ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ಕತಾರ್ 2022 ಫೀಫಾ ವಿಶ್ವಕಪ್‌'ಗೆ ಇಂದಿನಿಂದಲೇ ಕ್ಷಣಗಣನೆ ಶುರು!

Qatar 2022 FIFA World Cup: The countdown begins

ಬೆಂಗಳೂರು, ನವೆಂಬರ್ 21: ರಷ್ಯಾದಲ್ಲಿ ನಡೆದಿದ್ದ 2018ರ ಫೀಫಾ ಫುಟ್ಬಾಲ್ ಪಂದ್ಯವನ್ನು ನಾವೆಲ್ಲ ನೋಡಿ ಸವಿದಿದ್ದಾಗಿದೆ. ಮುಂದಿನ ಫೀಫಾ ವಿಶ್ವಕಪ್ ಆತಿಥ್ಯವನ್ನು ಕತಾರ್ ವಹಿಸಿಕೊಳ್ಳಲಿದ್ದು, ನವೆಂಬರ್ 21ರ ಈ ದಿನದಿಂದಲೇ ಈ ಪ್ರತಿಷ್ಠಿತ ಟೂರ್ನಿಗಾಗಿ ಕೌಂಟ್‌ಡೌನ್ ಶುರುವಾಗಿದೆ.

ಕ್ರಿಕೆಟ್ ಸರಣಿ ರದ್ದು: ಬಿಸಿಸಿಐ ವಿರುದ್ಧ ದೂರು ನೀಡಿದ್ದ ಪಾಕಿಸ್ತಾನಕ್ಕೆ ಮುಖಭಂಗಕ್ರಿಕೆಟ್ ಸರಣಿ ರದ್ದು: ಬಿಸಿಸಿಐ ವಿರುದ್ಧ ದೂರು ನೀಡಿದ್ದ ಪಾಕಿಸ್ತಾನಕ್ಕೆ ಮುಖಭಂಗ

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಅದ್ದೂರಿ ಫುಟ್ಬಾಲ್ ಟೂರ್ನಿ 2022ರಂದು ಕತಾರ್ ನಲ್ಲಿ ನವೆಂಬರ್ 21ರಿಂದಲೇ ಆರಂಭಗೊಳ್ಳಲಿದೆ. ಹೀಗಾಗಿ ಇಂದಿನಿಂದ (ನವೆಂಬರ್ 21) ಸರಿಯಾಗಿ ನಾಲ್ಕುವರ್ಷಕ್ಕೆ ನಾವು ಮತ್ತೆ ಫುಟ್ಬಾಲ್ ಹಬ್ಬವನ್ನು ಕಣ್ತುಂಬಿಕೊಳ್ಳಲಿದ್ದೇವೆ.

ಭಾರತ vs ಆಸ್ಟ್ರೇಲಿಯಾ, ಟಿ20 ಸರಣಿ: ಇತ್ತಂಡಗಳ ಪ್ಲಸ್ಸು-ಮೈನಸ್ಸುಗಳು!ಭಾರತ vs ಆಸ್ಟ್ರೇಲಿಯಾ, ಟಿ20 ಸರಣಿ: ಇತ್ತಂಡಗಳ ಪ್ಲಸ್ಸು-ಮೈನಸ್ಸುಗಳು!

ರಷ್ಯಾದಲ್ಲಿ ನಡೆದಿದ್ದ 2018ರ ವಿಶ್ವಕಪ್ ಕೂಡ ಬಹಳ ಅದ್ದೂರಿಯಾಗಿ ಅಷ್ಟೇ ಯಶಸ್ವಿಯಾಗಿ ನೆರವೇರಿತ್ತು. ಅಲ್ಲಿನ ಮುಕ್ತಾಯದ ಸಮಾರಂಭಲ್ಲಿ ಮುಂದಿನ ವಿಶ್ವಕಪ್ ಆತಿಥ್ಯದ ಜವಾಬ್ದಾರಿಯನ್ನು ಕತಾರ್‌ಗೆ ವಹಿಸಲಾಗಿತ್ತು. ಅದರಂತೆ ಕತಾರ್ ಈಗ ಪಂದ್ಯ ನಡೆಸುವುದಕ್ಕಾಗಿ ತಯಾರಾಗಿದೆ, ಆಗುತ್ತಿದೆ.

