ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಯೂರೋಪ್‌ನಲ್ಲಿ ಹೆಚ್ಚಿದ ಕೋವಿಡ್ ಕೇಸ್: ರಿಯಲ್ ಮ್ಯಾಡ್ರಿಡ್‌ನ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್

Real madrid

ಕೋವಿಡ್-19 ಮೂರನೇ ಅಲೆಯು ಯೂರೋಪ್‌ನಾದ್ಯಂತ ಜೋರಾಗಿದ್ದು, ಸೋಂಕು ದೃಢಪಟ್ಟವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಕೊರೊನಾ ಸೋಂಕು ಹರಡುವಿಕೆಯು ಕ್ರೀಡೆಯನ್ನು ಹೊರತಾಗಿಸಿಲ್ಲ. ರಿಯಲ್ ಮ್ಯಾಡ್ರಿಡ್ ಆಟಗಾರರಾದ ಲುಕಾ ಮೊಡ್ರಿಕ್ ಮತ್ತು ಮಾರ್ಸೆಲೊ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ ಎಂದು ಲಾಲಿಗಾ ಕ್ಲಬ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಐಎಲ್‌ಎಲ್: ಚೆನ್ನೈಯಿನ್ ವಿರುದ್ಧ ಗೆಲುವು ಸಾಧಿಸಿದ ಮುಂಬೈ ಸಿಟಿ ಎಫ್‌ಸಿಐಎಲ್‌ಎಲ್: ಚೆನ್ನೈಯಿನ್ ವಿರುದ್ಧ ಗೆಲುವು ಸಾಧಿಸಿದ ಮುಂಬೈ ಸಿಟಿ ಎಫ್‌ಸಿ

ಕೋವಿಡ್-19 ಪಾಸಿಟಿವ್ ಆಗಿರುವ ಈ ಇಬ್ಬರು ಆಟಗಾರರು ಯಾವ ರೋಗಲಕ್ಷಣದಿಂದ ಬಳಲುತ್ತಿದ್ದಾರೆ ಎಂದು ರಿಯಲ್ ಮ್ಯಾಡ್ರಿಡ್ ಮ್ಯಾನೇಜ್‌ಮೆಂಟ್ ತಿಳಿಸಿಲ್ಲ. ಆದ್ರೆ ಅವರಿಗೆ ಸ್ಪೇನ್ ಆರೋಗ್ಯ ನಿಯಮಗಳ ಪ್ರಕಾರ ಬಯೋ ಬಬಲ್‌ನಲ್ಲಿ ಇಡಲಾಗಿದ್ದು, ಯಾವುದೇ ಸಂಪರ್ಕವಾಗದಂತೆ ನೋಡಿಕೊಳ್ಳಲಾಗಿದೆ. ಈ ಇಬ್ಬರು ಆಟಗಾರರು ಭಾನುವಾರ ನಡೆಯಲಿರುವ ಕ್ಯಾಡಿಜ್ ವಿರುದ್ಧದ ಪಂದ್ಯದಲ್ಲಿ ಆಡುವುದನ್ನ ಮಿಸ್ ಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕತ್ವ ಬದಲಾಯಿಸುವುದರಲ್ಲಿ ಬಿಸಿಸಿಐ ಪಾತ್ರವಿಲ್ಲ: ಸರಣ್‌ದೀಪ್ ಸಿಂಗ್ಟೀಂ ಇಂಡಿಯಾ ನಾಯಕತ್ವ ಬದಲಾಯಿಸುವುದರಲ್ಲಿ ಬಿಸಿಸಿಐ ಪಾತ್ರವಿಲ್ಲ: ಸರಣ್‌ದೀಪ್ ಸಿಂಗ್

ಯುರೋಪಿನಾದ್ಯಂತ ದಿನೇ ದಿನೇ ಬೆಳೆಯುತ್ತಿರುವ ಕೋವಿಡ್ -19 ಪ್ರಕರಣಗಳ ಸಂಖ್ಯೆಯಿಂದ ಫುಟ್ಬಾಲ್ ಲೋಕದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ತಂಡದ ಮುಖ್ಯ ತರಬೇತುದಾರ ಮತ್ತು ಇಬ್ಬರು ಆಟಗಾರರು ಸೇರಿದಂತೆ ವೇಲೆನ್ಸಿಯಾ ಸೋಮವಾರ ನಾಲ್ಕು ಪ್ರಕರಣಗಳನ್ನು ದೃಢಪಡಿಸಿದೆ.

ಇಂಗ್ಲೆಂಡ್‌ನಲ್ಲಿ, ಕಳೆದ ವಾರದಲ್ಲಿ 42 ಪ್ರೀಮಿಯರ್ ಲೀಗ್ ಆಟಗಾರರು ಮತ್ತು ಸಿಬ್ಬಂದಿ ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. ಇದು ಏಳು ದಿನಗಳ ಅವಧಿಯಲ್ಲಿ ಲೀಗ್‌ನಲ್ಲಿ ಅತಿ ಹೆಚ್ಚು ದಾಖಲಾದ ಕೇಸ್‌ಗಳಾಗಿವೆ.

ಕೋವಿಡ್ ಪಾಸಿಟಿವ್ ಸಂಖ್ಯೆ ಏಕಾಏಕಿ ಹೆಚ್ಚಾದ ಹಿನ್ನಲೆಯಲ್ಲಿ ಯುಇಎಫ್‌ಎ ಕಳೆದ ವಾರ ಫ್ರೆಂಚ್ ತಂಡದ ರೆನ್ನೆಸ್ ವಿರುದ್ಧ ತಮ್ಮ ಯುರೋಪಾ ಕಾನ್ಫರೆನ್ಸ್ ಲೀಗ್ ಪಂದ್ಯವನ್ನು ಮುಂದೂಡಲು ಕಾರಣವಾಯಿತು.

Story first published: Wednesday, December 15, 2021, 23:08 [IST]
Other articles published on Dec 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X