ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಬೆಂಗಳೂರಿಗೆ ಜಯದ ಗುರಿ

By Isl Media
Rivalry renewed as Bengaluru eye win and Kerala look to arrest slide

ಗೋವಾ, ಡಿಸೆಂಬರ್ 12: ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಡ್ರಾ ಮತ್ತು ಒಂದು ಜಯ, ಇದು ಬಲಿಷ್ಠ ಬೆಂಗಳೂರು ತಂಡದ ಉತ್ತಮ ಆರಂಭ ಎಂದು ಹೇಳಲಾಗದು. ಏನೇ ಆದರೂ ಕಾರ್ಲಸ್ ಕ್ವಾಡ್ರಾಟ್ ಪಡೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಜಯದೊಂದಿಗೆ ಮೂರು ಅಂಕ ಗಳಿಸುವ ಗುರಿ ಹೊಂದಿದೆ.

ಕೇರಳ ವಿರುದ್ಧ ಬೆಂಗಳೂರು ಉತ್ತಮ ದಾಖಲೆಯನ್ನು ಹೊಂದಿದೆ. ಆರು ಪಂದ್ಯಗಳಲ್ಲಿ ಬೆಂಗಳುರು ನಾಲ್ಕ ಬಾರಿ ಜಯ ಗಳಿಸಿ ಕೇವಲ ಒಂದು ಬಾರಿ ಸೋಲನುಭವಿಸಿದೆ. ಆದರೆ ಹಿಂದಿನ ಸಂದರ್ಭಗಳಲ್ಲಿ ಬೆಂಗಳೂರು ಉತ್ತಮ ಪ್ರದರ್ಶನ ತೋರಿಲ್ಲ. ನಾರ್ಥ್ ಈಸ್ಟ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು 2-2 ಗೋಲುಗಳಿಂದ ಡ್ರಾಗೆ ತೃಪ್ತಿಪಟ್ಟಿತ್ತು.

ಒಡಿಶಾಕ್ಕೆ ಮತ್ತೆ ಸೋಲಿನ ಆಘಾತ, ಗೋವಾಕ್ಕೆ ಸತತ ಎರಡನೇ ಜಯಒಡಿಶಾಕ್ಕೆ ಮತ್ತೆ ಸೋಲಿನ ಆಘಾತ, ಗೋವಾಕ್ಕೆ ಸತತ ಎರಡನೇ ಜಯ

ಬೆಂಗಳೂರು ಈ ಬಾರಿ 3-4-3 ಮಾದರಿಯಲ್ಲಿ ಆಟವನ್ನು ಆರಂಭಿಸಿತ್ತು. ಇದು ಅವರ ಶೈಲಿಯ ಆಟಕ್ಕೆ ಹೊಂದಿಕೆ ಆಗಲಿಲ್ಲ, ಪರಿಣಾಮ ಕ್ವಾಡ್ರಾಟ್ ಡಿಫೆನ್ಸ್ ನಲ್ಲಿ ನಾಲ್ವರು ಆಟಗಾರರನ್ನು ಇರಿಸುವ ಮಾದರಿಗೆ ಬದಲಾದರು. ಈ ರೀತಿ ಯೋಜನೆಯಲ್ಲಿ ಬದಲಾವಣೆ ಮಾಡಿದ್ದು ಬೆಂಗಳೂರಿಗೆ ದಿಮಾಸ್ ಡೆಲ್ಗಾಡೊ ಹಾಗೂ ಉದಾಂತ್ ಸಿಂಗ್ ಅವರಿಂದ ಉತ್ತಮ ಪ್ರದರ್ಶನ ಕಾಣಲು ಸಾಧ್ಯವಾಯಿತು. ಅದೇ ರೀತಿ ತಂಡ ಎದುರಾಳಿಗೆ ಅಪಾಯಕಾರಿಯಾಗಿ ಕಂಡುಬಂತು.

"ಆ ಹಂತದಲ್ಲಿ ನಮಗೆ ಅದು ಸರಿಯಾಗಿ ಕೆಲಸ ಮಾಎಇಲ್ಲ. ಆದರೆ ಭವಿಷ್ಯದಲ್ಲಿ ಅದು ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದೆ. ನಮ್ಮಲ್ಲಿ ಬಿ ಮತ್ತು ಸಿ ಯೋಜನೆ ಇದೆ. ನಾವು ಮತ್ತೆ 4-3-3 ಯೋಜನೆಗೆ ಮರಳಿದ್ದೇವೆ. ಇದು ಅಫೆನ್ಸಿವ್ ಆಟಕ್ಕೆ ನೆರವಾಗಿದೆ," ಎಂದು ಕ್ವಾಡ್ರಾಟ್ ಹೇಳಿದ್ದಾರೆ.

