ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್‌ಬಾಲ್‌ ಸ್ವರ್ಗವಾಗಿ ಬದಲಾಗುವುದೇ ಕಾಶ್ಮೀರ?

real kashmir fc team first team of kashmir to qualify i-league

ನವದೆಹಲಿ, ಮೇ 31: ಬಾಂಬು, ಗುಂಡುಗಳ ಸದ್ದು ಸದಾ ಕೇಳುವ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಕಾಲ್ಚೆಂಡಿನಾಟದ ಸದ್ದೂ ಕೇಳಿಬರುತ್ತಿದೆ. ಕಾಶ್ಮೀರವನ್ನು ಫುಟ್‌ಬಾಲ್‌ನ ಸ್ವರ್ಗವನ್ನಾಗಿಸುವ ಬಯಕೆ ವ್ಯಕ್ತಪಡಿಸಿದ್ದಾರೆ ರಿಯಲ್ ಕಾಶ್ಮೀರ್ ಎಫ್‌ಸಿ ತಂಡದ ಸಹ ಮಾಲೀಕ ಸಂದೀಪ್ ಚಟ್ಟೂ.

ಐ-ಲೀಗ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪ್ರತಿನಿಧಿಸುತ್ತಿರುವ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರಿಯಲ್ ಕಾಶ್ಮೀರ್ ಪಾತ್ರವಾಗಿದೆ.

ಸಲಾ ಬೀಳಿಸಿದ ರಾಮೋಸ್ ಶಿಕ್ಷಿಸಿ ಎಂದ 5 ಲಕ್ಷ ಮಂದಿ! ಸಲಾ ಬೀಳಿಸಿದ ರಾಮೋಸ್ ಶಿಕ್ಷಿಸಿ ಎಂದ 5 ಲಕ್ಷ ಮಂದಿ!

ಬೆಂಗಳೂರಿನಲ್ಲಿ ಎರಡನೆಯ ಡಿವಿಷನ್ ಲೀಗ್‌ನಲ್ಲಿ ದೆಹಲಿಯ ಹಿಂದೂಸ್ತಾನ್ ಎಫ್‌ಸಿ 3 ತಂಡವನ್ನು ಪರಾಭವಗೊಳಿಸುವ ಮೂಲಕ ಶ್ರೀನಗರದ ರಿಯಲ್ ಕಾಶ್ಮೀರ್ ತಂಡವು ಉನ್ನತ ಮಟ್ಟದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಕಾಶ್ಮೀರದ ಪ್ರಥಮ ಕ್ಲಬ್‌ ಎಂದೆನಿಸಿಕೊಂಡಿದೆ.

ಎರಡು ವರ್ಷದ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ತಂಡಕ್ಕೆ ಸ್ಕಾಟ್ಲೆಂಡ್‌ ಮತ್ತು ಗ್ಲಾಸ್ಕೋ ರೇಂಜರ್ಸ್ ತಂಡಗಳನ್ನು ಪ್ರತಿನಿಧಿಸಿದ್ದ ದಿಗ್ಗಜ, ಡೇವಿಡ್ ರಾಬರ್ಟ್‌ಸನ್‌, ರಾಜ್ಯದಲ್ಲಿ ಫುಟ್‌ಬಾಲ್‌ ತರಬೇತಿಗೆ ಸೂಕ್ತವಾದ ಸೌಲಭ್ಯಗಳಿಲ್ಲ ಎಂದಿದ್ದಾರೆ.

2018-19ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಐ-ಲೀಗ್‌ನಲ್ಲಿ ರಿಯಲ್ ಕಾಶ್ಮೀರ್ ತಂಡವು ಮೋಹನ್ ಬಗಾನ್ ಮತ್ತು ಈಸ್ಟ್‌ ಬೆಂಗಾಲ್‌ನಂತಹ ಬಲಿಷ್ಠ ತಂಡಗಳೊಂದಿಗೆ ಸೆಣಸಾಟ ನಡೆಸಲಿದೆ.

'ಕಾಶ್ಮೀರದಲ್ಲಿ ಫುಟ್‌ಬಾಲ್‌ಗೆ ಸರಿಯಾದ ಮೂಲಸೌಕರ್ಯಗಳು ಇಲ್ಲದೆಯೇ ಇರುವಾಗ ಕ್ಲಬ್ ಇಲ್ಲಿಯವರೆಗೂ ತಲುಪಿರುವುದು ಮಹಾನ್ ಸಾಧನೆಯೇ ಸರಿ. ಆದರೆ, ಇದಿನ್ನೂ ಆರಂಭವಷ್ಟೇ ಎಂದಿದ್ದಾರೆ ಚಟ್ಟೂ.

ನಾವು ಸಂಪೂರ್ಣ ಸನ್ನಿವೇಶವನ್ನು ಬದಲಿಸಲು ಬಯಸಿದ್ದೇವೆ. ಕಾಶ್ಮೀರದಲ್ಲಿ ಫುಟ್‌ಬಾಲ್ ಕ್ರಾಂತಿ ತರುವ ಆಸೆ ಹೊಂದಿದ್ದೇವೆ. ಈಗಷ್ಟೇ ದಾರಿಯನ್ನು ತೆರೆದಿದ್ದೇವೆ. ಭೂಮಿ ಮೇಲಿನ ಈ ಸ್ವರ್ಗವನ್ನು ಫುಟ್‌ಬಾಲ್‌ನ ಸ್ವರ್ಗವನ್ನಾಗಿಸಲು ಬಯಸಿದ್ದೇವೆ ಎಂದು ಹೇಳಿದ್ದಾರೆ.

ತಂಡದ ಈ ಯಶಸ್ಸು ಕ್ರೀಡೆಯ ಮೂಲಕ ಮುಖ್ಯವಾಹಿನಿಯತ್ತ ಬರಲು ಯುವಜನರನ್ನು ಪ್ರೇರೇಪಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

'ಯುವಜನರು ಕಲ್ಲನ್ನು ಬೀಸುವ ಬದಲು ಫುಟ್‌ಬಾಲ್ ಎತ್ತಿಕೊಳ್ಳಲಿ. ಅವರ ಶಕ್ತಿಯನ್ನು ಬಳಸಿಕೊಳ್ಳಲು ಫುಟ್‌ಬಾಲ್ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Story first published: Thursday, May 31, 2018, 17:03 [IST]
Other articles published on May 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X