ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

2022ರ ಫೀಫಾ ವಿಶ್ವಕಪ್ ಕತಾರ್ ನಲ್ಲಿ, ದಿನಾಂಕವೂ ಖಾತರಿ!

Qatar 2022 World Cup dates confirmed for November and December

ದೋಹಾ, ಜುಲೈ 15: ಫ್ರಾನ್ಸ್ ಮತ್ತು ಕ್ರೊವೇಷಿಯಾ ನಡುವಿನ ಜುಲೈ 15ರ ಫೈನಲ್ ಕಾದಾಟದೊಂದಿಗೆ 2018ರ ಫೀಫಾ ವಿಶ್ವಕಪ್ ಸಂಭ್ರಮಕ್ಕೆ ತೆರೆ ಬೀಳಲಿದೆ. ಈ ಮಧ್ಯೆ ಮುಂದಿನ ಫೀಫಾ ವಿಶ್ವಕಪ್ ಗಾಗಿ ಸ್ಥಳ ನಿಗದಿಯಾಗಿದೆ. ಮುಂದಿನ ವಿಶ್ವಕಪ್ ಆತಿಥ್ಯವನ್ನು ಕತಾರ್ ವಹಿಸಿಕೊಳ್ಳುವುದಾಗಿ ಫೀಫಾ ಖಾತರಿ ಪಡಿಸಿದೆ.

ನಿರಾಶ್ರಿತನಾಗಿದ್ದ ಮೊಡ್ರಿಚ್ ಇಂದು ಕ್ರೋವೇಷಿಯಾದ ಹೀರೋ!ನಿರಾಶ್ರಿತನಾಗಿದ್ದ ಮೊಡ್ರಿಚ್ ಇಂದು ಕ್ರೋವೇಷಿಯಾದ ಹೀರೋ!

ರಷ್ಯಾದಲ್ಲಿ ನಡೆದ 2018ರ ಫೀಫಾ ವಿಶ್ವಕಪ್ ಅತ್ಯುತ್ತಮವಾದುದು. ಕಾರ್ಯಕ್ರಮ ಯಶಸ್ವಿಯಾಗಿಸುವಲ್ಲಿ ರಷ್ಯಾದ ಪ್ರಯತ್ನ ಅಭಿನಂದನೀಯವೆಂದು ಈ ಬಾರಿಯ ಫೀಫಾ ಆತಿಥ್ಯವನ್ನು ವಹಿಸಿಕೊಂಡಿದ್ದ ರಷ್ಯಾವನ್ನು ಶ್ಲಾಘಿಸಿರುವ ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಮುಂದಿನ ಫೀಫಾ ಆತಿಥ್ಯವನ್ನು ಕತಾರ್ ವಹಿಸಲಿರುವುದಾಗಿ ಹೇಳಿದ್ದಾರೆ.

ಕುತೂಹಲಿಗ ಫುಟ್ಬಾಲ್ ಅಭಿಮಾನಿಗಳಿಗಾಗಿ ಫೀಫಾ ಮುಂದಿನ ವಿಶ್ವಕಪ್ ದಿನಾಂಕವನ್ನೂ ಬಹಿರಂಗಪಡಿಸಿದೆ. 2022ರ ಫೀಫಾ ವಿಶ್ವಕಪ್ ಕತಾರ್ ನಲ್ಲಿ ನವೆಂಬರ್ 21ರಿಂದ ಡಿಸೆಂಬರ್ 18ರ ವರೆಗೆ ನಡೆಯಲಿದೆ. ಜೊತೆಗೆ ಅಭಿಮಾನಿಗಳ ದೃಷ್ಟಿಯಲ್ಲಿ 'ಕತಾರ್' ಫೀಫಾ ವಿಶ್ವಕಪ್ ಗಾಗಿ ಅತ್ಯಂತ ಕೆಟ್ಟ ಜಾಗವೆಂದೂ ಹೇಳಲಾಗಿದೆ. ಭಯೋತ್ಪಾದನೆ ಕುರಿತ ಭಯ ಇದಕ್ಕೆ ಕಾರಣ ಎನ್ನಲಾಗಿದೆ.

ರಷ್ಯಾದ ಫೀಫಾ ವಿಶ್ವಕಪ್ ಆತಿಥ್ಯದ ಬಗ್ಗೆ ಖುಷಿ ವ್ಯಕ್ತಪಡಿಸಿದ ಗಿಯಾನಿ, 'ಕೆಲ ವರ್ಷಗಳ ಹಿಂದೆ ನಾನು ಕೊಂಚ ಮುಲಾಜಿಗಾಗಿ ಇದು ಬೆಸ್ಟ್ ವರ್ಲ್ಡ್ ಕಪ್ ಎನ್ನುತ್ತಿದ್ದೆ. ಆದರೆ ಇಂದು ತುಂಬಾ ನೇರವಾಗಿ, ಅಷ್ಟೇ ಖುಷಿಯಾಗಿ ಹೇಳ್ತೇನೆ; ರಷ್ಯಾ ವಿಶ್ವಕಪ್ ಯಾವತ್ತಿಗೂ ಬೆಸ್ಟ್ ವಿಶ್ವಕಪ್' ಎಂದರು.

'ಈ ಸಂಭ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಪಿಚ್ ನಿರ್ವಾಹಕರಿಂದ ಹಿಡಿದು ಆಟಗಾರರು, ಅಂಪೈರ್ ಗಳು, ತರಬೇತುದಾರರು ಜೊತೆಗೆ ಕಾರ್ಯಕ್ರಮ ಚಂದವಾಗಿ-ಯಶಸ್ವಿಯಾಗಿಸಲು ಕಾರಣರಾದ ಎಲ್ಲರಿಗೂ ನಾನು ಅಭಾರಿ' ಎಂದು ಇನ್ಫಾಂಟಿನೊ ಹೇಳಿದರು.

Story first published: Sunday, July 15, 2018, 10:46 [IST]
Other articles published on Jul 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X