ಗಾಯಗೊಂಡ ಚೆನ್ನೈಯಿನ್ ವಿರುದ್ಧ ನಾರ್ಥ್ ಈಸ್ಟ್ ಜಯದ ಗುರಿಗಾಯಗೊಂಡ ಚೆನ್ನೈಯಿನ್ ವಿರುದ್ಧ ನಾರ್ಥ್ ಈಸ್ಟ್ ಜಯದ ಗುರಿ

ಬೆಂಗಲೂರು ಕೋಚ್ ತಮ್ಮ ತಂಡ ಮತ್ತೆ ಟ್ರ್ಯಾಕ್ ಗೆ ಮರಳಲಿದೆ ಎಂಬುದರ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದಾರೆ, "ನಾವು ಮಾನಸಿಕ ಹಾಗೂ ದೈಹಿಕವಾಗಿ ಬಲಿಷ್ಠರಾಗಿರಬೇಕು. ಕೆಲವು ತಂಡಗಳೂ ಋತುವಿಗೆ ಪೂರ್ವ ತಯಾರಿ ಮಾಡಲು ಸಾಕಷ್ಟು ಸಮಯ ಗಳಿಸಿದ್ದವು. ಆದರೆ ಮೂರು ಅಂಕ ಗಳಿಸಲು ಅವುಗಳಿಂದ ಆಗಿಲ್ಲ," ಎಂದರು.

ಮಾಜಿ ಚಾಂಪಿಯನ್ ತಂಡ ಸೆಟ್ -ಪೀಸ್ ಮೂಲಕ ಶೇ.80ರಷ್ಟು (4) ಗೋಲು ಗಳಿಸಿವೆ. ಇದು ಕೇರಳ ತಂಡಕ್ಕೆ ಆತಂಕವೆನಿಸಲಿದೆ. ಲೀಗ್ ನಲ್ಲಿ ಕೇರಳದ ಡಿಫೆನ್ಸ್ ವಿಭಾಗ ಅಷ್ಟು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಬಿಎಫ್ ಸಿ ವಿರುದ್ಧ ಇನ್ನೂ ಕ್ಲೀನ್ ಶೀಟ್ ಸಾಧನೆ ಮಾಡಿಲ್ಲ.

ಟಾರ್ಗೆಟ್ ಕಡೆಗೆ 13 ಬಾರಿ ಗುರಿ ಇಟ್ಟರೂ ಕೇರಳ ಬ್ಲಾಸ್ಟರ್ಸ್ ಎದುರಾಳಿ ತಂಡಕ್ಕೆ ಆರು (ಎರನೇ ಅತಿ ಹೆಚ್ಚು) ಗೋಲುಗಳನ್ನು ಗಳಿಸಲು ಅವಕಾಶ ಮಾಡಿಕೊಟ್ಟಿದೆ. ಕೋಚ್ ಕಿಬು ವಿಕುನಾ ಈ ಬಗ್ಗೆ ಗಮನ ಹರಿಸಿದ್ದಾರೆ, "ನಾವು ಈ ವಿಷಯದಲ್ಲಿ ಕೆಲಸ ಮಾಡುತ್ತಿದ್ದೇವೆ, ಮುಂದಿನ ಪಂದ್ಯದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ ಇದೆ. ನಾಲ್ಕು ಪಂದ್ಯಗಳಲ್ಲಿ ನಾವು ಎರಡು ಅಂಕಗಳನ್ನು ಗಳಿಸುತ್ತೇವೆ ಎಂದು ಊಹಿಸಿರಲಿಲ್ಲ. ಆದರೆ ಹಾಗೆ ಆಗಿದೆ," ಎಂದರು.

" ನಾವು ವಿಭಿನ್ನವಾದ ಸಾಧ್ಯತೆಗಳ ಬಗ್ಗೆ ಯತ್ನಿಸುತ್ತಿದ್ದೇವೆ. ನಾವು ಸುಧಾರಿಸಕೊಳ್ಳಲು ಯತ್ನಿಸುತ್ತೇವೆ. ಪಂದ್ಯದ ಕೊನೆಯ ಮೂರನೇ ಭಾಗದಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ. ನಾವು ಧೈರ್ಯವಂತರಾಗಬೇಕು, ಕಠಿಣ ಶ್ರಮ ವಹಿಸಬೇಕು. ನಮ್ಮಲ್ಲಿ ಆತ್ಮವಿಶ್ವಾಸವಿದೆ. ನಮ್ಮದು ಉತ್ತಮ ಆಟಗಾರರಿಂದ ಕೂಡಿದ ಉತ್ತಮ ತಂಡ ಎಂಬುದು ಗೊತ್ತಿದೆ," ಎಂದರು. ಅಂತಿಮ ಹಂತದಲ್ಲಿ ಗೋಲು ಗಳಿಸಬೇಕಾದ ಅಗತ್ಯ ಇದೆ ಎಂದು ಅವರು ಮತ್ತೊಮ್ಮೆ ಹೇಳಿದರು. ಗಾಯಗೊಂಡ ಸರ್ಗಿಯೊ ಸಿಡೊಂಚ ಅವರು ನಾಳೆಯ ಪಂದ್ಯದಲ್ಲಿ ಆಡುವುದಿಲ್ಲ. ಗಾಯದಿಂದ ಚೇತರಿಸಿಕೊಳ್ಳಲು ಅವರು ಸ್ಪೇನ್ ಗೆ ತೆರಳಿದ್ದಾರೆ.

Story first published: Monday, December 14, 2020, 11:12 [IST]
Other articles published on Dec 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X