಹಾದಿಯಲ್ಲಿರುವ ಮತ್ತೆರಡು ತಂಡಗಳಾದ ಜೆಕ್ ರಿಪಬ್ಲಿಕ್ ಹಾಗೂ ಸ್ವೀಡನ್ ಕೂಡ ರಷ್ಯಾವನ್ನು ಎದುರಿಸಲು ಹಿಂದೇಟು ಹಾಕಿದೆ. ಹೀಗಾಗಿ ರಷ್ಯಾ ಮುಂದಿನ ವಿಶ್ವಕಪ್‌ಗೆ ಅರ್ಹತೆಯನ್ನು ಪಡೆಯಬೇಕಾದರೆ ಉಳಿದಿರುವ ಎಕೈಕ ಮಾರ್ಗವೆಂದರೆ ಪವಾಡದ ರೀತಿಯಲ್ಲಿ ಉಕ್ರೇನ್‌ನಲ್ಲಿನ ಪರಿಸ್ಥಿತಿ ತಿಳಿಯಾಗಬೇಕಿದೆ.

ಈ ಮಧ್ಯೆ ರಷ್ಯಾದ ಫುಟ್‌ಬಾಲ್ ಯೂನಿಯನ್ (RFU) ಫಿಫಾ ಮತ್ತು ಯುಇಎಫ್‌ಎ ರಷ್ಯಾ ಡಗಳ ನಿಷೇಧಕ್ಕೆ ಪ್ರತಿಕ್ರಿಯೆ ನೀಡಿದೆ. ಈ ನಿರ್ಧಾರವನ್ನು ತಾನು ಒಪ್ಪಿಕೊಳ್ಳುವುದಿಲ್ಲ ಮತ್ತು ಇನ್ನೂ ಈ ನಿರ್ಧಾರವನ್ನು ಪ್ರಶ್ನಿಸಬಹುದು ಎಂದು ಹೇಳಿದೆ.

Story first published: Tuesday, March 1, 2022, 12:02 [IST]
Other articles published on Mar 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X