ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊರೊನಾ ವೈರಸ್: 2022ರ ವಿಶ್ವಕಪ್ ಫುಟ್ಬಾಲ್ ನಡೆಯುವ ಭರವಸೆ ನೀಡಿದ ಕತಾರ್

Qatar promises 2022 World Cup will go ahead

ಕತಾರ್‌ ವಿಶ್ವಕಪ್ ಫುಟ್ಬಾಲ್ ಆಯೋಜನೆಗೆ ಸಿದ್ಧತೆಯನ್ನು ನಡೆಸುತ್ತಿದೆ. ಆದರೆ ಕೊರೊನಾ ವೈರಸ್‌ ಜಗತ್ತಿನಾದ್ಯಂತ ವ್ಯಾಪಿಸಿರುವ ಕಾರಣ ಬಹುತೇಕ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಆದರೆ ವಿಶ್ವಕಪ್ ಫುಟ್ಬಾಲ್‌ಗೆ ಯಾವುದೇ ಆತಂಕ ಇಲ್ಲ. ವಿಶ್ವಕಪ್ ಫುಟ್ಬಾಲ್‌ನ ಎಲ್ಲಾ ತಯಾರಿಗಳು ನಡೆಯುತ್ತಿದೆ ಎಂದು ಕತಾರ್ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ಭೀತಿ ಮಧ್ಯೆಯೂ ವಿಶ್ವಕಪ್ ಫುಟ್ಬಾಲ್‌ಗೆ ಸಂಬಂಧಿಸಿದ ಕಾರ್ಯಗಳು ನಡೆಯುತ್ತಿದೆ. ವಿಶ್ವಕಪ್‌ ಆಯೋಜಿಸುವ ಸ್ಟೇಡಿಯಮ್ ನಿರ್ಮಾಣ ಕಾರ್ಯ 90% ಶೇಕಡಾದಷ್ಟು ಪೂರ್ಣಗೊಂಡಿದೆ ಎಂದು ಕತಾರ್ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅಲ್ಲ : ಯಾರು ಶ್ರೇಷ್ಠ ಪ್ರಶ್ನೆಗೆ ಜಾಫರ್ ನೀಡಿದ ಉತ್ತರ ಇದು!ವಿರಾಟ್ ಕೊಹ್ಲಿ ಅಲ್ಲ : ಯಾರು ಶ್ರೇಷ್ಠ ಪ್ರಶ್ನೆಗೆ ಜಾಫರ್ ನೀಡಿದ ಉತ್ತರ ಇದು!

ಕೊರೊನಾ ವೈರಸ್‌ನ ಪರಿಣಾಮವಾಗಿ ಆರೋಗ್ಯ ಮತ್ತು ಸುರಕ್ಷತಾ ಮಾರ್ಗದರ್ಶನದಲ್ಲಿ ಸೂಕ್ತ ಬದಲಾವಣೆಗಳನ್ನು ಅನುಸರಿಸುತ್ತದೆ. ಜೊತೆಗೆ ಸಂಘಟನಾ ಸಮಿತಿಯೊಂದಿಗೆ ಸಮಾಲೋಚನೆಗಳು ನಡೆಯುತ್ತಿವೆ ಎಂದು ಕತಾರ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ತಿಳಿಸಿದ್ದಾರೆ.

"ನಮ್ಮ ಎಲ್ಲಾ ಕ್ರೀಡಾಂಗಣಗಳಲ್ಲಿ ಎಲ್ಲಾ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಅನ್ವಯಿಸಲಾಗಿದೆ. ಅದನ್ನು ಖಚಿತಪಡಿಸಿಕೊಳ್ಳುವ ಕಾರ್ಯಗಳೂ ಆಗುತ್ತಿದೆ."ನಮ್ಮೆಲ್ಲರಿಗೂ ಇದು ಸ್ಪಷ್ಟವಾದ ನಂತರ, ನಾವು ಅದನ್ನು ಸಾರ್ವಜನಿಕರಿಗೆ ತಿಳಿಸಲಿದ್ದೇವೆ " ಎಂದಿದ್ದಾರೆ.

ಮೊದಲ ಓವರ್‌ನಲ್ಲೇ ಅತಿ ಹೆಚ್ಚು ಬಾರಿ ಸಿಕ್ಸರ್: ಟಾಪ್ ಐವರಲ್ಲಿ ಭಾರತೀಯನೇ ಸರ್ವಾಧಿಕಮೊದಲ ಓವರ್‌ನಲ್ಲೇ ಅತಿ ಹೆಚ್ಚು ಬಾರಿ ಸಿಕ್ಸರ್: ಟಾಪ್ ಐವರಲ್ಲಿ ಭಾರತೀಯನೇ ಸರ್ವಾಧಿಕ

ಕತಾರ್ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾವೈರಸ್ ಸೋಂಕು ವ್ಯಾಪಿಸಿತ್ತು. ಆದರೆ ಸಾವಿನ ಪ್ರಮಾಣ ನಿಯಂತ್ರಣ ವಿಚಾರದಲ್ಲಿ ಕತಾರ್ ಯಶಸ್ಸನ್ನು ಸಾಧಿಸಿದೆ. 2.8 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಕೊಲ್ಲಿ ರಾಷ್ಟ್ರದಲ್ಲಿ ಇಲ್ಲಿಯವರೆಗೆ 65,000 ಪ್ರಕರಣಗಳು ದಾಖಲಾಗಿದೆ. ಆದರೆ ಈ ವೈರಸ್‌ನಿಂದಾಗಿ ಕೇವಲ 49 ಸಾವುಗಳ ಮಾತ್ರವೇ ಸಂಭವಿಸಿರುವುದು ಅಲ್ಲಿನ ಆಡಳಿತಕ್ಕೆ ಸಮಾಧಾನ ತಂದಿದೆ.

Story first published: Sunday, June 7, 2020, 21:47 [IST]
Other articles published on Jun 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X