ಎಂಟು ತಾಣಗಳಲ್ಲಿ ಪಂದ್ಯ

ಎಂಟು ತಾಣಗಳಲ್ಲಿ ಪಂದ್ಯ

ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಈ ಫುಟ್ಬಾಲ್ ಹಬ್ಬಕ್ಕಾಗಿ ಕತಾರ್ ನಲ್ಲಿ 8 ಸ್ಟೇಡಿಯಂಗಳು ತಯಾರಾಗಿ ನಿಂತಿವೆ. ರಷ್ಯಾ ದೇಶ ಒಟ್ಟು 13 ತಾಣಗಳಲ್ಲಿ ಟೂರ್ನಿಯ ವಿವಿಧ ಪಂದ್ಯಗಳನ್ನು ನಡೆಸಿತ್ತು. ಕತಾರ್ ಎಂಟು ತಾಣಗಳಲ್ಲಿ ಪಂದ್ಯ ನಡೆಸಲು ನಿರ್ಧರಿಸಿದೆ.

ಯಾರು ಮುಂದಿನ ಚಾಂಪಿಯನ್?

ಯಾರು ಮುಂದಿನ ಚಾಂಪಿಯನ್?

2018ರ ಪಂದ್ಯದಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕ್ರೊವೇಷಿಯಾ, ಬೆಲ್ಜಿಯಂ ಮತ್ತು ಇಂಗ್ಲೆಂಡ್ ತಂಡಗಳು ಅನಂತರದ ಸ್ಥಾನ ಗಳಿಸಿದ್ದವು. 2022ರಲ್ಲಿ ಯಾರು ಚಾಂಪಿಯನ್‌ ಆಗಲಿದ್ದಾರೆ ಎಂಬುದು ಕುತೂಹಲ ಮಾಡಿಸಿದೆ. ಕುತೂಹಲ ತಣಿಯಲು ನಾವು ನಾಲ್ಕು ವರ್ಷಗಳ ಕಾಲ ಕಾಯಲೇಬೇಕು.

ಆಕರ್ಷಣೀಯ ಬೃಹತ್ ತಾಣ

ಆಕರ್ಷಣೀಯ ಬೃಹತ್ ತಾಣ

ಕತಾರ್ ನ ಅಲ್ಕೋರ್ ನಲ್ಲಿರುವ ದ 'ಅಲ್ ಬಾಯ್ಟ್' ಸ್ಟೇಡಿಯಂ ಟೂರ್ನಿಗಾಗಿ ಕಾದಿರುವ ಅತೀದೊಡ್ಡ ಸ್ಟೇಡಿಯಂ ಆಗಿ ಗುರುತಿಸಿಕೊಂಡಿದೆ. ಈ ಸ್ಟೇಡಿಯಂನಲ್ಲಿ 60,000 ಜನರಿಗಾಗುವಷ್ಟು ಆಸನ ವ್ಯವಸ್ಥೆಗಳಿವೆ. ನೋಡೋದಕ್ಕೂ ಈ ತಾಣ ಅತೀ ಆಕರ್ಷಣೀಯವಾಗಿದೆ.

ಅವಿಸ್ಮರಣೀಯ ಸಂದರ್ಭ

ಅವಿಸ್ಮರಣೀಯ ಸಂದರ್ಭ

ಪಂದ್ಯದ ಆತಿಥ್ಯದ ಕುರಿತು ಪ್ರತಿಕ್ರಿಯಿಸಿರುವ ಕತಾರ್‌ನ ಸ್ಥಳೀಯ ಆಯೋಜನಾ ಸಮಿತಿಯ ಕಾರ್ಯದರ್ಶಿ ಎಚ್‌ಇ ಹಸನ್ ಅಲ್ ತವಾದಿ, 'ಪಂದ್ಯದ ಆಯೋಜನೆ ಇಡೀ ಅರಬ್ ಜಗತ್ತಿಗೇ ಅವಿಸ್ಮರಣೀಯ ಸಂದರ್ಭವೆನಿಸಲಿದೆ' ಎಂದಿದ್ದಾರೆ.

Story first published: Wednesday, November 21, 2018, 14:54 [IST]
Other articles published on Nov 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X